ETV Bharat / spiritual

ವಾರದ ರಾಶಿ ಭವಿಷ್ಯ: ಆರ್ಥಿಕ ಲಾಭ, ಪ್ರೇಮ ಸಂಬಂಧದಲ್ಲಿ ಪ್ರಗತಿ, ಆರೋಗ್ಯ ಸುಧಾರಣೆ - WEEKLY HOROSCOPE

ನವೆಂಬರ್ 17ರಿಂದ 23ರವರೆಗಿನ ವಾರದ ರಾಶಿ ಭವಿಷ್ಯ ಹೀಗಿದೆ.

ವಾರದ ರಾಶಿ ಭವಿಷ್ಯ Weekly Horoscope
ವಾರದ ರಾಶಿ ಭವಿಷ್ಯ (ETV Bharat)
author img

By ETV Bharat Karnataka Team

Published : Nov 17, 2024, 8:08 AM IST

ಮೇಷ: ಈ ರಾಶಿಯಲ್ಲಿ ಹುಟ್ಟಿದವರಿಗೆ ವಾರದಲ್ಲಿ ಸಾಕಷ್ಟು ಅವಕಾಶಗಳು ದೊರೆಯಲಿವೆ. ವಾರದ ಆರಂಭದಿಂದಲೇ ನಿಮಗೆ ಸಾಕಷ್ಟು ಆರ್ಥಿಕ ಲಾಭ ಉಂಟಾಗಲಿದ್ದು, ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ವೃದ್ಧಿ ಉಂಟಾಗಲಿದೆ. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸು ದೊರೆಯಲಿದೆ. ಮೇಷ ರಾಶಿಯಲ್ಲಿ ಹುಟ್ಟಿದ ಮಹಿಳೆಯರು ಧಾರ್ಮಿಕ ಕಾರ್ಯದತ್ತ ಆಸಕ್ತಿ ತೋರಲಿದ್ದು, ಧನ್ಯತಾ ಭಾವವನ್ನು ಅನುಭವಿಸಲಿದ್ದಾರೆ. ವ್ಯವಹಾರದಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಆದರೆ ನಿಮ್ಮ ವ್ಯವಹಾರದಲ್ಲಿ ಎಚ್ಚರಿಕೆ ವಹಿಸುವುದು ಮತ್ತು ಎದುರಾಳಿಗಳ ಮೇಲೆ ನಿಗಾ ಇರಿಸುವುದು ಅಗತ್ಯ. ವಾರದ ಕೊನೆಗೆ ಅರ್ಥಪೂರ್ಣ ಅಥವಾ ಧಾರ್ಮಿಕ ಚಟುವಟಿಕೆಗಳಲ್ಲಿ ನೀವು ಪಾಲ್ಗೊಳ್ಳುವ ಸಾಧ್ಯತೆ ಇದ್ದು ಇದರಿಂದ ನಿಮಗೆ ಸಂತೃಪ್ತಿ ದೊರೆಯಲಿದೆ. ಪ್ರೇಮ ಸಂಬಂಧದಲ್ಲಿ ಪ್ರಗತಿ ಕಾಣಿಸಿಕೊಳ್ಳಲಿದೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಾಮರಸ್ಯ ಮತ್ತು ಸಂತಸ ಕಾಣಿಸಿಕೊಳ್ಳಲಿದೆ. ಈ ವಾರದಲ್ಲಿ ಆರೋಗ್ಯವು ಸಾಧಾರಣ ಮಟ್ಟದಲ್ಲಿರಲಿದ್ದು, ನಿಮ್ಮ ಯೋಗಕ್ಷೇಮಕ್ಕೆ ಗಮನ ನೀಡುವುದು ಅಗತ್ಯ. ನಿಮ್ಮ ಮಕ್ಕಳಿಗೆ ಸಂಬಂಧಿಸಿದಂತೆ ಎದುರಾಗುವ ಪ್ರಮುಖ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ಸು ದೊರೆಯಲಿದೆ.

