ಮುಂಬೈ:ವಿಶ್ವದ ಶ್ರೀಮಂತರ ಪಟ್ಟಿಯಲ್ಲಿರುವ ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರು ಇತ್ತೀಚೆಗೆ ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಸಮಾರಂಭಕ್ಕೆ ಭಾರತೀಯ ಸಿನಿಮಾ ಸೆಲೆಬ್ರಿಟಿಗಳಿಂದ ಹಿಡಿದು, ವಿದೇಶಿ ತಾರೆಯರನ್ನು ಕರೆಸಿದ್ದರು. ಮಾರ್ಚ್ 1ರಿಂದ 3ರವರೆಗೆ ನಡೆದ ಸಮಾರಂಭ ದೇಶವಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಸುದ್ದಿ ಮಾಡಿತ್ತು. ಜೊತೆಗೆ ಅನಂತ್ ಅಂಬಾನಿ ಧರಿಸಿದ್ದಂತಹ ವಾಚ್ ಬೆಲೆಯಂತೂ ಗೊತ್ತಾದ ಮೇಲೆ, ಆ ಐಷಾರಾಮಿ ವಾಚ್ ಬಗ್ಗೆಯೇ ಚರ್ಚೆಯಾಗುತ್ತಿದೆ.
ವಾಚ್ಗೆ ಆಕರ್ಷಿತರಾದ ಮಾರ್ಕ್ ಜುಕರ್ಬರ್ಗ್, ಪತ್ನಿ ಪ್ರಿಸ್ಸಿಲ್ಲಾ ಚೆನ್:ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆ ಮೆಟಾ (ಫೇಸ್ಬುಕ್- ಇನ್ಸ್ಟಾಗ್ರಾಂ) ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಕೂಡ ಅನಂತ್ ಅಂಬಾನಿ ಧರಿಸಿದ್ದ ವಾಚ್ ನೋಡಿ ಕಣ್ಣರಳಿಸಿದ್ದಾರೆ. ಜುಕರ್ ಮಾತ್ರವಲ್ಲದೇ ಅವರ ಪತ್ನಿ ಪ್ರಿಸ್ಸಿಲ್ಲಾ ಚೆನ್ ಅವರೂ ಅನಂತ್ ವಾಚ್ ಕಂಡು ಮೂಕವಿಸ್ಮಿತರಾಗಿದ್ದಾರೆ. ವಾಚ್ ಬಗ್ಗೆ ಮಾರ್ಕ್ ಜುಕರ್ ಬರ್ಗ್, ಪ್ರಿಸ್ಸಿಲ್ಲಾ ಹಾಗೂ ಅನಂತ್ ಅಂಬಾನಿ ನಡುವಿನ ಸಂಭಾಷಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಅನಂತ್ ಅವರು ತಾವು ಧರಿಸಿರುವ ಐಷಾರಾಮಿ ವಾಚ್ ಅನ್ನು ರಿಚರ್ಡ್ ಮಿಲ್ಲೆ ವಾಚ್ ಕಂಪನಿಯವರು ಸಿದ್ಧಪಡಿಸಿರುವುದಾಗಿ ಹೇಳುತ್ತಾರೆ. ಆಗ ಮಾರ್ಕ್ ಜುಕರ್ಬರ್ಗ್, ಹೌದು ರಿಚರ್ಡ್ ಮಿಲ್ಲೆ ತುಂಬಾ ಸುಂದರವಾದ ಕೈಗಡಿಯಾರವನ್ನು ತಯಾರಿಸುತ್ತಾರೆ ಎಂದು ಹೇಳುತ್ತಾರೆ.
ಅನಂತ್ ಐಷಾರಾಮಿ ವಾಚ್ ಬೆಲೆ ಎಷ್ಟು?:ಈ ವಾಚ್ನ ಬೆಲೆ ಎಷ್ಟು ಎಂದು ಕೇಳಿದರೆ ನೀವು ಒಂದು ಕ್ಷಣ ತಲೆ ತಿರುಗೋದಂತೂ ಗ್ಯಾರಂಟಿ. ಈ ಒಂದು ವಾಚ್ನ ಬೆಲೆ ಎರಡು ಐಷಾರಾಮಿ ರಾಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸಬಹುದು. ರೋಲ್ಸ್ರಾಯ್ ಕಾರಿನ ಬೆಲೆ 6 ರಿಂದ 7 ಕೋಟಿ ರೂಪಾಯಿ. ಅನಂತ್ ಅವರು ಧರಿಸಿದ್ದ ವಾಚ್ ಬೆಲೆ 15 ಕೋಟಿ ರೂಪಾಯಿ.