ETV Bharat / bharat

ದಸರಾ ರಜೆಗೆ ಊರಿಗೆ ಹೋಗುವ ಮುನ್ನ ಮನೆಯ ಸುರಕ್ಷತೆ ಬಗ್ಗೆಯೂ ಇರಲಿ ಕಾಳಜಿ: ಈ ಮುನ್ನೆಚ್ಚರಿಕೆಗಳು ಅವಶ್ಯ - HOME SAFETY MEASURES BY POLICE

author img

By ETV Bharat Karnataka Team

Published : 2 hours ago

ವಾರಗಳ ಕಾಲ ಮನೆ ತೊರೆದು ಹೋಗುವ ನಿವಾಸಗಳನ್ನೇ ಗುರಿಯಾಗಿಸಿ ನಡೆಸುವ ಅಪರಾಧ ಚಟುವಟಿಕೆಗಳು ಈ ಸಂದರ್ಭದಲ್ಲಿ ಕಡಿಮೆ ಇಲ್ಲ. ಹೀಗಾಗಿ ಊರಿಗೆ ಹೋಗುವವರು ಈ ಎಲ್ಲ ಮುಂಜಾಗ್ರತೆಗಳನ್ನು ತೆಗೆದುಕೊಳ್ಳುವುದು ಉತ್ತಮ.

DUSSEHRAvacation HOME SAFETY MEASURES BY POLICE
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​)

ಬೆಂಗಳೂರು​: ದಸರಾ ಎಂದರೆ ಕೇವಲ ಹಬ್ಬದ ಸಂಭ್ರಮವಲ್ಲ, ಮಕ್ಕಳಿಗೆ ರಜೆಯ ಸುಗ್ಗಿ ಕೂಡ ಹೌದು. 10 -12 ದಿನಗಳ ಕಾಲ ಸಿಗುವ ರಜೆ ಸಂಭ್ರಮ ಆಚರಿಸಲು ಅನೇಕರು ಅಜ್ಜ- ಅಜ್ಜಿ, ಸಂಬಂಧಿಕರ ಮನೆಗೆ ಅಥವಾ ಮಕ್ಕಳ ಜೊತೆಗೆ ಕುಟುಂಬಗಳು ಪ್ರವಾಸದ ಪ್ಲಾನ್​ ಮಾಡುತ್ತಾರೆ. ಈ ವೇಳೆ ಅನೇಕ ದೇಗುಲ ಸೇರಿದಂತೆ ಪ್ರವಾಸಿ ತಾಣಗಳು ಜನ ಜಂಗುಳಿಯಿಂದ ಕೂಡಿರುವುದು ಸುಳ್ಳಲ್ಲ.

ಇನ್ನು ವಾರಗಳ ಕಾಲ ಮನೆ ತೊರೆದು ಹೋಗುವ ನಿವಾಸಗಳನ್ನೇ ಗುರಿಯಾಗಿಸಿಕೊಂಡು ನಡೆಸುವ ಅಪರಾಧ ಚಟುವಟಿಕೆಗಳು ಈ ಸಂದರ್ಭದಲ್ಲಿ ಕಡಿಮೆ ಏನೂ ಇಲ್ಲ. ಈ ಹಿನ್ನೆಲೆಯಲ್ಲಿ ಮನೆ ಮಂದಿ ಈ ಸಂಬಂಧ ಹೆಚ್ಚಿನ ಮುಂಜಾಗ್ರತೆ ವಹಿಸುವುದು ಅಗತ್ಯ ಎನ್ನುತ್ತಾರೆ ಪೊಲೀಸರು.

ಈ ನಿಟ್ಟಿನಲ್ಲಿ ಪೊಲೀಸ್​ ಇಲಾಖೆ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳುವಂತೆ ಮುನ್ಸೂಚನೆ ನೀಡಿದ್ದಾರೆ. ಜೊತೆಗೆ ಅನೇಕ ಕಾಲೋನಿಗಳಲ್ಲಿ ಮುನ್ನೆಚ್ಚರಿಕೆಗೆ ಪೊಲೀಸ್​ ಗಸ್ತು ಮತ್ತು ವಾಹನದ ಗಸ್ತನ್ನು ಹೆಚ್ಚಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ, ಯಾವುದೇ ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದರೆ, ತಕ್ಷಣಕ್ಕೆ ಪೊಲೀಸರಿಗೆ ಮಾಹಿತಿ ನೀಡುವಂತೆ ಇಲಾಖೆ ಮನವಿ ಕೂಡಾ ಮಾಡಿದೆ.

