ಹೈದರಾಬಾದ್: ಡಿಜಿಟಲ್ ಜಗತ್ತಿನಲ್ಲಿ ಅಪರಾಧ ಸ್ವರೂಪಗಳು ಬದಲಾಗುತ್ತಿವೆ. ಅಧಿಕಾರಿಗಳ ಸೋಂಕಿನಲ್ಲಿ ಜನಸಾಮಾನ್ಯರನ್ನು ವಂಚಿಸಿ, ಗೃಹ ಬಂಧನಲ್ಲಿರಿಸುವಂತಹ ಘಟನೆಗಳು ಹೆಚ್ಚಾಗುತ್ತಿವೆ. ಇಂತಹದ್ದೇ ವಂಚನೆ ಪ್ರಕರಣಗಳು ಇದೀಗ ಲಕ್ನೋ, ಜೋದ್‌ಪುರದಲ್ಲೂ ವರದಿಯಾಗಿದೆ.
10 ದಿನ ಡಿಜಿಟಲ್ ಅರೆಸ್ಟ್!: ಐಐಟಿ ಜೋದ್‌ಪುರ ಪ್ರೊಫೆಸರ್ಗೆ ಕರೆ ಮಾಡಿದ ವಂಚಕರು ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳ ಹೆಸರಿನಲ್ಲಿ ಮಹಿಳಾ ಪ್ರೊಫೆಸರ್ಗೆ ಕರೆ ಮಾಡಿ ಅವರನ್ನು 10 ದಿನ ಡಿಜಿಟಲ್ ಬಂಧನದಲ್ಲಿರಿಸಿದ್ದು, 11.97 ಲಕ್ಷ ರೂ ವಂಚಿಸಿದ್ದಾರೆ.
ಈ ಸಂಬಂಧ ಇದೀಗ ಐಐಟಿ ಪ್ರೊಫೆಸರ್ ಕರ್ವಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರೊಫೆಸರ್ಗೆ ವಿವಿಧ ನಂಬರ್ಗಳಿಂದ ಕರೆ ಮಾಡಿ, ನಿಮ್ಮ ಹೆಸರಿನಲ್ಲಿ ಡ್ರಗ್ಸ್ ಸಾಗಣೆ ನಡೆಯುತ್ತಿದ್ದು, ತನಿಖೆಗೆ ಸಹಕಾರ ನೀಡಬೇಕು, ಇಲ್ಲವೇ ಬಂಧಿಸಲಾಗುವುದು ಎಂದಿದ್ದಾರೆ.
ನೀವು ಮನಿ ಲ್ಯಾಂಡರಿಂಗ್ ಪ್ರಕರಣದಲ್ಲೂ ಭಾಗಿಯಾಗಿದ್ದೀರಿ. ಈ ಸಂಬಂಧ ಮುಂಬೈ ಕ್ರೈಂ ಬ್ರಾಂಚ್ಗೆ ವರದಿ ಮಾಡುವಂತೆ ತಿಳಿಸಿದ್ದಾರೆ. ಬಳಿಕ ತಾವೇ ಕರೆಯನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸುತ್ತೇವೆ ಎಂದು ಕ್ಯಾಮೆರಾ ಕಣ್ಗಾವಲಿನಲ್ಲಿಟ್ಟಿದ್ದಾರೆ.
ವಂಚಕರು ಸಂತ್ರಸ್ತೆ ಮಹಿಳೆ ಮೊಬೈಲ್ ಕ್ಯಾಮೆರಾ ಆನ್ ಮಾಡುವಂತೆ ಹೇಳಿ ಸ್ಕ್ರೀನ್ ಹಂಚಿಕೊಳ್ಳುವಂತೆ ಮಾಡಿದ್ದಾರೆ. ಬಳಿಕ ಅವರು ಲ್ಯಾಪ್ಟಾಪ್ ಮೂಲಕ ಸ್ಕ್ರೈಪ್ನಲ್ಲಿ ವಿಡಿಯೋ ಕರೆ ಮಾಡಿದ್ದಾರೆ. ಈ ಸಂದರ್ಭ ಡಿಸಿಪಿಯಂತೆ ವ್ಯಕ್ತಿಯೊಬ್ಬ ಪೋಸ್ ನೀಡಿ 10 ದಿನಗಳ ಕಾಲ ಆಕೆಯನ್ನು ಡಿಜಿಟಲ್ ಅರೆಸ್ಟ್ ಮಾಡಿ. ಆಕೆಯ ಖಾತೆಯನ್ನು ಪರಿಶೀಲಿಸಿ, ಹಣ ಪಡೆದಿದ್ದಾರೆ.
