ETV Bharat / technology

ಡ್ರೀಮ್ ಪ್ರಾಜೆಕ್ಟ್​ - ಶುಕ್ರಕ್ಕೆ ಹಾರಲು ಸಜ್ಜಾದ ಇಸ್ರೋ: ಯಾವಾಗ, ಇದರ ಉದ್ದೇಶವೇನು? - ISRO Venus Orbiter Mission - ISRO VENUS ORBITER MISSION

ISRO Venus Orbiter Mission: ಚಂದ್ರಯಾನ-3ರ ಅದ್ಭುತ ಯಶಸ್ಸಿನ ನಂತರ ಇಸ್ರೋ ಈಗ ಸೌರವ್ಯೂಹದ ಅತ್ಯಂತ ಬಿಸಿ ಗ್ರಹವಾದ ಶುಕ್ರಕ್ಕೆ ಹಾರಲು ಸಜ್ಜಾಗಿದೆ. ಇಸ್ರೋ ಡ್ರೀಮ್ ಮಿಷನ್ ವೀನಸ್ ಆರ್ಬಿಟರ್ ಉಡಾವಣೆ ದಿನಾಂಕವನ್ನೂ ಪ್ರಕಟಿಸಿದ್ದು, ಇದಕ್ಕಾಗಿ ಸಿದ್ಧತೆಗಳನ್ನು ತೀವ್ರಗೊಳಿಸಿದೆ. ಆ ಮಿಷನ್‌ನ ವಿವರಗಳು ಇಲ್ಲಿವೆ.

VENUS MISSION ISRO LAUNCH DATE  ISRO VENUS ORBITER MISSION  SHUKRAYAAN 1 LAUNCH VEHICLE  SHUKRAYAAN 1 MISSION LAUNCH DATE
ಡ್ರೀಮ್ ಪ್ರಾಜೆಕ್ಟ್​ ಶುಕ್ರಕ್ಕೆ ಹಾರಲು ಸಜ್ಜಾದ ಇಸ್ರೋ (ETV Bharat)
author img

By ETV Bharat Tech Team

Published : Oct 3, 2024, 2:16 PM IST

ISRO Venus Orbiter Mission: ಚಂದ್ರಯಾನ 3 ಯಶಸ್ಸಿನ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರಗ್ರಹಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದೆ. ಈ ಕಾರ್ಯಾಚರಣೆಯಲ್ಲಿ ಬಾಹ್ಯಾಕಾಶ ನೌಕೆಯು ಶುಕ್ರನನ್ನು ತಲುಪಲು 112 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಇಸ್ರೋ ಹೇಳಿದೆ. ಇದರ ಹೆಸರು ವೀನಸ್ ಆರ್ಬಿಟರ್ ಮಿಷನ್ (VOM). ಇಸ್ರೋ ಈ ನೌಕೆಯ ಉಡಾವಣೆ ದಿನಾಂಕವನ್ನು ಪ್ರಕಟಿಸಿದೆ. ಇದು ಶುಕ್ರವನ್ನು ತಲುಪುವ ಭಾರತದ ಮೊದಲ ಮಿಷನ್ ಆಗಿದೆ. ಮಿಷನ್ ಶುಕ್ರನ ವಾತಾವರಣ, ಮೇಲ್ಮೈ ಮತ್ತು ಭೂವೈಜ್ಞಾನಿಕ ಲಕ್ಷಣಗಳನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ. ಈ ಮಿಷನ್‌ಗಾಗಿ ಭಾರತ ಸರ್ಕಾರವು 1,236 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ.

ಶುಕ್ರನಿಗೆ ಇದು ಮೊದಲ ಮಿಷನ್: ಎಲ್ಲವೂ ಸರಿಯಾಗಿ ನಡೆದರೆ, ಶುಕ್ರಯಾನ್-1 ಅನ್ನು ಮಾರ್ಚ್ 29, 2028 ರಂದು ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಹೇಳಿದೆ. ಈ ಮಿಷನ್ ಶುಕ್ರನನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದು ಶುಕ್ರಗ್ರಹಕ್ಕೆ ಹೋಗಲು ಭಾರತದ ಮೊದಲ ಪ್ರಯತ್ನವಾಗಿದೆ. ಇಸ್ರೋದ ಶಕ್ತಿಶಾಲಿ LVM-3 (ಲಾಂಚ್​ ವೆಹಿಕಲ್​ ಮಾರ್ಕ್ 3) ರಾಕೆಟ್ ಈ ಕಾರ್ಯಾಚರಣೆಯಲ್ಲಿ ಬಳಸಲಾಗುವುದು. ನೌಕೆಯು ಉಡಾವಣೆಯಾದ 112 ದಿನಗಳ ನಂತರ ಜುಲೈ 19, 2028 ರಂದು ಶುಕ್ರದ ಮೇಲ್ಮೈ ತಲುಪುತ್ತದೆ. ಬಾಹ್ಯಾಕಾಶ ಲೋಕದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಇಸ್ರೋಗೆ ಇದು ದೊಡ್ಡ ಯಶಸ್ಸು ತಂದುಕೊಡಲಿದೆ.