ಮುನ್ನೆಚ್ಚರಿಕೆ ಕ್ರಮ: ದಸರಾ ಹಬ್ಬದ ರಜೆ ವೇಳೆ ಗ್ರಾಮ ಅಥವಾ ಇನ್ನಿತರ ಸ್ಥಳಗಳಿಗೆ ತೆರಳುವಾಗ ಮನೆಯಲ್ಲಿನ ಬಂಗಾರ, ಬೆಳ್ಳಿ, ಹಣವನ್ನು ಬ್ಯಾಂಕ್​ ಲಾಕರ್​ನಲ್ಲಿ ಇಡುವುದು ಉತ್ತಮ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಗೆ ಭದ್ರತಾ ಸಿಬ್ಬಂದಿ ನೇಮಿಸುವಾಗ ನಂಬಿಕಾರ್ಹ ವ್ಯಕ್ತಿಯನ್ನು ಆಯ್ಕೆ ಮಾಡುವುದು ಉತ್ತಮ. ಮನೆಯಲ್ಲಿ ಸಿಸಿಟಿವಿ ಅಳವಡಿಸಿದಾಗ ಅವುಗಳನ್ನು ಕಾಲ ಕಾಲಕ್ಕೆ ನಿರ್ವಹಣೆ ಮಾಡಬೇಕು. ಮನೆಯ ಸುತ್ತಮುತ್ತ ಶುಚಿತ್ವ ಕಾಪಾಡಿ. ಮನೆಯ ಕಿಟಕಿ ಹೊರಗೆ ಕಾಣುವಂತೆ ಇದ್ದರೆ, ಅದರ ಪರದೆ ಎಳೆದು ಹೋಗುವುದು ಅವಶ್ಯ.

ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳಬೇಡಿ: ಊರಿಗೆ ಹೋಗುವಾಗ ಮನೆಯ ಒಳಗಡೆ ಲೈಟ್​ ಆನ್​ ಮಾಡಿ ಹೋಗಿ. ಮನೆಗೆ ಒಳಗೆ ಮತ್ತು ಹೊರಗೆ ಹೋಗಲು ರೆಕಾರ್ಡ್​ ಮಾಡುವ ಸಿಸಿಟಿವಿ ಸಾಧನಗಳನ್ನು ಕಣ್ಣಿಗೆ ಕಾಣದಂತೆ ಇಡಿ. ಜೊತೆಗೆ ಡಿವಿಆರ್​ ಅನ್ನು ಕೂಡ ರಹಸ್ಯವಾಗಿಡಿ. ರಜೆ ಮೋಜಿಗೆ ಹೋದಾಗ ಅಲ್ಲಿನ ಕುರಿತಾದ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದೇ ಇರುವುದು ಸೂಕ್ತ.

ಈ ಅಂಶಗಳನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ:

