ಕರ್ನಾಟಕ

karnataka

ನೇಪಾಳ ಗಡಿಯಲ್ಲಿ ಇಬ್ಬರು ಪಾಕಿಸ್ತಾನಿ, ಒಬ್ಬ ಕಾಶ್ಮೀರಿ ಯುವಕನನ್ನು ವಶಕ್ಕೆ ಪಡೆದ ಲಖನೌ ಎಟಿಎಸ್​ - India Nepal border

By ETV Bharat Karnataka Team

Published : Apr 4, 2024, 10:04 AM IST

ನೇಪಾಳಕ್ಕೆ ತೆರಳುತ್ತಿದ್ದ ಮೂವರು ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆ ಲಖನೌ ಎಟಿಎಸ್​ ಸಿಬ್ಬಂದಿ ವಶಕ್ಕೆ ಪಡೆದಿದೆ.

ಖನೌ ಎಟಿಎಸ್​
ಖನೌ ಎಟಿಎಸ್​

ಮಹಾರಾಜ್‌ಗಂಜ್:ಭಾರತ - ನೇಪಾಳ ಜಿಲ್ಲೆಯ ಸೋನೌಲಿ ಗಡಿಯಲ್ಲಿ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್​) ಮೂವರು ಶಂಕಿತರನ್ನು ವಶಕ್ಕೆ ಪಡೆದಿದೆ. ಇದರಲ್ಲಿ ಇಬ್ಬರು ಪಾಕಿಸ್ತಾನಿಯರು ಮತ್ತು ಮತ್ತೋರ್ವ ಜಮ್ಮು ಕಾಶ್ಮೀರಕ್ಕೆ ಸೇರಿದವ ಎಂದು ಗುರುತಿಸಲಾಗಿದೆ. ಮೂವರನ್ನೂ ಎಟಿಎಸ್​ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಮೂಲಗಳ ಪ್ರಕಾರ, ಮಂಗಳವಾರ ರಾತ್ರಿ ವಲಸೆ ಇಲಾಖೆ ಸಿಬ್ಬಂದಿ ಭಾರತದಿಂದ ನೇಪಾಳಕ್ಕೆ ತೆರಳುವ ಜನರನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ಮೂವರು ಯುವಕರು ಅನುಮಾನಾಸ್ಪದವಾಗಿ ಕಂಡು ಬಂದಿದ್ದಾರೆ. ಬಳಿಕ ಅವರ ತಪಾಸಣೆ ನಡೆಸಿದಾಗ ಇಬ್ಬರಲ್ಲಿ ಎರಡು ಪಾಕಿಸ್ತಾನದ ಪಾಸ್​ಪೋರ್ಟ್​ ಕಂಡು ಬಂದಿವೆ. ಇನ್ನೊಬ್ಬನ ಆಧಾರ್​ ಕಾರ್ಡ್​ ಪಡೆಯಲಾಗಿದೆ. ಮೂವರೂ ಬಸ್​​​ನಲ್ಲಿ ಪ್ರಯಾಣಿಸುತ್ತಿದ್ದರು. ಅನುಮಾನಾಸ್ಪದವಾಗಿ ಕಂಡು ಬಂದ ಹಿನ್ನೆಲೆ ಎಟಿಎಸ್​ ಮೂವರನ್ನೂ ವಶಕ್ಕೆ ತೆಗೆದುಕೊಂಡಿದೆ.

ಪಾಕಿಸ್ತಾನಿ ಯುವಕರು ನೇಪಾಳಕ್ಕೆ ವಲಸೆ ಹೋಗುತ್ತಿರುವ ಮತ್ತು ಅವರ ಜೊತೆ ಜಮ್ಮ ಮತ್ತು ಕಾಶ್ಮೀರದ ಯುವಕ ಇರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಒಬ್ಬ ಯುವಕ ತಾನು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ನಿವಾಸಿ, ನಾಸಿರ್ ಜಮಾಲ್ ಎಂದು ಬಹಿರಂಗಪಡಿಸಿದ್ದಾನೆ. ಇನ್ನಿಬ್ಬರು ಖಿಜಾರ್​ ಮೊಹಮ್ಮದ್ ಮತ್ತು ಸೈಯದ್ ಘಜ್ನಿಯಾರ್ ತಾವು ಆಕ್ರಮಿತ ಪಾಕಿಸ್ತಾನದಿಂದ ಬಂದಿದ್ದಾಗಿ ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಅವರನ್ನು ಲಖನೌ ಎಟಿಎಸ್ ವಶಕ್ಕೆ ಪಡೆದಿದೆ.