ಮಹಿಳೆ ಹೊಸ ಪಾಸ್‌ಬುಕ್ ಪಡೆದ ಹಿನ್ನೆಲೆಯಲ್ಲಿ ಹಣ ವರ್ಗಾವಣೆ ವಿಳಂಬವಾಗಿದ್ದು, 10 ದಿನಗಳ ಕಾಲ ವಂಚಕರು ಆಕೆಯನ್ನು ಗೃಹ ಬಂಧನಕ್ಕೆ ಒಳಗಾಗಿಸಿದ್ದಾರೆ. ಹಣ ವರ್ಗಾವಣೆ ಆಗುತ್ತಿದ್ದಂತೆ ಕರೆ ಬಂದಾಗಿದೆ. ಬಳಿಕ ಸಂತ್ರಸ್ತೆಗೆ ತಾನು ವಂಚನೆಗೆ ಒಳಗಾಗಿರುವುದು ತಿಳಿದು, ದೂರು ನೀಡಿದ್ದಾರೆ.
ಲಕ್ನೋದಲ್ಲಿ ವೈದ್ಯೆಗೆ 2.8 ಕೋಟಿ ರೂ ವಂಚನೆ:ಲಕ್ನೋದಲ್ಲಿನ ಪಿಜಿಐನ ವೈದ್ಯೆಗೆ ಕರೆ ಮಾಡಿದ ವಂಚಕರು ತಾವು ಟ್ರಾಯ್ ಅಧಿಕಾರಿಗಳು ಎಂದು ನಂಬಿಸಿ, 2.8 ಕೋಟಿ ರೂ ವಂಚಿಸಿದ್ದಾರೆ. ಈ ಸಂಬಂಧ ಲಕ್ನೋ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. ತನಿಖೆಯಲ್ಲಿ ವೈದ್ಯೆ ಹಣ ವರ್ಗಾವಣೆ ಮಾಡಿದ್ದ ಖಾತೆಯಿಂದ ತಕ್ಷಣಕ್ಕೆ ಮತ್ತೊಂದು ಖಾತೆಗೆ ಹಣ ವರ್ಗವಣೆ ಮಾಡಿರುವುದು ಬೆಳಕಿಗೆ ಬಂದಿದೆ.
ವೈದ್ಯೆಗೆ ಕರೆ ಮಾಡಿದ ವಂಚಕರು ಟ್ರಾಯ್ ಅಧಿಕಾರಿಗಳು ಎಂದು ಹೇಳಿದ್ದು, ನಿಮ್ಮ ಸಿಮ್ ಕಾರ್ಡ್ ವಿರುದ್ಧ 22 ದೂರುಗಳು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ನಿಮ್ಮ ನಂಬರ್ ಬ್ಲಾಕ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಜೊತೆಗೆ, ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಸಿಬಿಐ ಅಧಿಕಾರಿಯಂತೆ ಪೋಸ್ ನೀಡಿದ ವಂಚಕ, ನಿಮ್ಮ ಹೆಸರು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂದಿದೆ ಎಂದು ಬೆದರಿಸಿದ್ದಾರೆ ಎಂದು ವೈದ್ಯೆ ರುಚಿಕಾ ತಂಡನ್ ತಿಳಿಸಿದ್ದಾರೆ.
ಆಗಸ್ಟ್ 3 ರಿಂದ 5ರವರೆಗೆ ಆಕೆಯನ್ನು ಡಿಜಿಟಲ್ ಬಂಧನಲ್ಲಿರಿಸಲಾಗಿದ್ದು, ಈ ಅವಧಿಯಲ್ಲಿ ಮಕ್ಕಳು ಮತ್ತು ಮಹಿಳೆಯರ ಸಾಗಾಣೆ ಜಾಲದಲ್ಲಿ ಬಂಧಿಸಲಾಗುವುದು ಎಂದು ಹೆದರಿಸಿದ್ದಾರೆ. ಕ್ರಮ ಕೈಗೊಳ್ಳದಿರಲು ಹಣದ ಬೇಡಿಕೆ ಇಟ್ಟಿದ್ದರು. ಈ ಎರಡು ದಿನದ ಅವಧಿಯಲ್ಲಿ ಅವರು ನನ್ನ ಏಳು ಖಾತೆಯಲ್ಲಿನ 2 ಕೋಟಿ 81 ಲಕ್ಷ ವಂಚಿಸಿದ್ದಾರೆ ಎಂದಿದ್ದಾರೆ.
ಉಡುಪಿಯಲ್ಲಿಯೂ ಮೋಸ: ಮುಂಬೈ ಕಸ್ಟಮ್ ಅಧಿಕಾರಿಗಳ ಹೆಸರಿನಲ್ಲಿ ವೈದ್ಯರೊಬ್ಬರಿಗೆ ಕೋಟ್ಯಂತರ ರೂ. ಪಂಗನಾಮ ಹಾಕಿರುವ ಘಟನೆ ಉಡುಪಿಯಲ್ಲಿಯೂ ನಡೆದಿದೆ. ಉಡುಪಿಯ ವೈದ್ಯರಾಗಿರುವ ಡಾ.ಅರುಣ್ ಕುಮಾರ್ (53) ಹಣ ಕಳೆದುಕೊಂಡವರು. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸೈಬರ್ ಕಳ್ಳರ ಹೊಸ ತಂತ್ರ 'ಡಿಜಿಟಲ್ ಅರೆಸ್ಟ್'? ಅವಶ್ಯವಾಗಿ ತಿಳಿಯಿರಿ, ಅಪಾಯದಿಂದ ಪಾರಾಗಿ!