ಕರ್ನಾಟಕ

karnataka

'ಮೊಹಲ್ಲಾ ಚಿಕಿತ್ಸಾಲಯಗಳಲ್ಲಿ ಉಚಿತ ಔಷಧ ಕೊರತೆಯಾಗದಂತೆ ಜೈಲಿನಿಂದಲೇ ಕೇಜ್ರಿವಾಲ್ ನಿರ್ದೇಶನ' - Arvind Kejriwal

By ETV Bharat Karnataka Team

Published : Mar 26, 2024, 12:18 PM IST

Updated : Mar 26, 2024, 12:27 PM IST

ಮೊಹಲ್ಲಾ ಚಿಕಿತ್ಸಾಲಯಗಳಲ್ಲಿ ಉಚಿತ ಔಷಧಗಳ ಕೊರತೆಯಾಗದಂತೆ ಜೈಲಿನಿಂದಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿರ್ದೇಶನ ನೀಡಿದ್ದಾರೆ ಎಂದು ದೆಹಲಿ ಆರೋಗ್ಯ ಸಚಿವ ತಿಳಿಸಿದ್ದಾರೆ.

Arvind Kejriwal  ED custody  Kejriwal second order
ಇ.ಡಿ ಕಸ್ಟಡಿಯಲ್ಲಿರುವ ಸಿಎಂ ಅರವಿಂದ ಕೇಜ್ರಿವಾಲ್ ಎರಡನೇ ಆದೇಶ

ನವದೆಹಲಿ:ಮದ್ಯನೀತಿ ಹಗರಣದ ಭಾಗವಾಗಿ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸದ್ಯ ಜಾರಿ ನಿರ್ದೇಶನಾಲಯದ (ಇಡಿ) ಬಂಧನದಲ್ಲಿದ್ದಾರೆ. ಆದರೆ, ಅಲ್ಲಿಂದಲೇ ಆಡಳಿತ ನಡೆಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಬಂಧನದಲ್ಲಿರುವಾಗಲೇ ಕೇಜ್ರಿವಾಲ್ ಹೊರಡಿಸಿರುವ ಮೊದಲ ಆದೇಶದ ಕುರಿತು ಇಡಿ ತನಿಖೆ ಕೈಗೆತ್ತಿಕೊಂಡಿದ್ದು, ಈ ಮಧ್ಯೆ ಸಿಎಂ ಮತ್ತೆ ನಿರ್ದೇಶನಗಳನ್ನು ನೀಡುತ್ತಿದ್ದಾರೆ.

''ಮಂಗಳವಾರ ಬೆಳಿಗ್ಗೆ ಕೇಜ್ರಿವಾಲ್ ಜೈಲಿನಿಂದಲೇ ನಮಗೆ ಕೆಲವು ನಿರ್ದೇಶನಗಳನ್ನು ನೀಡಿದ್ದಾರೆ. ಮೊಹಲ್ಲಾ ಚಿಕಿತ್ಸಾಲಯಗಳಲ್ಲಿ ಉಚಿತ ಔಷಧಗಳ ಕೊರತೆಯಾಗದಂತೆ ಸೂಚಿಸಿದ್ದಾರೆ. ಬಂಧನದಲ್ಲಿದ್ದರೂ ಸಿಎಂ ಜನರ ಆರೋಗ್ಯದ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ'' ಎಂದು ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ತಿಳಿಸಿದರು.

ಇತ್ತೀಚೆಗಷ್ಟೇ ತಮ್ಮ ಸಹೋದ್ಯೋಗಿ ಸಚಿವೆ ಅತಿಶಿ ಅವರಿಗೆ ಸಿಎಂ ಕೇಜ್ರಿವಾಲ್ ನೀರಿನ ಸಮಸ್ಯೆ ಬಗೆಹರಿಸುವ ಕುರಿತು ಆದೇಶಿಸಿದ್ದರು. ಈ ಆದೇಶವನ್ನು ಇಡಿ ಗಂಭೀರವಾಗಿ ಪರಿಗಣಿಸಿದೆ. ಕೇಜ್ರಿವಾಲ್ ಅವರಿಗೆ ಕಂಪ್ಯೂಟರ್ ಅಥವಾ ಪೇಪರ್‌ಗಳನ್ನು ನೀಡಿಲ್ಲ ಎಂದು ತನಿಖಾ ಸಂಸ್ಥೆ ಹೇಳಿದೆ.

ಮೋದಿ ನಿವಾಸಕ್ಕೆ ಮುತ್ತಿಗೆ ಹಾಕಲು ಆಪ್​ ಕರೆ:ಕೇಜ್ರಿವಾಲ್ ಬಂಧನ ಖಂಡಿಸಿ ಆಮ್ ಆದ್ಮಿ ಪಕ್ಷವು ಪ್ರತಿಭಟನೆ ತೀವ್ರಗೊಳಿಸಿತು. ಮಂಗಳವಾರ ಪ್ರಧಾನಿ ಮೋದಿ ನಿವಾಸಕ್ಕೆ ಮುತ್ತಿಗೆ ಹಾಕಲು ಕರೆ ನೀಡಿದೆ. ಇದಕ್ಕೆ ಅನುಮತಿ ನೀಡದ ಪೊಲೀಸರು ದೆಹಲಿಯಾದ್ಯಂತ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಪ್ರಧಾನಿ ನಿವಾಸದ ಬಳಿ ಪೊಲೀಸ್​ ಪಡೆಗಳನ್ನು ನಿಯೋಜಿಸಲಾಗಿದೆ. ಈ ಪ್ರದೇಶದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಲೋಕ್ ಕಲ್ಯಾಣ್ ಮಾರ್ಗ್ ಬಳಿಯ ಹಲವು ಮೆಟ್ರೋ ನಿಲ್ದಾಣಗಳನ್ನು ಬಂದ್​ ಮಾಡಲಾಗಿದೆ. ಪ್ರಧಾನಿ ನಿವಾಸಕ್ಕೆ ಹೋಗುವ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಮದ್ಯ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇಜ್ರಿವಾಲ್‌ರನ್ನು ಇಡಿ ಅಧಿಕಾರಿಗಳು ಮಾರ್ಚ್ 21ರಂದು ಬಂಧಿಸಿದ್ದರು. ನ್ಯಾಯಾಲಯ ಅವರನ್ನು ಗುರುವಾರದವರೆಗೆ (ಮಾರ್ಚ್ 28) ಕಸ್ಟಡಿಗೆ ಒಪ್ಪಿಸಿದೆ.

ಇದನ್ನೂ ಓದಿ:ವೋಟಿಂಗ್‌ ದಿನಗಳಲ್ಲಿ ಸರ್ಕಾರಿ, ಖಾಸಗಿ ಉದ್ಯೋಗಿಗಳಿಗೆ ವೇತನ ಸಹಿತ ರಜೆ ಘೋಷಿಸಿದ ಬಿಹಾರ - Paid Holiday On Voting Days

Last Updated : Mar 26, 2024, 12:27 PM IST

ABOUT THE AUTHOR

...view details