ETV Bharat / state

ಚಾಮರಾಜನಗರ: ಅಂಗಡಿಗಳ ಸಿಸಿಟಿವಿ ತೆಗೆಸುವಂತೆ ವ್ಯಾಪಾರಿಗಳಿಗೆ ಬೆದರಿಕೆ ಪತ್ರ: ಇದರ ಬೆನ್ನಲ್ಲೇ ಸರಣಿ ಕಳವು - Serial theft - SERIAL THEFT

'ನಿಮ್ಮ ಅಂಗಡಿಗಳ ಮುಂದೆ ಇರುವ ಸಿಸಿ ಕ್ಯಾಮರಾ ತೆಗೆಸಿ, ಇಲ್ಲದಿದ್ದರೇ ತಕ್ಕ ಪಾಠ ಕಲಿಸುತ್ತೇವೆ' ಬೆದರಿಕೆ ಪತ್ರ ಕಳುಹಿಸಿದ್ದಲ್ಲದೇ, ಕೆಲವು ಅಂಗಡಿಯಲ್ಲಿ ಕಳ್ಳತನ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಅಂಗಡಿಗಳ ಸಿಸಿಟಿವಿ ತೆಗಸುವಂತೆ ವ್ಯಾಪಾರಿಗಳಿಗೆ ಬೆದರಿಕೆ ಪತ್ರ ಕಳುಹಿಸಿದ ಬಳಿಕ ಕಳ್ಳತನ
ಅಂಗಡಿಗಳ ಸಿಸಿಟಿವಿ ತೆಗಸುವಂತೆ ವ್ಯಾಪಾರಿಗಳಿಗೆ ಬೆದರಿಕೆ ಪತ್ರ ಕಳುಹಿಸಿದ ಬಳಿಕ ಕಳ್ಳತನ (ETV Bharat)
author img

By ETV Bharat Karnataka Team

Published : Oct 3, 2024, 2:02 PM IST

ಚಾಮರಾಜನಗರ: ತಮ್ಮ ಅಂಗಡಿಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾ ತೆಗೆದು ಹಾಕುವಂತೆ ಚಿನ್ನದಂಗಡಿ ಹಾಗೂ ಬಟ್ಟೆ ಅಂಗಡಿ ಮಾಲೀಕರಿಗೆ ಅಪರಿಚಿತರು ಬೆದರಿಕೆ ಪತ್ರ ಕಳುಹಿಸಿದ ಬೆನ್ನಲ್ಲೇ ಇತರ ಅಂಗಡಿಗಳಲ್ಲಿ ಕಳ್ಳತನವಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರದ ಎಂ‌.ಕೆ. ಸುಬ್ರಮಣ್ಯ, ಎಂ.ಕೆ. ಶ್ರೀನಿವಾಸ ಹಾಗೂ ವಾಸುಕಿ ಎಂಬುವವರಿಗೆ 'ನಿಮ್ಮ ಅಂಗಡಿಗಳ ಮುಂದೆ ಇರುವ ಸಿಸಿ ಕ್ಯಾಮರಾ ತೆಗೆಸಿ, ಇಲ್ಲದಿದ್ದರೇ ತಕ್ಕ ಪಾಠ ಕಲಿಸುತ್ತೇವೆ' ಬೆದರಿಕೆ ಪತ್ರ ಬರೆದು ಅಂಚೆ ಮೂಲಕ ಡೇಂಜರ್ ಸಿಂಬಲ್ ಬರೆದು ಕಳುಹಿಸಿದ್ದರು. ಮೂರು ಅಂಗಡಿ ಮಾಲೀಕರ ಹೆಸರು ಬರೆದು ಬೆದರಿಕೆ ಹಾಕಿರುವ ಆಸಾಮಿಗಳ ವಿರುದ್ಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆದರೂ ರಾತ್ರಿ ಬೇರೆ ಮೂರು ಅಂಗಡಿಗಳಲ್ಲಿ ಕಳ್ಳತನ ಆಗಿದ್ದು ವ್ಯಾಪಾರಿಗಳನ್ನು ಬೆಚ್ಚಿ ಬೀಳಿಸಿದೆ‌.

ಅಂಗಡಿಗಳ ಸಿಸಿಟಿವಿ ತೆಗೆಸುವಂತೆ ವ್ಯಾಪಾರಿಗಳಿಗೆ ಬೆದರಿಕೆ ಪತ್ರ (ETV Bharat)

ಸರಣಿ ಕಳ್ಳತನ: ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತ ಆಸುಪಾಸಲ್ಲೇ ಸರಣಿ ಕಳ್ಳತನ ತಡರಾತ್ರಿ ನಡೆದಿದ್ದು ವ್ಯಾಪಾರಸ್ಥರು, ಉದ್ಯಮಿಗಳು ದಿಗಿಲುಗೊಂಡಿದ್ದಾರೆ. ಸ್ವಾಗತ್​​ ಟ್ರೇಡರ್ಸ್​, ಪ್ರಭು ಎಲೆಕ್ಟ್ರಿಕಲ್​​​​, ವಿನಯ್​​​ ಆಟೋಮೊಬೈಲ್​ಗಳಲ್ಲಿ ಕಳ್ಳತನ ನಡೆದಿದ್ದು ಸಿಸಿಟಿವಿಗಳನ್ನು ಜಖಂ ಮಾಡಿ, ಏಣಿಗಳನ್ನು ಬಳಸಿ ಕಳ್ಳರು ಕೃತ್ಯ ಎಸಗಿದ್ದಾರೆ.

ಅಂಗಡಿಗಳ ಗ್ಲಾಸ್​ ಕೂಡ ಒಡೆದು ಹಾಕಿರುವ ಖದೀಮರು ಲಕ್ಷಾಂತರ ಮೌಲ್ಯದ ವಸ್ತು, ಹಣವನ್ನು ಎಗರಿಸಿದ್ದಾರೆ. ಹನೂರು ತಾಲೂಕಿನಲ್ಲಿ ಹಾಡಹಗಲೇ ವೃದ್ಧನ ಕೈ- ಕಾಲು ಕಟ್ಟಿ ಹಣ ದೋಚಿದ್ದರು. ಇದಕ್ಕೂ ಮುನ್ನ, ಹನೂರಲ್ಲೇ ಮದುವೆಗೆ ಕೂಡಿಟ್ಟಿದ್ದ ಹಣವನ್ನು ದೋಚಿದ್ದರು. ಚಾಮರಾಜನಗರ ತಾಲೂಕಿನ ಚಂದಕವಾಡಿಯಲ್ಲಿ ಅಂಗಡಿಗಳ ಸರಣಿ ಕಳ್ಳತನ ನಡೆಸಿದ್ದರು.

ಸದ್ಯ ಸರಣಿ ಕಳ್ಳತನ ಸ್ಥಳಗಳಿಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ತಿಪಟೂರು ಷಡಕ್ಷರಿ ಮಠದ ಸ್ವಾಮೀಜಿ ಹನಿಟ್ರ್ಯಾಪ್​ಗೆ ಯತ್ನ: ಮೂವರ ಬಂಧನ - Honeytrap Attempt Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.