ದಾವಣಗೆರೆ: ನವರಾತ್ರಿ ಪ್ರಯುಕ್ತ ನಗರದ ರಾಮ್ ಆ್ಯಂಡ್ ಕೋ ವೃತ್ತದ ಬಳಿಯ ಸ್ವೆಟ್ ಪಾರ್ಕ್ ಸಂಸ್ಥೆ ಆಯೋಜಿಸಿದ್ದ ದಾಂಡಿಯಾ ರಾಸ್ ಅನ್ನು ಇಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು. ನಂತರ ಅವರೂ ಕೋಲಾಟ ಆಡಿ ಸಂಭ್ರಮಿಸಿದರು.
ನವರಾತ್ರಿ ಎರಡನೇ ದಿನವಾದ ಇಂದು ದಾವಣಗೆರೆಯ ಬಹುತೇಕ ಕಡೆ ದಾಂಡಿಯಾ ನೃತ್ಯ ಮಾಡಲಾಗುತ್ತಿದೆ. ದಾಂಡಿಯಾ ರಾಸ್ನಲ್ಲಿ ಮಹಿಳೆಯರು ಪಾಲ್ಗೊಂಡು ಸಂಭ್ರಮಿಸಿದರು. ನೃತ್ಯದಲ್ಲಿ ಪಾಲ್ಗೊಳ್ಳಲು ನೆರೆಹೊರೆ ಜಿಲ್ಲೆಗಳಿಂದಲೂ ಮಹಿಳೆಯರು ಇಲ್ಲಿಗೆ ಆಗಮಿಸುವುದು ವಿಶೇಷವಾಗಿದೆ.
ಗುಜರಾತ್‍ನ ಸಾಂಪ್ರದಾಯಿಕ ಜಾನಪದ ನೃತ್ಯರೂಪ ದಾಂಡಿಯಾ ರಾಸ್ ದಾವಣಗೆರೆಯಲ್ಲಿ ಖ್ಯಾತಿ ಪಡೆದಿದೆ. ಈ ನೃತ್ಯವನ್ನು ದಸರಾ ಹಬ್ಬದ ವೇಳೆ ಆಯೋಜಿಸಲಾಗುತ್ತದೆ. ಇದು ಪಶ್ಚಿಮ ಭಾರತದಲ್ಲಿ ನವರಾತ್ರಿ ಸಂದರ್ಭದಲ್ಲಿ ನಡೆಯುವ ವೈಶಿಷ್ಟ್ಯಪೂರ್ಣ ನೃತ್ಯ ಪ್ರಕಾರ.
ಇದನ್ನೂ ಓದಿ: ದಾವಣಗೆರೆ: ನಾಳೆ ಹಿಂದೂ ಮಹಾಗಣಪತಿ ಶೋಭಾಯಾತ್ರೆ, ಬಿಗಿ ಭದ್ರತೆ - Hindu Maha Ganapati Procession