ಅಬುಜಾ(ನೈಜೀರಿಯಾ): ಶನಿವಾರದಿಂದ 3 ದೇಶಗಳ ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ನೈಜೀರಿಯಾ ರಾಜಧಾನಿ ಅಬುಜಾಕ್ಕೆ ಬಂದಿಳಿದರು. ಮೋದಿ ಅವರನ್ನು ಅಬುಜಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೆಡರಲ್ ಕ್ಯಾಪಿಟಲ್ ಟೆರಿಟರಿ ಸಚಿವ ನೇಸಮ್ ಎಜ್ನಾವೋ ವೈಕ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಮೋದಿ ವಿಮಾನದಿಂದ ಕೆಳಗಿಳಿಯುತ್ತಿದ್ದಂತೆ 'ಕೀ ಟು ದ ಸಿಟಿ' (ಅಬುಜಾ ನಗರದ ಕೀಲಿಕೈ) ನೀಡಿದ ಅವರು ವಿಶೇಷ ಗೌರವ ನೀಡಿದರು. ಈ ರೀತಿ ಕೀಲಿ ಕೈ ನೀಡುತ್ತಿರುವುದು ನೈಜೀರಿಯಾ ಜನರ ನಂಬಿಕೆ ಮತ್ತು ಗೌರವದ ಪ್ರತೀಕವಾಗಿದೆ.
ತಮ್ಮ ಭೇಟಿಯ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಮೋದಿ, "ಎರಡೂ ದೇಶಗಳ ನಡುವಿನ ಸ್ನೇಹ ಸಂಬಂಧವನ್ನು ಇನ್ನಷ್ಟು ಗಾಢವಾಗಿಸುವುದು ಈ ಪ್ರವಾಸದ ಉದ್ದೇಶ" ಎಂದು ತಿಳಿಸಿದ್ದಾರೆ. "ಸ್ವಲ್ಪ ಹೊತ್ತಿಗೆ ಮುನ್ನ ನೈಜೀರಿಯಾಕ್ಕೆ ಬಂದಿಳಿದೆ. ಆತ್ಮೀಯ ಸ್ವಾಗತಕ್ಕೆ ಆಭಾರಿ. ಈ ಭೇಟಿ ಉಭಯ ದೇಶಗಳ ಗೆಳೆತನವನ್ನು ಇನ್ನಷ್ಟು ಗಾಢವಾಗಿಸಲಿ" ಅವರು ತಿಳಿಸಿದ್ದಾರೆ.
#WATCH | Prime Minister Narendra Modi lands in Abuja, the capital city of the Federal Republic of Nigeria; receives a grand welcome
— ANI (@ANI) November 16, 2024
He is on a three-nation tour to Nigeria, Brazil and Guyana from November 16 to 21. On the first leg of his visit, PM is in Nigeria. In Brazil, PM… pic.twitter.com/0LWi0beBWU
ನೈಜೀರಿಯಾ ಅಧ್ಯಕ್ಷ ಬೊಲಾ ಅಹಮ್ಮದ್ ತಿನುಬು 'ಎಕ್ಸ್' ಖಾತೆಯಲ್ಲಿ ಪ್ರತಿಕ್ರಿಯಿಸಿ, "ಪ್ರಧಾನಿ ಮೋದಿ ಅವರನ್ನು ನೈಜೀರಿಯಾಕ್ಕೆ ಸ್ವಾಗತಿಸಲು ಎದುರು ನೋಡುತ್ತಿದ್ದೇನೆ. 2007ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಪ್ರಧಾನಿಯೊಬ್ಬರು ನೈಜೀರಿಯಾಕ್ಕೆ ಆಗಮಿಸಿದ್ದಾರೆ. ಈ ಭೇಟಿಯಿಂದ ಉಭಯ ದೇಶಗಳ ಸಂಬಂಧವೃದ್ಧಿಸಲಿದೆ" ಎಂದು ತಿಳಿಸಿದ್ದಾರೆ.
I look forward to welcoming Prime Minister Narendra Modi on his first visit to Nigeria, which is also the first visit by an Indian Prime Minister to our dear country since 2007.