ವೃಷಭ: ಈ ರಾಶಿಯಲ್ಲಿ ಹುಟ್ಟಿದವರಿಗೆ, ತಮ್ಮ ಬದುಕಿನ ವಿವಿಧ ಆಯಾಮಗಳ ಕುರಿತು ಪರ್ಯಾಲೋಚನೆ ನಡೆಸಲು ಈ ವಾರವು ಸೂಕ್ತ. ಉದ್ವೇಗದಿಂದ ವರ್ತಿಸಿದರೆ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ನಿಮ್ಮ ಕೆಲಸವನ್ನು ಸಕಾಲದಲ್ಲಿ ಮುಗಿಸುವುದಕ್ಕಾಗಿ ಹೆಚ್ಚಿನ ಶ್ರಮ ಮತ್ತು ಪ್ರಯತ್ನದ ಅಗತ್ಯವಿದೆ. ವಾರದ ಆರಂಭದಲ್ಲಿ, ನಿಮ್ಮ ಶ್ರಮಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಬಹುದು. ಆದರೆ ನಿಮ್ಮ ಆತ್ಮೀಯ ಗೆಳೆಯರಿಂದ ಹೆಚ್ಚಿನ ನೆರವು ಸಿಗದೆ ಹೋಗಬಹುದು. ಆದರೆ ವಾರದ ಕೊನೆಗೆ ಅನಿರೀಕ್ಷಿತವಾಗಿ ಆರ್ಥಿಕ ಲಾಭ ಉಂಟಾಗಲಿದ್ದು ಇದರಿಂದಾಗಿ ನಿಮಗೆ ಸಂತಸ ಲಭಿಸಲಿದೆ. ಜಮೀನಿನ ಅಭಿವೃದ್ಧಿಗೆ ಸಂಬಂಧಿಸಿದ ಸಂಘರ್ಷವು ನಿಮ್ಮ ಚಿಂತೆಗೆ ಕಾರಣವೆನಿಸಬಹುದು. ಪ್ರಣಯ ಸಂಬಂಧದಲ್ಲಿ ಎದುರಾಗುವ ಯಾವುದೇ ತಪ್ಪು ಗ್ರಹಿಕೆಯನ್ನು ಮುಕ್ತ ಸಂವಹನದ ಮೂಲಕ ಬಗೆಹರಿಸಲು ಯತ್ನಿಸಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರು ತಮ್ಮ ಗುರಿಯನ್ನು ಈಡೇರಿಸಬೇಕಾದರೆ ಸಾಕಷ್ಟು ಶ್ರಮ ವಹಿಸಬೇಕು.

ಮಿಥುನ: ಈ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲಿ ಸವಾಲುಗಳು ಎದುರಾಗಬಹುದು. ಆದರೆ ಅಂತಿಮವಾಗಿ ಅವರ ಪರಿಶ್ರಮ ಮತ್ತು ಪ್ರಯತ್ನಕ್ಕೆ ಗೆಲುವು ದೊರೆಯಲಿದೆ. ಆರಂಭದಲ್ಲಿ ಅಡಚಣೆಗಳು ಎದುರಾಗಬಹುದು. ಆದರೆ ವಾರದ ಕೊನೆಗೆ ಎಲ್ಲವೂ ನಿಮ್ಮ ಪರವಾಗಿರಲಿದ್ದು, ಅನುಕೂಲಕರ ಫಲಿತಾಂಶವನ್ನು ನೀವು ಅನುಭವಿಸಲಿದ್ದೀರಿ. ಉದ್ಯೋಗದ ಕಾರಣದಿಂದಾಗಿ ನೀವು ಸ್ಥಳೀಯ ಮಟ್ಟದಲ್ಲಿ ಅಥವಾ ವಿದೇಶಕ್ಕೆ ಪ್ರಯಾಣಿಸುತ್ತಿದ್ದರೆ, ನಿಮ್ಮ ಯೋಗಕ್ಷೇಮಕ್ಕೆ ಒತ್ತು ನೀಡಿರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಸಾಕಷ್ಟು ಗಮನ ನೀಡಬೇಕು. ಉದ್ಯೋಗದಲ್ಲಿರುವ ತಮ್ಮ ಮಾನಸಿಕ ಒತ್ತಡವನ್ನು ಸರಿಯಾಗಿ ನಿಭಾಯಿಸಬೇಕು. ಪ್ರೇಮ ಸಂಬಂಧದಲ್ಲಿ ಇನ್ನಷ್ಟು ಅನುರಾಗ ಕಾಣಿಸಿಕೊಳ್ಳಲಿದೆ. ವಾರದ ಕೊನೆಗೆ ನಿಮ್ಮ ಪ್ರಣಯ ಸಂಗಾತಿಯಿಂದ ನೀವು ಅನಿರೀಕ್ಷಿತ ಕೊಡುಗೆಯೊಂದನ್ನು ಸ್ವೀಕರಿಸಲಿದ್ದೀರಿ. ಅಲ್ಲದೆ ನಿಮ್ಮ ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ಈ ವಾರದಲ್ಲಿ ನಿಮಗೆ ಸಂತಸ ಮತ್ತು ಯಶಸ್ಸು ಲಭಿಸಲಿದೆ. ಅಲ್ಲದೆ ಪ್ರಮುಖ ವ್ಯಕ್ತಿಯೊಬ್ಬರಿಂದ ನಿಮಗೆ ನೆರವು ದೊರೆಯಲಿದೆ.

