ಮುಂಗೇರ್, ಬಿಹಾರ:ಜಿಲ್ಲಾ ಕೇಂದ್ರದಿಂದ 25 ಕಿಲೋಮೀಟರ್ ದೂರದಲ್ಲಿದೆ ಬಾರಿಯಾರ್‌ಪುರ ಬ್ಲಾಕ್‌ನ ಕಲ್ಯಾಣಪುರ ಗ್ರಾಮ. ಅಂದ ಹಾಗೆ ಈ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿರುವ ದುರ್ಗಾದೇವಿ ಮಂಟಪ ಇಡೀ ರಾಜ್ಯದ ಆಕರ್ಷಣೆಯ ಕೇಂದ್ರವಾಗಿದೆ. ಇದನ್ನು ನೋಡಲು ಸುತ್ತಮುತ್ತಲಿನ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಪ್ರತಿ ವರ್ಷ ವಿವಿಧ ವಿಷಯಗಳನ್ನು ಆಧರಿಸಿ ಆಕರ್ಷಕ ಮತ್ತು ಭವ್ಯವಾದ ಪೂಜಾ ಮಂಟಪವನ್ನು ನಿರ್ಮಾಣ ಮಾಡಲಾಗುತ್ತದೆ. ಈ ಮಂಟಪ ಬಿಹಾರಕ್ಕೂ ವಿಶೇಷ ಖ್ಯಾತಿಯನ್ನು ತಂದು ಕೊಡುತ್ತಿದೆ.
ಬಿಹಾರದಲ್ಲಿ ಮೈದೆಳೆದ ದುಬೈನ ಬುರ್ಜ್ ಖಲೀಫಾ: ಕಳೆದ 360 ವರ್ಷಗಳಿಂದ ಮುಂಗೇರ್ನ ಕಲ್ಯಾಣಪುರದಲ್ಲಿ ಬಡಿ ದುರ್ಗಾದೇವಿಯ ವಿಗ್ರಹವನ್ನು ಪೂಜಿಸಲಾಗುತ್ತಿದೆ. ವಿಶ್ವಾದ್ಯಂತ ಹೋಮಿಯೋಪತಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಡಾ.ನಿತೀಶ್ ದುಬೆ ಹಾಗೂ ಯೂತ್ ಕ್ಲಬ್ ಸದಸ್ಯರು ಕಳೆದ 10 ವರ್ಷಗಳಿಂದ ಭವ್ಯವಾದ ಮಂಟಪಗಳ ನಿರ್ಮಾಣ ಮತ್ತು ಟ್ಯಾಬ್‌ಲಾಕ್ಸ್‌ನೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬರಲಾಗುತ್ತಿದೆ. ಈ ಬಾರಿ ಕಲ್ಯಾಣಪುರದ ದುರ್ಗಾ ಪೂಜೆ ನಿಮಿತ್ತ ಕೈಲಾಸ ಮಾನಸ ಸರೋವರ ಪರ್ವತ, 12 ಜ್ಯೋತಿರ್ಲಿಂಗಗಳ ದೈವಿಕ ರೂಪ ಮತ್ತು ದುಬೈನ ಬುರ್ಜ್ ಖಲೀಫಾದ ಪ್ರತಿಕೃತಿಗಳನ್ನು ನಿರ್ಮಾಣ ಮಾಡಿ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗುವಂತೆ ಮಾಡಲಾಗಿದೆ.
