ಶಿವಮೊಗ್ಗ: ನಗರದ ನೆಹರು ಕ್ರೀಡಾಂಗಣದಲ್ಲಿ ನಿನ್ನೆಯಿಂದ (ಆಗಸ್ಟ್ 22) 2024ನೇ ಸಾಲಿನ ಅಗ್ನಿಪಥ್ ಯೋಜನೆಯಡಿ ಸೇನಾ ನೇಮಕಾತಿ ಪ್ರಾರಂಭವಾಗಿದ್ದು, ಆಗಸ್ಟ್ 30ರವರೆಗೆ ನಡೆಯಲಿದೆ. ಮಂಗಳೂರು ನೇಮಕಾತಿ ಮುಖ್ಯಾಲಯ, ಬೆಂಗಳೂರು ವಲಯದ ಸಹಯೊಗದೊಂದಿಗೆ ಅಗ್ನಿವೀರ್ ಸೇನಾ ರ‍್ಯಾಲಿ ನಡೆಯುತ್ತಿದೆ.
ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಸುಮಾರು 6,000 ಅಭ್ಯರ್ಥಿಗಳು ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ನಿನ್ನೆ ಬೆಂಗಳೂರು ಸೇನಾ ನೇಮಕಾತಿ ವಲಯದ ಸೇನಾಧಿಕಾರಿಗಳಾದ ಬ್ರಿಗೇಡಿಯರ್ ಎಸ್.ಕೆ. ಸಿಂಗ್ ಅವರು ಸೇನಾ ಭರ್ತಿ ರ‍್ಯಾಲಿಯ ಮೊದಲನೇ ದಿನದ ಪ್ರಕ್ರಿಯೆಯನ್ನು ಉದ್ಘಾಟಿಸಿದರು. ಅಭ್ಯರ್ಥಿಗಳು 1.6 ಕಿ.ಮೀ ಓಟದಲ್ಲಿ ಉತ್ಸುಕತೆಯಿಂದ ಪಾಲ್ಗೊಂಡರು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ(ಪ್ರ) ಡಾ.ಸಿ.ಎ. ಹಿರೇಮಠ ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಆಗಸ್ಟ್ 22 ರಿಂದ 31ರ ವರೆಗೆ ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿ - AGNI PATH RECRUITMENT RALLY