ಆನೇಕಲ್ (ಬೆಂಗಳೂರು): ಸ್ವಯಂ ಬೋಲ್ಟ್ (ಆಟೋಮೆಟಿಕ್ ಬೋಲ್ಟ್) ಎಂಬ ಸಾಫ್ಟ್‌ವೇರ್ ಮೂಲಕ ವಾಹನಗಳ ನಿಯಂತ್ರ ಮಾಡುವ ಯೋಜನೆಯನ್ನು 10ನೇ ತರಗತಿಯ ವಿದ್ಯಾರ್ಥಿಯೊಬ್ಬರು ಸಿದ್ಧಪಡಿಸಿದ್ದಾರೆ. ಈ ಮೂಲಕ ಅವರು ಐಐಎಂಬಿಯ ಪ್ರಯಾಸ್ ಯೂತ್ ಉದ್ಯಮಿ ಅಂತಿಮ ಸುತ್ತಿಗೆ ಮತ್ತು ಐಐಟಿ ಕಾನ್ಪುರದ ಉದ್ಯಮಶೀಲತೆ ಇ-ಸೆಲ್ ಸ್ಪರ್ಧೆಯ ಎರಡನೇ ಸುತ್ತಿಗೆ ಆಯ್ಕೆಯಾಗಿದ್ದಾರೆ. ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಆರ್ಥಿಕ ಅಭಿವೃದ್ಧಿಗೆ ಸ್ವಯಂ ಬೋಲ್ಟ್ ಸಾಪ್ಟ್‌ವೇರ್ ಉಪಯಕ್ತವಾಗಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮುತ್ತಾನಲ್ಲೂರು ಗ್ರಾಮದ ಲಲಿತ್ ಸಾಯಿ.ಎಸ್ ಅವರು ಸ್ವಯಂ ಬೋಲ್ಟ್ ಎಂಬ ಸಾಪ್ಟ್‌ವೇರ್ ಅನ್ನು ಶೋಧಿಸಿದ್ದಾರೆ. ಈ ಸಾಫ್ಟ್‌ವೇರ್ ಮೂಲಕ ವಾಹನಗಳ ನಿಯಂತ್ರಣದ ಮಾದರಿಯನ್ನು ಐಐಎಂಬಿ ಮತ್ತು ಐಐಟಿಯಲ್ಲಿ ಪ್ರಸ್ತುತ ಪಡಿಸಿ ಅಂತಿಮ ಸುತ್ತಿಗೆ ಆಯ್ಕೆಯಾಗಿರುವುದು ವಿಶೇಷ. ಮುತ್ತಾನಲ್ಲೂರು ಗ್ರಾಮದ ಸುರೇಶ್ ಮತ್ತು ಸುಜಾತ ದಂಪತಿಯ ಮಗ ಲಲಿತ್ ಸಾಯಿ.ಎಸ್ ಸಾಂದೀಪನಿ ಅಕಾಡೆಮಿ ಫಾರ್ ಎಕ್ಸಲೆನ್ಸ್ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.
ಸ್ವಯಂ ಬೋಲ್ಟ್ ಹೇಗೆ ಕಾರ್ಯನಿರ್ವಹಣೆ : ಸ್ವಯಂ ಬೋಲ್ಟ್ ಎಂಬುದು ಲಲಿತ್ ಸಾಯಿ ಅವರ ಪರಿಕಲ್ಪನೆಯ ಸಾಫ್ಟ್‌ವೇರ್ ಮತ್ತು ವೆಬ್‌ಪೆಜ್ ಆಗಿದೆ. ಈ ತಂತ್ರಾಂಶವುಳ್ಳ 4.5 ಇಂಚಿನ ಸಾಧನವನ್ನು ನಾಲ್ಕು ಚಕ್ರ ಮೇಲ್ಪಟ್ಟ ವಾಹನಗಳಲ್ಲಿನ ಇಸಿಎಂಗೆ (ಎಂಜಿನ್ ಕಂಟ್ರೋಲ್ ಮಾಡ್ಯುಲ್) ಅಳವಡಿಸಲಾಗುತ್ತದೆ. ದ್ವಿಚಕ್ರ ವಾಹನಗಳಲ್ಲಿ ಇಗ್ನಿಷನ್‌ಗೆ ಅಳವಡಿಸಲಾಗುತ್ತದೆ. ಈ ಸಾಧನವನ್ನು ಅಳವಡಿಸಿದ ನಂತರ ವಾಹನ ಚಾಲನೆ, ನಿಯಂತ್ರಣವನ್ನು ಸ್ವಯಂ ಬೋಲ್ಟ್ ಸಾಫ್ಟ್‌ವೇರ್ ಮತ್ತು ವೆಬ್‌ಪೇಜ್ ಮೂಲಕ ನಿಯಂತ್ರಿಸಬಹುದಾಗಿದೆ.
ಸ್ವಯಂ ಬೋಲ್ಟ್‌ನ ಅರ್ಥವೇನು?: ಸ್ವಯಂ ಎಂದ್ರೆ ಆಂಗ್ಲದಲ್ಲಿ ಆಟೋಮೆಟಿಕ್ ಮತ್ತು ಬೋಲ್ಟ್ ಎಂದರೆ ಲಾಕ್ ಆಗುವುದು ಎಂಬುದಾಗಿದೆ. ಅಂದ್ರೆ ವಾಹನಗಳನ್ನು ಆಟೋಮೆಟಿಕ್ ಆಗಿ ಕಂಟ್ರೋಲ್ ಮಾಡುವ ಸಾಪ್ಟ್‌ವೇರ್ ಅನ್ನೇ ಸ್ವಯಂ ಬೋಲ್ಟ್ ಆಗಿದೆ ಎಂದು 10ನೇ ತರಗತಿ ವಿದ್ಯಾರ್ಥಿ ಲಲಿತ್ ಸಾಯಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ವಾಹನ ಮಾಲೀಕರು ತಮ್ಮ ತೆರಿಗೆಯನ್ನು ಸಮಯಕ್ಕೆ ಪಾವತಿಸಲು ವಿಫಲರಾದರೆ ಸ್ವಯಂ ಬೋಲ್ಟ್ ಮೂಲಕ ವಾಹನಗಳನ್ನು ಲಾಕ್ ಮಾಡಬಹುದಾಗಿದೆ. ವರದಿಯೊಂದರ ಪ್ರಕಾರ 12-13 ಲಕ್ಷ ವಾಣಿಜ್ಯ ವಾಹನಗಳು ತೆರಿಗೆಯನ್ನು ಸರಿಯಾಗಿ ಪಾವತಿಸುತ್ತಿಲ್ಲ. ಇದರಿಂದಾಗಿ ವಾರ್ಷಿಕ 30ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿಲ್ಲ ಎಂಬ ಮಾಹಿತಿ ಇದೆ ಎಂದು ಲಲಿತ್ ಸಾಯಿ ತಿಳಿಸಿದರು.
ಓದಿ: ಆಂಪಿಯರ್ ಮ್ಯಾಗ್ನಸ್ ನಿಯೋ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, ರೇಟ್ ಕಡಿಮೆ, ರೇಂಜ್ ಜಾಸ್ತಿ
ಓದಿ: ಭಾರತಕ್ಕೆ ಬರ್ತಿದೆ ಎಂಜಿ ಮೋಟಾರ್ ಇಂಡಿಯಾದ ಲಕ್ಷುರಿ ಇವಿ ಕಾರು!