ಬಿಹಾರದ ಗುರುತಾಗಿರುವ ಅತಿ ದೊಡ್ಡ ಮಂಟಪ: ಕೋಲ್ಕತ್ತಾ, ಮಧುಪುರ್, ಜಾರ್ಖಂಡ್ ನ ಗಿರಿದಿಹ್ ನ ಅನೇಕ ಕುಶಲಕರ್ಮಿಗಳು, ಕೈಲಾಸ ಮಾನಸ ಸರೋವರ, 12 ಜ್ಯೋತಿರ್ಲಿಂಗಗಳು, ಬುರ್ಜ್ ಖಲೀಫಾ, ದುಬೈ ಅಕ್ವೇರಿಯಂ ರೂಪದಲ್ಲಿ ಭವ್ಯವಾದ ಮತ್ತು ದೈವಿಕ ಮಂಟಪಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ದೇವಿಯ ಆರಾಧನೆಯ ಜೊತೆ ಜೊತೆಗೆ ವಿಶ್ವದ ಅದ್ಬುತಗಳನ್ನು ಮರು ನಿರ್ಮಾಣ ಮಾಡುವ ಮೂಲಕ ಅವುಗಳಿಗೆ ಜೀವಂತಿಕೆ ತುಂಬುತ್ತಿದ್ದಾರೆ ಎಂದು ದೇವಸ್ಥಾನ ಸಮಿತಿ ಸದಸ್ಯ ಪ್ರಶಾಂತ್ ಹೇಳಿದ್ದಾರೆ. ಈ ಬಾರಿ 150 ಅಡಿ ಎತ್ತರದ ಬುರ್ಜ್ ಖಲೀಫಾದ ಪ್ರತಿರೂಪ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಬಾರಿ ಎಲ್ಲ ಪುರಾತನ ದೇವಾಲಯಗಳ ದರ್ಶನ:ಈ ಬಾರಿ ದುರ್ಗಾಪೂಜೆ ವೇಳೆ ಪುರಾತನ ದೇವಾಲಯಗಳ ದರ್ಶನವೂ ಆಗಲಿದೆ. ದೇವಸ್ಥಾನ ಪ್ರವೇಶಿಸುವಾಗ ದೇಶದ ನಾನಾ ದೇವಾಲಯಗಳ ಮಾದರಿಗಳನ್ನು ಆಧರಿಸಿ ರಸ್ತೆಯಲ್ಲಿ ದ್ವಾರಗಳನ್ನು ನಿರ್ಮಿಸಲಾಗಿದೆ. ಪಂದಲ್ ಮರದಿಂದ ಇವುಗಳನ್ನು ನಿರ್ಮಾಣ ಮಾಡಲಾಗಿದೆ. ಕಬ್ಬಿಣದಿಂದ ಮಾಡಲಾದ ಪ್ಲೈ, ಬಿದಿರಿನ 250 ಎಸ್‌ಆರ್‌ಪಿ ದೀಪಗಳನ್ನು ಅಳವಡಿಸಲಾಗಿದ್ದು , ಅದರ ಹೊಳಪು ಮತ್ತು ಬೆಳಕು ದೂರದಿಂದಲೇ ಗೋಚರಿಸುತ್ತದೆ ಅಂತಾರೆ ಯೂತ್ ಕ್ಲಬ್ ಕಲ್ಯಾಣಪುರ ದೇವಸ್ಥಾನ ಸಮಿತಿ ಸದಸ್ಯ ಪ್ರಶಾಂತ್.
ಶಿವನ 11 ರೂಪಗಳು: ಮಧುಪುರದ ಗಿರಿದಿಹ್‌ನ ಹರ್ಮಟ್ ಮತ್ತು ಲೋಕಮಾನ್ ಎಂಬ ಕುಶಲಕರ್ಮಿಗಳು ದುಬೈನ ಬುರ್ಜ್ ಖಲೀಫಾ ರೂಪದಲ್ಲಿ ಕಂಡುಬರುವ ಮಂಟಪವನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೇ 150 ಅಡಿ ಅಗಲ, 50 ಅಡಿ ಆಳ ಮತ್ತು 100 ಅಡಿ ಎತ್ತರದ ಕೈಲಾಸ ಮಾನಸ ಸರೋವರದ ಪ್ರತಿರೂಪವನ್ನು ಮಾಡಿದ್ದಾರೆ. 5 ಸಾವಿರ ಬಿದಿರುಗಳನ್ನು ನೆಡಲಾಗಿದೆ. ಭವ್ಯವಾದ ಮತ್ತು ದೈವಿಕ ಕೈಲಾಸ ಮಾನಸ ಸರೋವರ ಪರ್ವತದ ಮೇಲೆ ಶಿವನ 11 ರೂಪಗಳು ಗೋಚರಿಸುವಂತೆ ಮಾಡಲಾಗಿದೆ.