ETV Bharat / sports

​ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಮ್ಮೆಯೂ ಔಟಾಗದ ಭಾರತೀಯ ಆಟಗಾರರು ಇವರು! - Indian Players Who Never Got Out - INDIAN PLAYERS WHO NEVER GOT OUT

ಭಾರತದ ಮೂವರು ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಮ್ಮೆಯೂ ಔಟಾಗದೇ ದಾಖಲೆ ಬರೆದಿದ್ದಾರೆ.

ಕ್ರಿಕೆಟ್​ನಲ್ಲಿ ಒಮ್ಮೆಯೂ ಔಟ್​ ಆಗದ ಭಾರತೀಯ ಆಟಗಾರರು
ಕ್ರಿಕೆಟ್ (Getty Images)
author img

By ETV Bharat Sports Team

Published : Oct 4, 2024, 9:41 PM IST

ಹೈದರಾಬಾದ್​: ಟೀಂ ಇಂಡಿಯಾ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅದರಲ್ಲೂ ಏಕದಿನ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ದಿಗ್ಗಜರು ನಿರ್ಮಿಸಿರುವ ಕೆಲವು ದಾಖಲೆಗಳನ್ನು ಮುರಿಯಲು ಇಂದಿಗೂ ಯಾವೊಬ್ಬ ಆಟಗಾರನಿಂದಲೂ ಸಾಧ್ಯವಾಗಿಲ್ಲ. ಇಂತಹ ದೊಡ್ಡ ದಾಖಲೆಗಳನ್ನು ಬರೆದಿರುವ ಈ ಆಟಗಾರರು ಹಲವಾರು ಬಾರಿ ಔಟಾಗಿದ್ದಾರೆ. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಒಮ್ಮೆಯೂ ಔಟಾಗದ ಭಾರತದ ಆಟಗಾರರಿದ್ದಾರೆ.

ಭರತ್ ರೆಡ್ಡಿ: ಭಾರತದ ಮಾಜಿ ಕ್ರಿಕೆಟಿಗ ಭರತ್ ರೆಡ್ಡಿ 1978ರಿಂದ 1981ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಈ ಅವಧಿಯಲ್ಲಿ ಮೂರು ಏಕದಿನದ ಪಂದ್ಯಗಳನ್ನು ಆಡಿದ್ದ ಇವರು​ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಮೂರು ಪಂದ್ಯಗಳಲ್ಲಿ ಆಡಿರುವ ರೆಡ್ಡಿ ಎರಡು ಬಾರಿ ಮಾತ್ರ ಬ್ಯಾಟಿಂಗ್ ಮಾಡಿದ್ದರು. ಎರಡೂ ಪಂದ್ಯಗಳಲ್ಲಿ ಅಜೇಯರಾಗುಳಿದಿದ್ದರು. ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಇದುವರೆಗೆ ಔಟಾಗದ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ.

ಸೌರಭ್ ತಿವಾರಿ: ಎಡಗೈ ಬ್ಯಾಟರ್ ಆಗಿ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಸೌರಭ್ ತಿವಾರಿ 2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಭಾರತಕ್ಕಾಗಿ 3 ಏಕದಿನ ಪಂದ್ಯಗಳನ್ನಾಡಿ 49 ರನ್ ಗಳಿಸಿದ್ದರು. ಈ ಮೂರು ಪಂದ್ಯಗಳಲ್ಲಿ ಸೌರಭ್ ತಿವಾರಿ ಅಜೇಯರಾಗುಳಿದಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಒಮ್ಮೆಯೂ ಔಟಾಗದ ಬ್ಯಾಟರ್‌ ಆಗಿದ್ದಾರೆ.

ಫೈಜ್ ಫಜಲ್: ಇವರೂ​ ಸಹ ಏಕದಿನ ಕ್ರಿಕೆಟ್‌ನಲ್ಲಿ ಅಜೇಯ ಬ್ಯಾಟರ್‌ಗಳ ಪಟ್ಟಿ ಸೇರಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ ಫಜಲ್ 2016ರಂದು ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 55ರನ್ ಗಳಿಸಿ ಔಟಾಗದೆ ಉಳಿದಿದ್ದರು. ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಫಯಾಜ್‌ಗೆ ಭಾರತ ತಂಡದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಅದರ ನಂತರ, ಅವರ ವೃತ್ತಿಜೀವನ ಕೇವಲ ಒಂದು ಏಕದಿನ ಪಂದ್ಯದೊಂದಿಗೆ ಕೊನೆಗೊಂಡಿತ್ತು.

ಇದನ್ನೂ ಓದಿ: 'ಅದೆಲ್ಲ ಶೋ ಆಫ್': ಮೊಹ್ಮದ್ ​ಶಮಿ ವಿರುದ್ಧ ಮತ್ತೆ ಗುಡುಗಿದ ಮಾಜಿ ಪತ್ನಿ - Shami Ex Wife Hasin Jahan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.