ಖೈಬರ್ ಪಖ್ತುಂಖ್ವಾ(ಪಾಕಿಸ್ತಾನ): ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಭದ್ರತಾ ಪಡೆಗಳು ಒಂದು ಡಜನ್ಗೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆಗೈದಿವೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್) ಪ್ರಕಾರ, ಫೆಬ್ರವರಿ 15, 2025ರಂದು, ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಹದಿನೈದು ಖ್ವಾರಿಜ್ ಉಗ್ರರನ್ನು ಭದ್ರತಾ ಪಡೆಗಳು ಕೊಂದಿವೆ.
ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಹಥಾಲಾದ ಸಾಮಾನ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಖ್ವಾರಿಜ್ ಉಗ್ರರು ಇರುವ ಬಗ್ಗೆ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದವು. ಕಾರ್ಯಾಚರಣೆಯ ಸಮಯದಲ್ಲಿ, ಪಾಕಿಸ್ತಾನದ ಭದ್ರತಾ ಸಿಬ್ಬಂದಿ ಖ್ವಾರಿಜ್ ಉಗ್ರರು ಅಡಗಿದ್ದ ಸ್ಥಳವನ್ನು ಪತ್ತೆ ಮಾಡಿದ್ದವು. ಕಾರ್ಯಾಚರಣೆಯಲ್ಲಿ ಖಾರ್ಜಿ ಫಾರ್ಮಾ ಅಲಿಯಾಸ್ ಸಾಕಿಬ್, ಖಾರ್ಜಿ ಅಮಾನುಲ್ಲಾ ಅಲಿಯಾಸ್ ತೂರಿ, ಖಾರ್ಜಿ ಸಯೀದ್ ಅಲಿಯಾಸ್ ಲಿಯಾಖತ್ ಮತ್ತು ಖಾರ್ಜಿ ಬಿಲಾಲ್ ಸೇರಿದಂತೆ ಒಂಬತ್ತು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಖ್ವಾರಿಜ್ ಉಗ್ರರು ಹಲವಾರು ಭಯೋತ್ಪಾದಕ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ಬೇಕಾಗಿದ್ದರು ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ಹೇಳಿದೆ. ಉತ್ತರ ವಜಿರಿಸ್ತಾನ್ ಜಿಲ್ಲೆಯ ಮಿರಾನ್ ಷಾ ದ ಪ್ರದೇಶದಲ್ಲಿ ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಆರು ಖ್ವಾರಿಜ್ಗಳನ್ನು ಭದ್ರತಾ ಪಡೆಗಳು ಕೊಂದಿವೆ.
ಗುಂಡಿನ ಚಕಮಕಿಯಲ್ಲಿ 21 ವರ್ಷದ ಲೆಫ್ಟಿನೆಂಟ್ ಮುಹಮ್ಮದ್ ಹಸನ್ ಅರ್ಷಫ್ ಹುತಾತ್ಮರಾಗಿದ್ದಾರೆ. ಸೈನಿಕರಾದ ನೈಬ್ ಸುಬೇದಾರ್ ಮುಹಮ್ಮದ್ ಬಿಲಾಲ್ (39), ಸಿಪಾಯಿ ಫರ್ಹತ್ ಉಲ್ಲಾ (27) ಮತ್ತು ಸಿಪಾಯಿ ಹಿಮತ್ ಖಾನ್ (29) ಕೂಡ ಹುತಾತ್ಮರಾಗಿದ್ದಾರೆ.
ಈ ಪ್ರದೇಶದಲ್ಲಿ ಇನ್ನೂ ಅಡಗಿರಬಹುದಾದ ಖ್ವಾರಿಜ್ ಉಗ್ರರ ನಿರ್ಮೂಲನೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಇದಕ್ಕೂ ಮುನ್ನ, ಪಾಕಿಸ್ತಾನ ಭದ್ರತಾ ಪಡೆಗಳು ಖೈಬರ್ ಪಖ್ತುಂಖ್ವಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಖ್ವಾರಿಜ್ ಎಂದೂ ಕರೆಯಲ್ಪಡುವ ನಾಲ್ಕು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಭಯೋತ್ಪಾದಕರನ್ನು ಕೊಂದಿವೆ ಎಂದು ಎಆರ್ವೈ ನ್ಯೂಸ್ ವರದಿ ಮಾಡಿದೆ. ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್) ಪ್ರಕಾರ, ಪಾಕಿಸ್ತಾನ ಭದ್ರತಾ ಪಡೆಗಳು ಡೇರಾ ಇಸ್ಮಾಯಿಲ್ ಖಾನ್ನ ಕೌಲಾಚಿ ಪ್ರದೇಶದಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆ ನಡೆಸಿದ್ದವು.
ಇದನ್ನೂ ಓದಿ: ಪಾಕಿಸ್ತಾನ ಪಡೆಗಳಿಂದ ಅಪ್ರಚೋದಿತ ದಾಳಿ: ಭಾರತದ ಪ್ರತಿದಾಳಿಯಲ್ಲಿ ಪಾಕ್ ಸೈನ್ಯಕ್ಕೆ ಭಾರಿ ಸಾವು -ನೋವು