ಗಡಿಯಲ್ಲಿ ಭದ್ರತೆ ಹೆಚ್ಚಳ:ಮೂವರು ಶಂಕಿತರನ್ನು ಎಟಿಎಸ್​ ತನ್ನ ಸುಪರ್ದಿಗೆ ಪಡೆದ ಬಳಿಕ ಸೋನೌಲಿ ಗಡಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೇ, ಮುಂದಿನ ವಿಚಾರಣೆಯ ಕುರಿತು ಅಧಿಕಾರಿಗಳಿಗೆ ಮಾಹಿತಿ ಕೇಳಿದಾಗ ಅವರು ಈ ಬಗ್ಗೆ ಅವರು ಮಾಹಿತಿ ಹಂಚಿಕೊಳ್ಳುತ್ತಿಲ್ಲ. ಇನ್ನೂ, ಕೆಲವರು ಯಾರ ಬಂಧನವೂ ಆಗಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ.

ಚೀನೀಯರ ಬಂಧನ:ಅಕ್ರಮವಾಗಿ ಭಾರತ ಪ್ರವೇಶಿಸಿದ ಈಚೆಗೆಇಬ್ಬರು ಚೀನೀ ಪ್ರಜೆಗಳು ಉತ್ತರಪ್ರದೇಶದಲ್ಲಿ ಬಂಧಿಸಲಾಗಿದೆ. ಭಾರತ- ನೇಪಾಳ ಗಡಿಯಲ್ಲಿ ಭದ್ರತಾ ಪಡೆಗಳು ಗಸ್ತು ಕಾಯುತ್ತಿದ್ದ ವೇಳೆ ಚೀನಾದ ಪುರುಷ ಮತ್ತು ಮಹಿಳಾ ಪ್ರಜೆಗಳು ಗಡಿಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಯೇ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಇಬ್ಬರೂ ಅಕ್ರಮವಾಗಿ ಭಾರತದ ಗಡಿ ಪ್ರವೇಶಿಸಿದ್ದಾರೆ ಎಂದು ತಿಳಿದು ಬಂದ ಬಳಿಕ, ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.

ಮಾರ್ಚ್ 26 ರಂದು ಓರ್ವ ಮಹಿಳೆ ಮತ್ತು ಪುರುಷ ಚೀನೀ ನಾಗರಿಕರು ಭಾರತದ ಗಡಿಯೊಳಗೆ ಬಂದಾಗ ಸ್ಥಳೀಯ ಪೊಲೀಸರು ಮತ್ತು ಎಸ್‌ಎಸ್‌ಬಿ ತಂಡ ಜಂಟಿಯಾಗಿ ಅವರನ್ನು ಬಂಧಿಸಿದೆ. ವಿಚಾರಣೆ ನಡೆಸಿದಾಗ ಅವರು ತಾವು ಚೀನೀಯರು ಎಂದು ತಿಳಿಸಿದ್ದಾರೆ. ಭಾರತದೊಳಕ್ಕೆ ಪ್ರವೇಶಿಸಲು ಸೂಕ್ತ ದಾಖಲೆ ಇಲ್ಲದೇ, ಅಕ್ರಮವಾಗಿ ಅವರು ಗಡಿ ಪ್ರವೇಶಿಸಿದ್ದರಿಂದ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್​ಗೆ ಎಸ್‌ಡಿಪಿಐ ಬೆಂಬಲ: 'ಉಗ್ರ' ಬೆಂಬಲದೊಂದಿಗೆ ಕಾಂಗ್ರೆಸ್ ಚುನಾವಣೆ, ಬಿಜೆಪಿ ಆರೋಪ - SDPI row

ABOUT THE AUTHOR

...view details