ಕರ್ಕಾಟಕ: ಈ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಮಿಶ್ರಫಲ ದೊರೆಯಲಿದೆ. ವಾರದ ಆರಂಭದಲ್ಲಿ ನೀವು ಕೆಲಸದ ಸ್ಥಳದಲ್ಲಿ ಸವಾಲುಗಳನ್ನು ಎದುರಿಸಲಿದ್ದು, ಮುಖದಲ್ಲಿ ಬೇಸರ ಕಾಣಿಸಿಕೊಳ್ಳಲಿದೆ. ವಾಹನ ಚಲಾಯಿಸುವಾಗ ಎಚ್ಚರ ವಹಿಸಿ. ಏಕೆಂದರೆ ಗಾಯ ಅಥವಾ ಅಪಘಾತ ಉಂಟಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿರುವವರಿಗೆ ತಮ್ಮ ಆದಾಯದಲ್ಲಿ ಹಿನ್ನಡೆ ಉಂಟಾಗಲಿದೆ. ವ್ಯವಹಾರವನ್ನು ನಡೆಸುತ್ತಿರುವವರು ಡಿಜಿಟಲ್‌ ವೇದಿಕೆಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ. ವಾರದ ನಡುವೆ ನೀವು ಸಾಕಷ್ಟು ಚಟುವಟಿಕೆಗಳಿಂದ ಕೂಡಿರಲಿದ್ದೀರಿ. ಉದ್ಯೋಗದಲ್ಲಿರುವ ಮಹಿಳೆಯರು ತಮ್ಮ ವೃತ್ತಿಪರ ಜವಾಬ್ದಾರಿಗಳು ಮತ್ತು ಕೌಟುಂಬಿಕ ಬದುಕಿನ ನಡುವೆ ಸಂತುಲನ ಕಾಪಾಡಲು ಹೆಣಗಾಡಬೇಕಾಗುತ್ತದೆ. ವೈವಾಹಿಕ ಬದುಕಿನಲ್ಲಿ ಸಂತಸ ಕಾಣಬೇಕಾದರೆ ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆಯಬೇಕಾದ ಅಗತ್ಯವಿದೆ. ಪ್ರೇಮ ಸಂಬಂಧಕ್ಕೆ ಕುರಿತಂತೆ ಹೇಳುವುದಾದರೆ ಈ ವಾರವು ಅಷ್ಟೊಂದು ಅನುಕೂಲಕರವಾಗಿಲ್ಲ. ಭವಿಷ್ಯದಲ್ಲಿ ಎದುರಾಗುವ ಯಾವುದೇ ಸಂಕೀರ್ಣತೆಯನ್ನು ನಿವಾರಿಸುವುದಕ್ಕಾಗಿ, ನಿಮ್ಮ ಪ್ರಣಯ ಸಂಬಂಧವನ್ನು ಖಾಸಗಿಯಾಗಿಯೇ ಇಟ್ಟು, ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