  • ಮನೆಯಲ್ಲಿ ಬೆಳ್ಳಿ, ಬಂಗಾರ, ಹಣದಂತಹ ಅಮೂಲ್ಯ ವಸ್ತುಗಳನ್ನು ಇಟ್ಟು ಊರಿಗೆ ತೆರಳಬೇಡಿ. ಮನೆಯಲ್ಲಿ ರಹಸ್ಯ ಕ್ಯಾಮೆರಾಗಳನ್ನು ಇಡುವುದು ಉತ್ತಮ.
  • ಮನೆಯಲ್ಲಿ ಸೆಕ್ಯೂರಿಟಿ ಆಲರಾಂ ಸಾಧನ ಇಡಿ. ಮೋಷನ್​ ಸೆನ್ಸಾರ್​ ಅಥವಾ ಸೆಂಟ್ರಲ್​ ಲಾಕಿಂಗ್​ ಸಿಸ್ಟಂ ಅಳವಡಿಸಿ. ಮನೆಯಲ್ಲಿ ಇಲ್ಲದಾಗ, ಮನೆಯ ಮುಂದೆ ನ್ಯೂಸ್​ ಪೇಪರ್​ ಮತ್ತು ಹಾಲಿನ ಪ್ಯಾಕೆಟ್​ ಇರುವಂತೆ ನೋಡಿಕೊಳ್ಳಬೇಡಿ. ಮನೆಯ ಹೊರಗೆ ಅಥವಾ ಒಳಗೆ ಸಣ್ಣ ಲೈಟ್​ ಇರುವಂತೆ ನೋಡಿಕೊಳ್ಳಿ.
  • ಮನೆಯ ಆವರಣದಲ್ಲಿ ವಾಹನ ನಿಲ್ಲಿಸಿ ಹೋಗಿ. ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಲಾಕ್​ ಅನ್ನು ಹಾಕಿ ತೆರಳಿ.
  • ಬೀರು ಮತ್ತು ಲಾಕರ್​ ಕೀಗಳನ್ನು ರಹಸ್ಯ ಸ್ಥಳದಲ್ಲಿ ಇರಿಸಿ. ಮನೆಯಲ್ಲಿ ಸಿಸಿಟಿವಿ ಇದ್ದಲ್ಲಿ, ಅದನ್ನು ಕಾಲ ಕಾಲಕ್ಕೆ ಸೆಲ್​ಫೋನ್​ನಲ್ಲಿ ವೀಕ್ಷಿಸಿ.
  • ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ರಜೆಯ ಕುರಿತಾದ ಮಾಹಿತಿ ಹಂಚಿಕೊಳ್ಳಬೇಡಿ.
  • ಕಾಲೋನಿ ಸೊಸೈಟಿ, ಅಪಾರ್ಟ್​ಮೆಂಟ್​ನಲ್ಲಿರುವವರು, ಭದ್ರತಾ ಸಿಬ್ಬಂದಿಯನ್ನು ನೇಮಿಸುವುದು ಉತ್ತಮ.
  • ಅನುಮಾನಸ್ಪದ ವ್ಯಕ್ತಿಗಳ ಕುರಿತಾದ ಮಾಹಿತಿಗಳನ್ನು ಪೊಲೀಸರೊಂದಿಗೆ ತಕ್ಷಣ ಹಂಚಿಕೊಳ್ಳಿ.
  • ಕಳ್ಳತನ ಮಾಡುವ ಮುನ್ನ ಅಪರಾಧಿಗಳು ಮನೆಯ ಮುಂದೆ ಸುತ್ತುವರೆಯುವುದು ಸಹಜ. ಈ ರೀತಿ ಮನೆ ಪರಿಶೀಲನೆ ನಡೆಸುತ್ತಿರುವ ವ್ಯಕ್ತಿಗಳ ಬಗ್ಗೆ ಅನುಮಾನ ಬಂದರೆ, ತಕ್ಷಣಕ್ಕೆ ಪೊಲೀಸರಿಗೆ ಕರೆ ಮಾಡಿ, ಅನಾಹುತ ತಪ್ಪಿಸಬಹುದು.
  • ಹಬ್ಬದ ರಜೆಗೆ ಹೋಗುವವರು ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಿದಲ್ಲಿ ಆಗಬಹುದಾದ ಆಪತ್ತು ತಪ್ಪಿಸಬಹುದು. ಈ ರೀತಿ ಜವಾಬ್ದಾರಿ ನಿರ್ವಹಣೆ ಮಾಡುವುದು ಅವಶ್ಯ ಎನ್ನುತ್ತಾರೆ ಪೊಲೀಸರು.

ಇದನ್ನೂ ಓದಿ: ತಿರುಮಲದಲ್ಲಿ ಬ್ರಹ್ಮೋತ್ಸವ ಸಂಭ್ರಮ; 9 ದಿನವೂ ವಿಶೇಷ ವಾಹನದಲ್ಲಿ ಶ್ರೀವಾರಿ ಸೇವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.