ವೀನಸ್ ಮಿಷನ್ ಉದ್ದೇಶ: ಮಿಷನ್ VOM ಶುಕ್ರನ ವಾತಾವರಣ, ಮೇಲ್ಮೈ, ಭೂವೈಜ್ಞಾನಿಕ ಲಕ್ಷಣಗಳನ್ನು ಅಧ್ಯಯನ ಮಾಡುವ ಗುರಿ ಹೊಂದಿದೆ. ಮಿಷನ್‌ನ ಪ್ರಾಥಮಿಕ ಉದ್ದೇಶಗಳು ಶುಕ್ರನ ವಾತಾವರಣದ ಸಂಯೋಜನೆ, ಮೇಲ್ಮೈ ಲಕ್ಷಣಗಳು, ಜ್ವಾಲಾಮುಖಿ ಮತ್ತು ಭೂಕಂಪನ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವುದು. ಬಾಹ್ಯಾಕಾಶ ನೌಕೆಯು ಕೃತಕ ಪೋರ್ಟಲ್ ರಾಡಾರ್, ಇನ್ಫಾರೆಡ್​, ಅಲ್ಟ್ರಾವಾಯ್ಲೆಟ್​ ಕ್ಯಾಮೆರಾಗಳು, ಸೆನ್ಸಾರ್​ಗಳು ಸೇರಿದಂತೆ ಸುಧಾರಿತ ಸಾಧನಗಳನ್ನು ಶುಕ್ರವನ್ನು ಅಧ್ಯಯನ ಮಾಡಲು ಆರ್ಬಿಟರ್‌ ಒಯ್ಯುತ್ತದೆ. ಈ ಉಪಕರಣಗಳು ವಿಜ್ಞಾನಿಗಳಿಗೆ ಶುಕ್ರನ ದಟ್ಟವಾದ, ಇಂಗಾಲದ ಡೈಆಕ್ಸೈಡ್ - ಸಮೃದ್ಧ ವಾತಾವರಣ ಮತ್ತು ಗ್ರಹದ ಮೇಲ್ಮೈಯಲ್ಲಿ ಸಕ್ರಿಯ ಜ್ವಾಲಾಮುಖಿಗಳ ಸಾಧ್ಯತೆಯಂತಹ ರಹಸ್ಯಗಳನ್ನು ಬಿಚ್ಚಿಡಲು ಸಹಾಯ ಮಾಡುತ್ತದೆ.

1,236 ಕೋಟಿ ರೂ. ಮೀಸಲು: ಸ್ವೀಡಿಶ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಫಿಸಿಕ್ಸ್ (ಐಆರ್‌ಎಫ್) ಸೂರ್ಯ ಮತ್ತು ಶುಕ್ರದ ವಾತಾವರಣದಿಂದ ಕಣಗಳನ್ನು ಅಧ್ಯಯನ ಮಾಡಲು ಇಸ್ರೋಗೆ ವೀನಸ್ ನ್ಯೂಟ್ರಲ್ ವಿಶ್ಲೇಷಕ (ವಿಎನ್‌ಎ) ಉಪಕರಣವನ್ನು ಒದಗಿಸುತ್ತದೆ. ಈ ಮಿಷನ್‌ಗಾಗಿ ಭಾರತ ಸರ್ಕಾರ 1,236 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ವೀನಸ್ ಆರ್ಬಿಟರ್ ಮಿಷನ್ ಭಾರತದ ಬಾಹ್ಯಾಕಾಶ ಪರಿಶೋಧನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಓದಿ: ರಹಸ್ಯಗಳ ರಾಶಿ ಪ್ಲುಟೊದ ಅತಿ ದೊಡ್ಡ ಚಂದ್ರ 'ಚರೋನ್'ನಲ್ಲೇನಿದೆ?: ವಿಜ್ಞಾನಿಗಳು ಇಲ್ಲಿ ಕಂಡುಕೊಂಡಿದ್ದೇನು? - Dwarf Planet Pluto

ETV Bharat Logo

Copyright © 2024 Ushodaya Enterprises Pvt. Ltd., All Rights Reserved.