ಸಿಂಹ: ಈ ರಾಶಿಯವರಿಗೆ ಈ ವಾರದಲ್ಲಿ ಧನಾತ್ಮಕ ಫಲಿತಾಂಶ ದೊರೆಯಲಿದೆ. ವಾರದ ಆರಂಭದಲ್ಲಿ, ಉದ್ಯೋಗದಲ್ಲಿ ತೊಡಗಿಸಿಕೊಂಡಿರುವವರಿಗೆ ಸಾಕಷ್ಟು ಅದೃಷ್ಟ ದೊರೆಯಲಿದೆ. ಜಮೀನು ಮತ್ತು ಆಸ್ತಿಯನ್ನು ಖರೀದಿಸುವ ಕನಸು ಈ ವಾರದಲ್ಲಿ ನನಸಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ವೃತ್ತಿಯಲ್ಲಿ ಪ್ರಗತಿ ಉಂಟಾಗಲಿದ್ದು, ಆರ್ಥಿಕ ಲಾಭ ಉಂಟಾಗಲಿದೆ. ಉನ್ನತ ವರ್ಗದ ಅಧಿಕಾರಿಗಳೊಂದಿಗೆ ನಿಮ್ಮ ಒಡನಾಟವು ಹೆಚ್ಚಲಿದೆ. ಹೆಚ್ಚಿನ ಹಣ ಗಳಿಸಲು ಅವಕಾಶಗಳು ಲಭಿಸಲಿದ್ದು, ನಿಮ್ಮ ಸಂಪತ್ತಿನಲ್ಲಿ ವೃದ್ಧಿ ಉಂಟಾಗಲಿದೆ. ರಾಜಕೀಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳಿಗೆ ಉನ್ನತ ಹುದ್ದೆ ಲಭಿಸಲಿದೆ. ವಾರದ ಉತ್ತರಾರ್ಧದಲ್ಲಿ ನೀವು ಪ್ರಭಾವಿ ವ್ಯಕ್ತಿಯೊಬ್ಬರನ್ನು ಭೇಟಿಯಾಗಲಿದ್ದು, ಆರ್ಥಿಕ ಯಶಸ್ಸು ಮತ್ತು ಪ್ರಗತಿ ಗಳಿಸಲು ಅವರಿಂದ ನಿಮಗೆ ನೆರವು ದೊರೆಯಲಿದೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ಮನೆಯಲ್ಲಿ ಕುಟುಂಬದ ಹಿರಿಯ ವ್ಯಕ್ತಿಯೊಬ್ಬರ ಯೋಗಕ್ಷೇಮಕ್ಕೆ ಸಂಬಂಧಿಸಿದ ಚಿಂತೆಯು ನಿಮ್ಮನ್ನು ಕಾಡಬಹುದು. ಪ್ರೇಮ ಸಂಬಂಧದಲ್ಲಿ ಭಾವತೀವ್ರತೆ ಕಾಣಿಸಿಕೊಳ್ಳಲಿದೆ. ವೈವಾಹಿಕ ಬದುಕಿನಲ್ಲಿ ಪ್ರಣಯ ನೆಲೆಸಲಿದೆ. ಒಟ್ಟಾರೆಯಾಗಿ ವೈವಾಹಿಕ ಬದುಕು ಚೆನ್ನಾಗಿರಲಿದೆ.

ಕನ್ಯಾ: ಈ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ತಮ್ಮ ಕೆಲಸದ ಸ್ಥಳದಲ್ಲಿ ಎಚ್ಚರಿಕೆಯಿಂದ ಇರಲು ಸಲಹೆ ನೀಡಲಾಗಿದೆ. ವೃತ್ತಿ ಅಥವಾ ವ್ಯವಹಾರದಲ್ಲಿ ಅವಸರದಿಂದ ನಿರ್ಧಾರವನ್ನು ತೆಗೆದುಕೊಳ್ಳಬಾರದು. ನಿಮ್ಮಲ್ಲಿ ಸ್ಪಷ್ಟತೆ ಇಲ್ಲದಿದ್ದರೆ ವೃತ್ತಿಪರರ ಸಲಹೆಯನ್ನು ಪಡೆಯಿರಿ ಅಥವಾ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ಮುಂದೂಡಿ. ವಾರದ ಕೊನೆಗೆ, ನಿಮ್ಮ ಆದಾಯದಲ್ಲಿ ಕುಸಿತ ಉಂಟಾಗಬಹುದು. ಅಲ್ಲದೆ ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ಇದರಿಂದಾಗಿ ನಿಮ್ಮ ಆರ್ಥಿಕ ಯೋಜನೆಯ ಮೇಲೆ ಪರಿಣಾಮ ಉಂಟಾಗಬಹುದು. ನಿಮಗೆ ಆರೋಗ್ಯ ಸಮಸ್ಯೆ ಎದುರಾಗಬಹುದು. ಋತುಮಾನಕ್ಕೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳಬಹುದು ಅಥವಾ ಈಗಾಗಲೇ ನಿಮ್ಮ ಕಾಡುತ್ತಿರುವ ಸಮಸ್ಯೆಗಳು ಮತ್ತೆ ಉಲ್ಬಣಿಸಬಹುದು. ಅಧ್ಯಯನಕ್ಕೆ ಗಮನ ನೀಡಲು ವಿದ್ಯಾರ್ಥಿಗಳಿಗೆ ಕಷ್ಟಕರವೆನಿಸಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಹೊಸ ಉದ್ಯಮದಲ್ಲಿ ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಕಷ್ಟಕರ ಸಂದರ್ಭದಲ್ಲಿ ನಿಮ್ಮ ಪ್ರಣಯ ಸಂಬಂಧಿಯು ಸಾಕಷ್ಟು ನೆರವನ್ನು ಒದಗಿಸಬಹುದು. ನಿಮ್ಮ ವೈವಾಹಿಕ ಬದುಕಿನಲ್ಲಿ ಸಂತೃಪ್ತಿ ನೆಲೆಸಲಿದೆ.

