ಜೈಪುರ್: ಫಾಸ್ಟ್ ಫುಡ್ ಮತ್ತು ಜಂಕ್ ಆಹಾರಗಳಿಂದ ಮಕ್ಕಳನ್ನು ದೂರವಿಡಬೇಕು ಎಂದು ನಿರ್ಧರಿಸಿರುವ ರಾಜಸ್ಥಾನ ಶಿಕ್ಷಣ ಇಲಾಖೆ ಇದಕ್ಕಾಗಿ ಹೊಸ ಹೆಜ್ಜೆಯನ್ನು ಮುಂದಿಟ್ಟಿದೆ. ಶಾಲೆಗಳಲ್ಲಿ ಈ ಕುರಿತು ಜಾಗೃತಿ ಕಾರ್ಯಕ್ರಮ ನಡೆಸುವ ಜೊತೆಗೆ ಆರೋಗ್ಯ ಕ್ಲಬ್ಗಳನ್ನು ಆಯೋಜಿಸುತ್ತಿದೆ. ಈ ಹೆಲ್ತ್ ಕ್ಲಬ್ನಲ್ಲಿ ಮಕ್ಕಳಿಗೆ ಫಾಸ್ಟ್ ಫುಡ್ಗಳು ಹೇಗೆ ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತವೆ ಎಂದು ತಿಳಿಸುವ ಪ್ರಯತ್ನ ನಡೆಸಿದೆ.
ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ಗಳು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ. ಪೋಷಕರು ಕೂಡ ಈ ಬಗ್ಗೆ ಅರಿವು ಹೊಂದಿದ್ದರೂ, ಮಕ್ಕಳನ್ನು ಇದರಿಂದ ದೂರವಿಡಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಈ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆ ಹೊರಲು ಮುಂದಾಗಿದೆ.
ಸರ್ಕಾರದಿಂದ ಶಾಲೆಗಳಲ್ಲಿ ಹೆಲ್ತ್ ಕ್ಲಬ್ ರಚಿಸಲಾಗಿದ್ದು, ಇದರಲ್ಲಿ ಮಕ್ಕಳಿಗೆ ಆಹಾರ ಮತ್ತು ಆರೋಗ್ಯದ ಕುರಿತು ಅರಿವು ಮೂಡಿಸುವ ಯತ್ನ ನಡೆಸಲಾಗಿದೆ. ಹಾಗೇ ಮಾನಸಿಕವಾಗಿ ಮಕ್ಕಳನ್ನು ಇಂತಹ ಆರೋಗ್ಯದಿಂದ ದೂರವಿರುವ ಪ್ರಯತ್ನ ನಡೆಸಿದೆ. ಇಲಾಖೆ ಆದೇಶದ ಪ್ರಕಾರ, ಶಾಲೆಗಳಲ್ಲಿರುವ ಆರೋಗ್ಯ ಕ್ಲಬ್ಗಳಲ್ಲಿ ಮಕ್ಕಳು ತರುವ ಆಹಾರದ ಬಗ್ಗೆ ಶಿಕ್ಷಕರು ಮತ್ತು ಸಹಪಾಠಿಗಳಿಗೆ ತಿಳಿಹೇಳುವ ಪ್ರಯತ್ನ ನಡೆಸಲಾಗಿದೆ.
ಹೆಲ್ತ್ ಕ್ಲಬ್ ಕಾರ್ಯ :
- ಪ್ರತಿಯೊಂದು ಹೆಲ್ತ್ ಕ್ಲಬ್ನಲ್ಲಿ 15 ಸದಸ್ಯರಿರುತ್ತಾರೆ.
- ಇದರಲ್ಲಿ ಓರ್ವ ಶಿಕ್ಷಕರನ್ನು ನೋಡಲ್ ಅಧಿಕಾರಿಯಾಗಿ ಮಾಡಲಾಗುವುದು.
- ದೈಹಿಕ ಶಿಕ್ಷಕರು ಮತ್ತು ಸಮಾಜ ವಿಜ್ಞಾನ ಶಿಕ್ಷಕರು ಈ ಕ್ಲಬ್ ಸದಸ್ಯರಾಗಿರುತ್ತಾರೆ.
- ಪ್ರತಿಯೊಂದು ತರಗತಿಯಿಂದ ಓರ್ವ ವಿದ್ಯಾರ್ಥಿ ಕ್ಲಬ್ ಪ್ರತಿನಿಧಿಸುತ್ತಾರೆ.
