ಹೈದರಾಬಾದ್: ಐಟಿ ಕ್ಷೇತ್ರ ಸಾಕಷ್ಟು ಮುಂದುವರಿದಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಅಷ್ಟೇ ಪ್ರಮಾಣದಲ್ಲಿ ಸೈಬರ್ ವಂಚನೆಗಳು ನಡೆಯುತ್ತಿರುವುದು ಆತಂಕಕಾರಿಯಾಗಿದೆ. ಸೈಬರ್ ವಂಚಕರು ಕೆಲವರನ್ನು ಗುರಿಯಾಗಿಸಿಕೊಂಡು, ಅವರ ಬ್ಯಾಂಕ್ ಖಾತೆಗಳನ್ನೆಲ್ಲಾ ಖಾಲಿ ಮಾಡುತ್ತಿದ್ದಾರೆ ಮತ್ತು ತಮ್ಮ ಡಿಜಿಟಲ್ ವಂಚನೆಯೊಂದಿಗೆ ಐಟಿ ಕಂಪನಿ ಉದ್ಯೋಗಿಗಳು, ನಿವೃತ್ತ ನೌಕರರು ಸೇರಿದಂತೆ ಹಲವರನ್ನು ಮೋಸದ ಜಾಲಕ್ಕೆ ಕೆಡವುತ್ತಿದ್ದಾರೆ. ಈ ಬೆದರಿಕೆಗಳನ್ನು ಸಮರ್ಥವಾಗಿ ನಿಯಂತ್ರಿಸಲು ತೆಲಂಗಾಣ ಸೈಬರ್ ಸೆಕ್ಯುರಿಟಿ ಬ್ಯೂರೋ ಸೈಬರ್ ಸುರಕ್ಷತೆ ಮತ್ತು ವಂಚನೆಯನ್ನು ತಡೆಯಲು ಪ್ರಮುಖ ಸಲಹೆಗಳನ್ನು ತಿಳಿಸಿದೆ..
ಈ ತಪ್ಪುಗಳನ್ನು ಮಾಡಬೇಡಿ ;
* ಪಾಪ್‌ಅಪ್‌ಗಳು ಮತ್ತು ಅನುಮಾನಾಸ್ಪದ ಲಿಂಕ್‌ಗಳನ್ನು ನಿರ್ಲಕ್ಷಿಸಿ : ವೆಬ್‌ಸೈಟ್‌ಗಳಲ್ಲಿ ಅಥವಾ ಅಪರಿಚಿತರು ಕಳುಹಿಸಿದ ಲಿಂಕ್‌ಗಳಲ್ಲಿ ಪಾಪ್‌ಅಪ್‌ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಿ.
* ನಿಮ್ಮ ವಿವರಗಳನ್ನು ಖಾಸಗಿಯಾಗಿಡಿ: ನಿಮ್ಮ ಕ್ರೆಡಿಟ್, ಡೆಬಿಟ್ ಕಾರ್ಡ್ಗಳ ಮೇಲಿರುವ CVV ಸೇರಿದಂತೆ ವೈಯಕ್ತಿಕ ವಿವರಗಳು, OTP ಗಳು ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
* ಸುಳ್ಳು ಆರೋಪಗಳ ಬಗ್ಗೆ ಎಚ್ಚರದಿಂದಿರಿ: ನೀವು ಸೂಕ್ತವಲ್ಲದ ಸೈಟ್‌ಗಳಿಗೆ ಭೇಟಿ ನೀಡಿದ್ದೀರಿ ಎಂದು ಹೇಳುವ ಇಮೇಲ್‌ಗಳು ಅಥವಾ ಸಂದೇಶಗಳನ್ನು ನಿರ್ಲಕ್ಷಿಸಿ.
* ಹಣಕ್ಕಾಗಿ ಬರುವ ವಿನಂತಿಗಳನ್ನು ಪರಿಶೀಲಿಸಿ: ಹಣವನ್ನು ಕೇಳುವ ಸಂದೇಶಗಳನ್ನು ನಂಬಬೇಡಿ, ಅವುಗಳು ಸ್ನೇಹಿತರು, ಸಂಬಂಧಿಕರು ಅಥವಾ ಮೇಲಧಿಕಾರಿಗಳಿಂದ ಬಂದಿದ್ದರೂ ಸಹ. ಯಾವಾಗಲೂ ಅಧಿಕೃತ ಸಂಖ್ಯೆಯನ್ನು ಪಡೆದು ನೇರ ಕರೆ ಮಾಡುವ ಮೂಲಕವೇ ಖಚಿತಪಡಿಸಿಕೊಳ್ಳಿ.
* ಇಮೇಲ್ ಮೂಲಗಳನ್ನು ಪರಿಶೀಲಿಸಿ: ಅಪರಿಚಿತರು ಕಳುಹಿಸುವ ಇಮೇಲ್‌ಗಳು ಅಥವಾ ಲಗತ್ತುಗಳನ್ನು ಓಪನ್ ಮಾಡದಿರಿ.
* ಪರಿಶೀಲನೆ ಬಳಿಕ ಅಧಿಕೃತ ಆ್ಯಪ್ಗಳನ್ನು ಮಾತ್ರ ಇನ್ಸ್ಟಾಲ್ ಮಾಡಿ: ನಿಮ್ಮ ಸಾಧನಗಳಲ್ಲಿ ಸುರಕ್ಷಿತ ಮತ್ತು ಪರಿಶೀಲಿಸಿದ ಪ್ರೋಗ್ರಾಂಗಳನ್ನು ಮಾತ್ರ ಇನ್ಸ್ಟಾಲ್ ಮಾಡಿ.
* ರಿಮೋಟ್ ಪ್ರವೇಶ ಅಪ್ಲಿಕೇಶನ್‌ಗಳನ್ನು ತಪ್ಪಿಸಿ: AnyDesk ಅಥವಾ TeamViewer ನಂತಹ ರಿಮೋಟ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ತಪ್ಪಿಸಿ.
* ಸಾರ್ವಜನಿಕ ವೈಫೈ ಆಫ್ ಬಳಕೆ ಮಾಡದಿರಿ: ಯಾವುದೇ ಬಾಹ್ಯ/ಸಾರ್ವಜನಿಕ ವೈಫೈ ನೆಟ್‌ವರ್ಕ್‌ಗಳನ್ನು ಬಳಸಬೇಡಿ.
* ಸುರಕ್ಷಿತವಾಗಿ ಚಾರ್ಜ್ ಮಾಡಿ: ಸಾಧನಗಳನ್ನು ಚಾರ್ಜ್ ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ USB ಪೋರ್ಟ್‌ಗಳನ್ನು ಬಳಸುವುದನ್ನು ತಪ್ಪಿಸಿ.