ಹೈದರಾಬಾದ್: ಮುಂದಿನ 20 ವರ್ಷದಲ್ಲಿ ದಕ್ಷಿಣ ಏಷ್ಯಾದಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ಮಾರುಕಟ್ಟೆಯಾಗಿದ್ದು, ಶೇ 8ರಷ್ಟು ವಾಯು ಪ್ರಯಾಣಿಕರ ಸಂಖ್ಯೆ ಹೆಚ್ಚಲಿದೆ ಎಂದು ಬೋಯಿಂಗ್ ಅಂದಾಜಿಸಿದೆ. ಇದರಲ್ಲಿ ಭಾರತವೂ ಪ್ರಮುಖವಾಗಿದೆ ಎಂದು ಬೋಯಿಂಗ್ನ ಕಮರ್ಷಿಯಲ್ ಮಾರ್ಕೆಟ್ ಉಪಾಧ್ಯಕ್ಷ ದರ್ರೆನ್ ಹುಲ್ಟ್ಸ್ ತಿಳಿಸಿದ್ದಾರೆ. ಈ ಸಂಬಂದ ಮಾತನಾಡಿರುವ ಅವರು, ದೇಶೀಯ ಆರ್ಥಿಕತೆ ಬಲವಾಗಿ ಬೆಳವಣಿಗೆಯಾಗುತ್ತಿದೆ. ಮಧ್ಯಮ ವರ್ಗ ಆದಾಯ ಗುಂಪುಗಳು ವೇಳವಾಗಿ ವಿಸ್ತರಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ವಾಯುಯಾನ ಕೂಡ ಬೆಳವಣಿಗೆ ಕಾಣಿತ್ತಿದೆ ಎಂದರು.
ವಿಂಗ್ಸ್ ಇಂಡಿಯಾ 2024ದಲ್ಲಿ ಮಾತನಾಡಿದ ಅವರು, ದಕ್ಷಿಣ ಏಷ್ಯಾಕ್ಕೆ 2042ರ ವೇಳೆಗೆ 2,705 ಏರ್ಕ್ರಾಫ್ಟ್ಗಳು ಬೇಕಾಗಿದೆ. ಭಾರತದಲ್ಲಿ 2,500 ಹೊಸ ಏರ್ಕ್ರಾಫ್ಟ್ಗಳು ಬೇಕಿದೆ. ಇವುಗಳಲ್ಲಿ ಶೇ 86ರಷ್ಟು ವಿಮಾನಗಳು ಸಣ್ಣ ಅಗಲವನ್ನು ಹೊಂದಿದೆ. ಶೇ 28ರಷ್ಟು ಹಳೆಯ ವಿಮಾನಗಳನ್ನು ಅಭಿವೃದ್ಧಿ ತಂತ್ರಜ್ಞಾನದ ವಿಮಾನಗಳೊಂದಿಗೆ ಬದಲಾಯಿಸಬೇಕಿದೆ. ಭಾರತದ ಜನಸಂಖ್ಯೆಯು ವಿಮಾನಯಾನದ ಬೆಳವಣಿಗೆಗೆ ಪೂರಕವಾಗಿದೆ ಎಂದರು
2019ಕ್ಕೂ ಮೊದಲು ಅಂದರೆ ಕೋವಿಡ್ ಪೂರ್ವಕ್ಕೆ ಹೋಲಿಕೆ ಮಾಡಿದಾಗ 2023ರಲ್ಲಿ ಮಾಸಿಕ ದೇಶಿಯ ಪ್ರಯಾಣಿಕರಲ್ಲಿ ಶೇ 7ರಷ್ಟು ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಶೇ 30ರಷ್ಟು ಹೆಚ್ಚಾಗಿದೆ. ಇದು ಮತ್ತೆ ಮುಂಚೂಣಿಗೆ ಬಂದಿದೆ. 2019ಕ್ಕೆ ಹೋಲಿಸಿದಾಗ 2024ರ ಏಪ್ರಿಲ್ ಹೊತ್ತಿಗೆ ದೂರ ಪ್ರಯಾಣದ ಜನರ ಸಂಖ್ಯೆ ಶೇ 50ರಷ್ಟು ಹೆಚ್ಚಿಸಲಿದೆ. ಭಾರತದ ವಿಮಾನಗಳು ಕಡಿಮೆ ಟಿಕೆಟ್ ದರ, ಆಫರ್ ಸೇವೆ ಬೇಡಿಕೆಯನ್ನು ಹೆಚ್ಚಿಸಿದೆ. ಕೋವಿಡ್ಗೂ ಮೊದಲು ಹೋಲಿಕೆ ಮಾಡಿದಾಗ ಶೇ 90ರಷ್ಟು ಸೀಟ್ಗಳು ಭರ್ತಿಯಾಗುತ್ತಿದೆ.
ಜಾಗತಿಕ ಮಾರುಕಟ್ಟೆ:ಜಾಗತಿಕವಾಗಿ ಮುಂದಿನ 20 ವರ್ಷದಲ್ಲಿ 42,592 ಹೊಸ ವಿಮಾನಗಳು ಬೇಕಾಗಿದೆ. ದಕ್ಷಿಣ ಏಷ್ಯಾದಲ್ಲಿ 37 ಸಾವಿರ ಪೈಲಟ್, 38,000 ತಾಂತ್ರಿಕರು ಬೇಕಾಗಿದ್ದಾರೆ. ಭಾರತದಲ್ಲಿ 15 ಕಾರ್ಗೋಗಳು ಇದ್ದು, ಇದು ಮುಂದಿನ 20 ವರ್ಷದಲ್ಲಿ ಇದು 80ಕ್ಕೆ ತಲುಪಲಿದೆ. ಕೋವಿಡ್ನಿಂದಾಗಿ ಕಳೆದ ಎರಡು ಮೂರು ವರ್ಷದಲ್ಲಿ 2 ಸಾವಿರ ವಿಮಾನಗಳು ತಡವಾಗಿ ಸೇವೆ ನೀಡುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.