— Bola Ahmed Tinubu (@officialABAT) November 16, 2024
Our bilateral discussions will seek to expand the strategic partnership between both countries and…
ಇದಕ್ಕೂ ಮುನ್ನ ಮೋದಿ ಅಬುಜಾಕ್ಕೆ ಆಗಮಿಸುತ್ತಿದ್ದಂತೆ, ಭಾರತೀಯ ಸಮುದಾಯದವರು ಅದ್ಧೂರಿ ಸ್ವಾಗತ ಕೋರಿದರು. ಅನೇಕರು ಭಾರತದ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದರು. 'ಭಾರತ್ ಮಾತಾ ಕೀ ಜೈ' ಎಂಬ ಘೋಷಣೆಗಳನ್ನು ಕೂಗಿದರು.
"ನಾವು ನಮ್ಮ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಅತ್ಯಂತ ಉತ್ಸುಕರಾಗಿದ್ದೇವೆ. ಇದು ನೈಜೀರಿಯಾಗೆ ಅವರ ಮೊದಲ ಭೇಟಿಯಾಗಿದೆ. ನಾವು ಅವರನ್ನು ಸ್ವಾಗತಿಸುತ್ತೇವೆ" ಎಂದು ಭಾರತೀಯ ಸಮುದಾಯದ ಸದಸ್ಯ ಗಿರಿಶ್ ಜೈಕರ್ ಹೇಳಿದರು.
"ಭಾರತದ ಪ್ರಧಾನಿಯೊಬ್ಬರು 15 ವರ್ಷಗಳ ನಂತರ ನೈಜೀರಿಯಾಗೆ ಬಂದಿದ್ದಾರೆ. ಇದು ನಮಗೆ ಅತ್ಯಂತ ಖುಷಿ ಕೊಟ್ಟಿದೆ. ಭಾರತ ಮತ್ತು ನೈಜೀರಿಯಾ ಸಂಬಂಧ ಸುಧಾರಣೆಯಾಗಬೇಕಿದೆ. ಈ ನಿಟ್ಟಿನಲ್ಲಿ ಮೋದಿ ಅವರಿಂದ ನಮಗೆ ತುಂಬಾ ನಿರೀಕ್ಷೆಗಳಿವೆ. ಒಳ್ಳೆಯ ಫಲಿತಾಂಶ ಹೊರಬರಲಿ" ಎಂದು ಭಾರತೀಯ ಸಮುದಾಯದ ಮತ್ತೋರ್ವ ಸದಸ್ಯ ರಮೇಶ್ ಮಲಿಕ್ ತಿಳಿಸಿದರು.
Thank you, President Tinubu.
— Narendra Modi (@narendramodi) November 16, 2024
Landed a short while ago in Nigeria. Grateful for the warm welcome. May this visit deepen the bilateral friendship between our nations. @officialABAT https://t.co/hlRiwj1XnV pic.twitter.com/iVW1Pr60Zi
ನೈಜೀರಿಯಾ ಪ್ರವಾಸದ ಬಳಿಕ ಮೋದಿ ಬ್ರೆಜಿಲ್‌ಗೆ ತೆರಳಲಿದ್ದು, ನವೆಂಬರ್ 18, 19ರಂದು ನಡೆಯುವ 19ನೇ ಜಿ20 ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಗಯಾನಾಗೆ ಐತಿಹಾಸಿಕ ಭೇಟಿ: ಇದಾದ ಬಳಿಕ ತಮ್ಮ ಪ್ರವಾಸದ ಕೊನೆಯ ಭಾಗವಾಗಿ ಗಯಾನಾಕ್ಕೆ ತೆರಳುವರು. ಈ ದೇಶಕ್ಕೆ ಭಾರತೀಯ ಪ್ರಧಾನಿಯೊಬ್ಬರು ಐದು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದು, ಮೋದಿ ಇತಿಹಾಸ ನಿರ್ಮಿಸಲಿದ್ದಾರೆ. ಈ ಸಂದರ್ಭದಲ್ಲಿ ಮೋದಿ, ಗಯಾನದ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡುವರು. ಮತ್ತು ಆ ದೇಶಕ್ಕೆ 185 ವರ್ಷಗಳಿಗೂ ಹಿಂದೆ ವಲಸೆ ಹೋಗಿದ್ದ ಭಾರತೀಯ ಸಮುದಾಯದವರಿಗೆ ಗೌರವ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ದೊರೆತ ವಿವಿಧ ದೇಶಗಳ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಿವು