ETV Bharat / snippets

ಶಿವಮೊಗ್ಗ: ಕಡವೆ ಬೇಟೆಯಾಡಿ ಮಾಂಸ ಹಂಚಿಕೊಳ್ಳುತ್ತಿದ್ದ ನಾಲ್ವರ ಬಂಧನ

author img

By ETV Bharat Karnataka Team

Published : Sep 2, 2024, 1:59 PM IST

deer hunting
ಕಡವೆ ಬೇಟೆಗಾರರ ಬಂಧನ (ETV Bharat)

ಶಿವಮೊಗ್ಗ: ಜಿಲ್ಲೆಯ ಉಂಬ್ಳೆಬೈಲು ವಲಯ ವ್ಯಾಪ್ತಿಯಲ್ಲಿ ಕಡವೆ ಬೇಟೆಯಾಡಿದ್ದ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಕಾಡಿನಲ್ಲಿ ಕಡವೆ ಕೊಂದು, ಮಾಂಸ ಹಂಚಿಕೊಳ್ಳುವಾಗ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದು, ನಾಲ್ವರು ಸಿಕ್ಕಿಬಿದ್ದಿದ್ದಾರೆ.

ಭದ್ರಾವತಿಯ ಹಿರಿಯೂರಿನ ಗೊಂದಿ ಗ್ರಾಮದ ನಿವಾಸಿಗಳಾದ ಶಿವ (28), ವೆಂಕಟೇಶ್ (60), ಚಿಕ್ಕಮಗಳೂರು ಜಿಲ್ಲೆ ಚೌಡಿಕಟ್ಟೆಯ ಭೈರಾಪುರ ಗ್ರಾಮದ ಮಂಜಪ್ಪ (45) ಹಾಗೂ ವಿನೋದ್ (19) ಬಂಧಿತರು. ಇವರನ್ನು ಎನ್.ಆರ್.ಪುರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಸಿಎಫ್​ ಆಶೀಶ್ ರೆಡ್ಡಿ, ಭದ್ರಾವತಿ ಎಸಿಎಫ್​ ರತ್ನಪ್ರಭ ಮಾರ್ಗದರ್ಶನದಲ್ಲಿ ಉಂಬ್ಳೆಬೈಲು ಆರ್​ಎಫ್​ಒ ಗಿಡ್ಡಸ್ವಾಮಿ, ಡಿಆರ್​​ಎಫ್​ಒ ಪವನ್, ಸಂಜು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಬೆಂಗಳೂರು: ತಲ್ವಾರ್ ತೋರಿಸಿ ಡೆಲಿವರಿ ಬಾಯ್‌ಗಳನ್ನು ದೋಚುತ್ತಿದ್ದ ಮೂವರ ಬಂಧನ - Robbery Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.