ಕರ್ನಾಟಕ

karnataka

ETV Bharat / bharat

8 ವರ್ಷದಿಂದ ಕೆಲಸಕ್ಕಿದ್ದ ಮಹಿಳೆಯಿಂದ ಮೂತ್ರ ಬಳಸಿ ಅಡುಗೆ ತಯಾರಿಸಿದ ಆರೋಪ; ದೂರು ದಾಖಲು

ಉತ್ತರಪ್ರದೇಶದ ಗಾಜಿಯಾಬಾದ್​ನಲ್ಲಿ ಮನೆಕೆಲಸದಾಕೆ ಅಡುಗೆಯಲ್ಲಿ ತನ್ನದೇ ಮೂತ್ರ ಬಳಸಿದ ಪ್ರಕರಣ ದಾಖಲಾಗಿದೆ. ಈ ಕುರಿತ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ.

By ETV Bharat Karnataka Team

Published : 4 hours ago

Updated : 2 hours ago

FOOD ADULTERATION
ಪೊಲೀಸ್​ ಠಾಣೆ (ETV Bharat)

ನವದೆಹಲಿ /ಘಾಜಿಯಾಬಾದ್:ಅನ್ನಂ ಪರಬ್ರಹ್ಮ ಸ್ವರೂಪಂ ಎನ್ನುತ್ತೇವೆ. ಆಹಾರವನ್ನು ಗೌರವದಿಂದ ಕಾಣಬೇಕು ಮತ್ತು ಸ್ವಚ್ಛತೆ ಕಾಪಾಡುವುದೂ ಮುಖ್ಯ. ಆದರೆ, ಈ ಮಧ್ಯೆ ಆಹಾರ ಕಲಬೆರಕೆ ಪ್ರಕರಣಗಳು ಯಥೇಚ್ಛವಾಗಿ ದಾಖಲಾಗುತ್ತಿವೆ. ಉತ್ತರಪ್ರದೇಶದಲ್ಲಿ ಮನೆಕೆಲಸದಾಕೆ ಅಡುಗೆಯಲ್ಲಿ ಮೂತ್ರ ಬಳಸಿದ ಆರೋಪ ಕೇಳಿ ಬಂದಿದ್ದು, ಪ್ರಕರಣ ದಾಖಲಾಗಿದೆ.

ಉತ್ತರಪ್ರದೇಶದ ಗಾಜಿಯಾಬಾದ್​​ನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲೇ ಆಕೆ ಮೂತ್ರವನ್ನು ಸಂಗ್ರಹಿಸಿ ಅಡುಗೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಲಸದಾಕೆಯ ಈ ಕೃತ್ಯದಿಂದ ಕುಟುಂಬಸ್ಥರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಕರಣದ ವಿವರ:ಗಾಜಿಯಾಬಾದ್​ನ ನಿವಾಸಿಯೊಬ್ಬರು ತಮ್ಮ ಮನೆಕೆಲಸದಾಕೆ ಅಡುಗೆಯಲ್ಲಿ ಮೂತ್ರ ಬಳಸಿದ್ದಾಳೆ. ಇದಕ್ಕೆ ಸಿಸಿಟಿವಿ ದೃಶ್ಯಾವಳಿ ಸಾಕ್ಷಿ ಇದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದಂತೆ, ಕೆಲಸದಾಕೆ ಮೂತ್ರವನ್ನು ಅಡುಗೆ ಮನೆಯಲ್ಲೇ ಸಂಗ್ರಹಿಸಿದ್ದಾಳೆ. ಬಳಿಕ ಅದನ್ನು ಪಾತ್ರೆಯಲ್ಲಿ ತರುತ್ತಿರುವುದು ಕಂಡುಬಂದಿದೆ.

ದೂರುದಾರರ ಪ್ರಕಾರ, ಮಹಿಳೆ ಕಳೆದ 8 ವರ್ಷಗಳಿಂದ ನಮ್ಮ ಮನೆಯಲ್ಲಿ ಕೆಲಸಕ್ಕಿದ್ದಾಳೆ. ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ತುತ್ತಾದ ಕಾರಣ, ಆಹಾರದಲ್ಲಿ ಸಮಸ್ಯೆ ಇದೆಯಾ ಎಂದು ಅನುಮಾನಿಸಲಾಯಿತು. ಬಳಿಕ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ, ಕೆಲಸದಾಕೆ ಅಡುಗೆಗೆ ಮೂತ್ರ ಬಳಸಿದ್ದು ಕಂಡುಬಂದಿದೆ. ನಮ್ಮ ಅನಾರೋಗ್ಯಕ್ಕೆ ಕಾರಣವಾದ ಮಹಿಳೆ ವಿರುದ್ಧ ಕ್ರಮ ಜರುಗಿಸಿ ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಆರೋಪಿ ಮಹಿಳೆಯ ವಿಚಾರಣೆ:ಕುಟುಂಬಸ್ಥರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಮುಖೇಶ್ ಕುಮಾರ್ ಪ್ರಕಾರ, ಘಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ ದೂರು ಮತ್ತು ಲಭ್ಯವಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಘಟನೆಯ ವಿಡಿಯೋ ವೀಕ್ಷಿಸಿದ ನಂತರ, ಕುಟುಂಬಸ್ಥರು ಎಚ್ಚರಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮನೆ ಕೆಲಸದಾಕೆಯನ್ನು ವಿಚಾರಣೆ ನಡೆಸಲಾಗುತ್ತಿದೆ. ಕುಟುಂಬದವರ ಆರೋಗ್ಯ ಸ್ಥಿತಿ ಗಮನದಲ್ಲಿಟ್ಟುಕೊಂಡು ಅಗತ್ಯಬಿದ್ದರೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಜ್ಯೂಸ್​​ನಲ್ಲಿ ಮೂತ್ರ ಮಿಕ್ಸ್​:ಈ ಹಿಂದೆಯೂ ಗಾಜಿಯಾಬಾದ್‌ನಲ್ಲಿ ಜ್ಯೂಸ್ ಕೇಂದ್ರದಲ್ಲಿ ಮಾಲೀಕರು ಮೂತ್ರ ಬೆರೆಸಿ ಜ್ಯೂಸ್ ಮಾರಾಟ ಮಾಡಿದ ಘಟನೆ ನಡೆದಿತ್ತು. ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಜ್ಯೂಸ್​ ಕೇಂದ್ರದಲ್ಲಿ ತಪಾಸಿಸಿದಾಗ ಮೂತ್ರ ತುಂಬಿದ್ದ ಬಾಟಲಿಗಳು ಪತ್ತೆಯಾಗಿದ್ದವು.

ರಾಜ್ಯದಲ್ಲಿ ಆಹಾರ ಕಲಬೆರಕೆ ಹೆಚ್ಚುತ್ತಿರುವ ಕಾರಣ ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಿದೆ. ಜೊತೆಗೆ 'ಆಹಾರ ಕಲಬೆರಕೆ ತಡೆ ಸುಗ್ರೀವಾಜ್ಞೆ'ಗೂ ಮುಂದಾಗಿದೆ.

ಇದನ್ನೂ ಓದಿ:ದೆಹಲಿಯಲ್ಲಿ ಜ್ಯೂಸ್​ ಕಲಬೆರಕೆ ಆರೋಪ: ಬಣ್ಣ ಮಿಶ್ರಣ ಮಾಡಿ ದಾಳಿಂಬೆ ರಸವೆಂದು ಮಾರಾಟ! - JUICE ADULTERATION

Last Updated : 2 hours ago

ABOUT THE AUTHOR

...view details