- ಪ್ರತಿ ತಿಂಗಳು ಕಡ್ಡಾಯವಾಗಿ ಸಭೆ ನಡೆಸಲಾಗುತ್ತದೆ.
- ಸಭೆಯಲ್ಲಿ ಆದ ಕೆಲಸ ಮತ್ತು ಮುಂದಿನ ಕೆಲಸದ ಸಿದ್ಧತೆಗಳ ಕುರಿತು ಕಾರ್ಯತಂತ್ರ ರೂಪಿಸಲಾಗುವುದು
- ಆಹಾರ ಸುರಕ್ಷತೆ ಮತ್ತು ಸರಿಯಾದ ಡಯಟ್ ಮೇಲೆ ಗಮನ ಹರಿಸಲಾಗುತ್ತದೆ
- ಶಾಲೆಯನ್ನು ತಂಬಾಕು ಮುಕ್ತಾವಾಗಿಸುವ ನಿಟ್ಟಿನಲ್ಲಿ ಪ್ರಯತ್ನ
- ಈ ಮೂಲಕ ಮಕ್ಕಳಿಗೆ ಫಾಸ್ಟ್ ಫುಡ್ನಿಂದ ದೂರುವಿರುವಂತೆ ಜಾಗೃತಿ ಮೂಡಿಸಲಾಗುವುದು
- ಆರೋಗ್ಯಕರ ತಿಂಡಿಗಳ ಬಗ್ಗೆ ಮಕ್ಕಳ ಗಮನ ಕೇಂದ್ರಿಕರಿಸುವುದು.
ಈ ಕುರಿತು ಮಾತನಾಡಿದ ಪ್ರಾಥಮಿಕ ಶಾಲಾ ನಿರ್ದೇಶಕರಾದ ಸೀತಾರಾಮ್ ಜಾಟ್, ಆರೋಗ್ಯ ಕ್ಲಬ್ಗಳು ಮಕ್ಕಳಲ್ಲಿ ಆರೋಗ್ಯಕರ ಆಹಾರದ ಕುರಿತು ಅರಿವು ಮೂಡಿಸುತ್ತವೆ. ಮಕ್ಕಳು ಶಾಲಾ ವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೊಂದುತ್ತಾರೆ. ಇದರಿಂದ ಅವರನ್ನು ಹಾಗೂ ಕುಟುಂಬದವರನ್ನು ಆರೋಗ್ಯಕರವಾಗಿಸುತ್ತಾರೆ. ಕುಟುಂಬಗಳು ಕೂಡ ಈ ಆರೋಗ್ಯ ಕ್ಲಬ್ ಬಗ್ಗೆ ಮಾಹಿತಿ ಹೊಂದುವಂತೆ ಪ್ರೇರೇಪಿಸಲಾಗುವುದು. ಈ ಪ್ರಯತ್ನ ಮಕ್ಕಳನ್ನು ದುಶ್ಚಟಗಳಿಂದ ದೂರುವಿರಿಸಲು ಸಹಾಯ ಮಾಡುತ್ತದೆ.
ಶಿಕ್ಷಕರೊಂದಿಗೆ ಪೋಷಕರ ಸಂಪರ್ಕ : ಈ ಕುರಿತು ಮಾತನಾಡಿರುವ ಶಿಕ್ಷಣತಜ್ಞರಾದ ಡಾ ಮೀನಾಕ್ಷಿ ಮಿಶ್ರಾ, ಮಕ್ಕಳು ಪೋಷಕರಿಗಿಂತ ಶಿಕ್ಷಕರ ಮಾತನ್ನು ಕೇಳುತ್ತಾರೆ. ಇಂತಹ ಸಂದರ್ಭದಲ್ಲಿ ಅನಾರೋಗ್ಯಕರ ಆಹಾರ ಬಗ್ಗೆ ತಿಳಿ ಹೇಳುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಇದರ ಗಂಭೀರತೆಯನ್ನು ವಿವರಿಸಲಾಗುವುದು. ಜಂಕ್ ಆಹಾರಗಳು ಮಕ್ಕಳಿಗೆ ಪೋಷಕಾಂಶವನ್ನು ಒದಗಿಸುವುದಿಲ್ಲ. ಜೊತೆಗೆ ಇದು ಅವರ ಪ್ರತಿರೋಧಕತೆಯನ್ನು ಕುಗ್ಗಿಸಿ, ಅವರು ಪದೆ ಪದೇ ಹುಷಾರು ತಪ್ಪುವಂತೆ ಮಾಡುತ್ತದೆ. ಇದೇ ಕಾರಣಕ್ಕೆ ಶಾಲೆಗಳಲ್ಲಿ ಆರೋಗ್ಯ ಕ್ಲಬ್ ಆರಂಭಿಸಲಾಗಿದೆ. ಇದರಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಪರ್ಕದಲ್ಲಿರುವಂತೆ ಪೋಷಕರು ಸಂಪರ್ಕದಲ್ಲಿರುತ್ತಾರೆ. ಇದರಿಂದ ಪೋಷಕರು ಅಡುಗೆ ಮನೆಯಲ್ಲಿ ಆರೋಗ್ಯಕರ ಅಭ್ಯಾಸ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.
