ETV Bharat / state

ಶ್ರೀರಂಗಪಟ್ಟಣ ದಸರಾ: ಜಂಬೂಸವಾರಿ ವೇಳೆ ಕೆಲಕಾಲ ಆತಂಕ ಸೃಷ್ಠಿಸಿದ ಹಿರಣ್ಯ ಆನೆ - Srirangapatna Dasara

ಐತಿಹಾಸಿಕ ಶ್ರೀರಂಗಪಟ್ಟಣ ದಸರಾದಲ್ಲಿ ಹಿರಣ್ಯ ಆನೆ ಕೆಲಕಾಲ ಆತಂಕ ಸೃಷ್ಠಿಸಿತು.

author img

By ETV Bharat Karnataka Team

Published : 2 hours ago

Hiranya elephant
ಹಿರಣ್ಯ ಆನೆ (ETV Bharat)

ಮಂಡ್ಯ: ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಹಿರಣ್ಯ ಹೆಣ್ಣಾನೆ ಇಂದು ಕೆಲಕಾಲ ಆತಂಕ ಸೃಷ್ಟಿಸಿತು. ನಂತರ ಮಾವುತ ಹಾಗೂ ಕಾವಾಡಿಗಳು ಆನೆಯನ್ನು ಸಮಾಧಾನಪಡಿಸಿದ್ದಾರೆ. ರಂಗನಾಥ ಮೈದಾನದಿಂದ ಬನ್ನಿಮಂಟಪಕ್ಕೆ ಬರುವ ವೇಳೆ ಲಾರಿ ಹತ್ತಲು ಹೋಗಿ ಅಲ್ಲಿಯೇ ಇದ್ದ ಬಿಳಿ‌ ಕುದುರೆಯನ್ನು ನೋಡಿ ಹಿರಣ್ಯ ಬೆಚ್ಚಿ ಓಡಿದ್ದಳು. ಜನರೂ ಕೂಡ ದಿಕ್ಕಾಪಾಲಾಗಿ ಓಡಿದರು.

ಈ ಕುರಿತು ಡಿಎಫ್ಒ ಡಾ.ಪ್ರಭುಗೌಡ ಮಾತನಾಡಿ, "ಶ್ರೀರಂಗಪಟ್ಟಣಕ್ಕೆ ಮಹೇಂದ್ರ, ಹಿರಣ್ಯ, ಲಕ್ಷ್ಮಿ ಆನೆಗಳನ್ನು ಕರೆತಂದು ದಸರಾ ಆಚರಣೆ ಮಾಡುತ್ತಿದ್ದೇವೆ. ಲಾರಿ ಹತ್ತುವಾಗ ಸಾಮಾನ್ಯವಾಗಿ ಹಿರಣ್ಯ ಆನೆಗೆ ಹಿಂಜರಿಕೆ ಇರುತ್ತದೆ. ಕ್ಯಾಂಪ್‌ನಲ್ಲಿರುವಾಗಲೂ ಒಂದೂವರೆ ಗಂಟೆ ತೆಗೆದುಕೊಂಡಿತ್ತು. ಇವತ್ತು ಲಾರಿ ಇಳಿದು ಬಂದ ನಂತರ ಮಾವುತರು ಅದನ್ನು ಮತ್ತೆ ಸಮಾಧಾನಪಡಿಸಿ ಹತ್ತಿಸಿದರು" ಎಂದರು.

ಡಿಎಫ್​ಒ ಡಾ.ಪ್ರಭುಗೌಡ ಪ್ರತಿಕ್ರಿಯೆ (ETV Bharat)

ಕಿರಂಗೂರು ಬಳಿ ಬನ್ನಿಮಂಟಪದಲ್ಲಿ ಮಧ್ಯಾಹ್ನ 12.30ಕ್ಕೆ ನಂದಿಧ್ವಜ ಪೂಜೆ, 2.30ರಿಂದ 3ರವರೆಗೂ ಸಲ್ಲುವ ಶುಭ ಮಕರ ಲಗ್ನದಲ್ಲಿ ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸಿ, ಜಂಬೂ ಸವಾರಿ ಮೆರವಣಿಗೆಗೆ ನಟ ಶಿವ ರಾಜ್‌ಕುಮಾರ್ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಬೇಕಿತ್ತು. ಆದರೆ ಶಿವ ರಾಜ್‌ಕುಮಾರ್ ತಡವಾಗಿ ಬಂದ ಹಿನ್ನೆಲೆಯಲ್ಲಿ ಯಮಗಂಡ ಕಾಲದಲ್ಲಿ 3.24ಕ್ಕೆ ಚಾಲನೆ ನೀಡಿದರು.

ಜಂಬೂಸವಾರಿಯಲ್ಲಿ ಅಂಬಾರಿ ಆನೆ ಮಹೇಂದ್ರನಿಗೆ ಅಕ್ಕಪಕ್ಕದಲ್ಲಿ ಹಿರಣ್ಯ, ಲಕ್ಷ್ಮಿ ಆನೆಗಳು ಸಾಥ್ ನೀಡಿದವು. ಬನ್ನಿಮಂಟಪದಿಂದ ಬ್ಯಾಂಡ್, ಪೂಜಾ ಕುಣಿತ, ವೀರಗಾಸೆ, ನಗಾರಿ, ಜಡೆಕೋಲಾಟ, ಗಾರುಡಿಗೊಂಬೆ, ತಮಟೆ, ದೊಣ್ಣೆವರಸೆ ಸೇರಿದಂತೆ ಸ್ತಬ್ದಚಿತ್ರಗಳ ಮೆರವಣಿಗೆ ರಂಗನಾಥ ದೇವಾಲಯದವರೆಗೆ ಸಾಗಿತು.

ಕಾರ್ಯಕ್ರಮದಲ್ಲಿ ಸಚಿವರಾದ ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್ ಸೇರಿ ಶಾಸಕರು ಪಾಲ್ಗೊಂಡಿದ್ದರು.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ದಸರಾವನ್ನು 1610ರಲ್ಲಿ ಅಂದಿನ ವಿಜಯನಗರ ಸಾಮ್ರಾಜ್ಯದ ದೊರೆ ಪ್ರಾರಂಭಿಸಿದ್ದರು. 1799ರವರೆಗೂ ಶ್ರೀರಂಗಪಟ್ಟಣದಲ್ಲಿ ದಸರಾ ನಡೆಯುತ್ತಿತ್ತು. ನಂತರ ಮೈಸೂರಿಗೆ ಸ್ಥಳಾಂತರಿಸಲಾಗಿದೆ. ಹೀಗಾಗಿ, ಶ್ರೀರಂಗಪಟ್ಟಣ ದಸರಾ ಮೈಸೂರಿನ ದಸರಾಗಿಂತಲೂ ಹಳೆಯದು.

ಇದನ್ನೂ ಓದಿ: ದಸರಾ ಮಹೋತ್ಸವ: ದೀಪಾಲಂಕಾರದಿಂದ ಚಾಮರಾಜನಗರ ಜಗಮಗ- ವಿಡಿಯೋ - Dasara lightings

ETV Bharat Logo

Copyright © 2024 Ushodaya Enterprises Pvt. Ltd., All Rights Reserved.