ಉತ್ತಮ ಆರೋಗ್ಯದ ಉದ್ದೇಶ : ಶಿಕ್ಷಣ ಇಲಾಖೆಯ ಈ ಯೋಜನೆಗೆ ಶಿಕ್ಷಣ ಸಂಸ್ಥೆಗಳಿಂದ ಸ್ವಾಗತ ದೊರೆತಿದೆ. ರಾಜಸ್ಥಾನ ಪ್ರಾಥಮಿಕ ಮಾಧ್ಯಮಿಕ ಶಿಕ್ಷಣ ಸಂಘದ ರಾಜ್ಯಾಧ್ಯಕ್ಷರಾದ ವಿಪಿನ್ ಶರ್ಮಾ ಮಾತನಾಡಿ, ಶಿಕ್ಷಣ ಇಲಾಖೆಯ ಈ ಯೋಜನೆ ಮಕ್ಕಳಲ್ಲಿ ಆರೋಗ್ಯಕರ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದು, ಇದನ್ನು ಪೂರ್ಣಗೊಳಲಾಗುವುದು ಎಂದರು.
ಮಕ್ಕಳು ಇಂದು ಸಣ್ಣ ವಯಸ್ಸಿನಲ್ಲಿ ಜಂಕ್ಫುಡ್ ಸೇವನೆಗೆ ಮುಂದಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಕಾರ್ಯಕ್ರಮದಿಂದ ಮಕ್ಕಳು ದುಶ್ಚಟ ಹಾಗೂ ಫಾಸ್ಟ್ ಫುಡ್ನಿಂದ ತಮ್ಮನ್ನು ತಾವೇ ದೂರು ಇರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಳೆದ ವರ್ಷವೇ ಶಾಲಾ ಶಿಕ್ಷಣ ಇಲಾಖೆ ಪೇಪರ್ಲೆಸ್ ಡಿಜಿಟಲ್ ಆರೋಗ್ಯಕರ ಸಮೀಕ್ಷೆ ನಡೆಸಿತ್ತು. ಇದರಲ್ಲಿ ಸರ್ಕಾರ ಮಕ್ಕಳು ಆರೋಗ್ಯಕರ ಅಗತ್ಯದ ಕುರಿತು ಪತ್ತೆ ಮಾಡಿತ್ತು. ಈ ದತ್ತಾಂಶದ ಪ್ರಕಾರ, ಮಕ್ಕಳಲ್ಲಿ ಪೋಷಕಾಂಶ ಕೊರತೆ ಕಂಡು ಬಂದಿತ್ತು. ಆರಂಭದಲ್ಲಿ ಇವುಗಳ ಚಿಕಿತ್ಸೆ ಅಗತ್ಯ ಎಂಬುದು ಕಂಡಿತು. ಇಂತಹ ಮಕ್ಕಳ ಸಂಖ್ಯೆ ಕಡಿಮೆ ಮಾಡುವಲ್ಲಿ ಆರೋಗ್ಯ ಕ್ಲಬ್ಗಳು ಕಾರ್ಯ ನಿರ್ವಹಿಸಲಿವೆ ಎಂದರು.
ಇದನ್ನೂ ಓದಿ: ಜಂಕ್ಫುಡ್ ಸೇವನೆಯಿಂದ ಮಕ್ಕಳ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಕುತ್ತು