ತುಲಾ: ಈ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರವು ಸಂತಸ ಮತ್ತು ಸಂಪತ್ತನ್ನು ಕರುಣಿಸಲಿದೆ. ವಾರದ ಆರಂಭದಲ್ಲಿ ಐಷಾರಾಮಿ ವಸ್ತುಗಳನ್ನು ಖರೀದಿಸುವುದರಿಂದ ನಿಮ್ಮ ಮನೆಯಲ್ಲಿ ಸಂತಸ ನೆಲೆಸಲಿದೆ. ದೀರ್ಘ ಕಾಲದಿಂದ ನೀವು ವರ್ಗಾವಣೆ ಅಥವಾ ಬಡ್ತಿಗಾಗಿ ಎದುರು ನೋಡುತ್ತಿದ್ದರೆ ನಿಮ್ಮ ಇಚ್ಛೆಯು ಈ ವಾರದಲ್ಲಿ ಈಡೇರಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾದಂತೆಯೇ ವೆಚ್ಚದಲ್ಲಿಯೂ ಏರಿಕೆ ಕಾಣಿಸಿಕೊಳ್ಳಲಿದೆ. ಅದರೆ ವ್ಯವಹಾರದಲ್ಲಿ ಅನಿರೀಕ್ಷಿತ ಹೆಚ್ಚಳ ಉಂಟಾಗುವುದರಿಂದ ನಿಮ್ಮ ಸಂತಸವು ಇಮ್ಮಡಿಗೊಳ್ಳಲಿದೆ. ವಾರದ ಉತ್ತರಾರ್ಧದಲ್ಲಿ ನಿಮ್ಮ ಗೆಳೆಯರು ಮತ್ತು ಕುಟುಂಬದ ಸದಸ್ಯರ ನೆರವಿನಿಂದ ಪ್ರಮುಖ ಗುರಿಯೊಂದನ್ನು ನೀವು ಈಡೇರಿಸಲಿದ್ದೀರಿ. ಪ್ರೇಮ ಸಂಬಂಧದಲ್ಲಿ ನಿಮ್ಮ ಸಂಗಾತಿಯ ಜೊತೆಗಿನ ಬಂಧವು ಇನ್ನಷ್ಟು ಗಟ್ಟಿಯಾಗಲಿದೆ. ನಿಮ್ಮ ಕುಟುಂಬದ ಸದಸ್ಯರು ನಿಮ್ಮ ವಿವಾಹಕ್ಕೆ ಹಸಿರು ನಿಶಾನೆಯನ್ನು ತೋರಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಬದುಕು ಸಂತಸದಿಂದ ಕೂಡಿರಲಿದ್ದು, ನೀವಿಬ್ಬರೂ ಜೊತೆಯಾಗಿ ಸಂತಸದಿಂದ ಸಮಯ ಕಳೆಯಲಿದ್ದೀರಿ. ಈ ಅವಧಿಯಲ್ಲಿ ನಿಮ್ಮ ಜೀವನ ಸಂಗಾತಿಯು ಗಳಿಸುವ ಪ್ರಮುಖ ಯಶಸ್ಸು ನಿಮ್ಮ ಮತ್ತು ನಿಮ್ಮ ಕುಟುಂಬದ ಸಂತಸಕ್ಕೆ ಕಾರಣವೆನಿಸಲಿದೆ.

ವೃಶ್ಚಿಕ: ಈ ವಾರದಲ್ಲಿ ನಿಮ್ಮ ಕುಟುಂಬದಲ್ಲಿ ನೀವು ಒಂದಷ್ಟು ಭಿನ್ನಾಭಿಪ್ರಾಯ ಮತ್ತು ಒತ್ತಡವನ್ನು ಎದುರಿಸಬಹುದು. ಹೀಗಾಗಿ ಚರ್ಚೆಯ ವೇಳೆ ಸಭ್ಯ ಭಾಷೆಯನ್ನು ಬಳಸುವುದು ಮತ್ತು ನಡತೆಯನ್ನು ತೋರುವುದು ಅಗತ್ಯ. ವಾರದ ಉತ್ತರಾರ್ಧದಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದ್ದು ನಿಮಗೆ ಅಗತ್ಯ ನೆರವು ದೊರೆಯಲಿದೆ. ಹೊಸ ಪ್ರಾಜೆಕ್ಟ್‌ ಒಂದನ್ನು ಅಭಿವೃದ್ಧಿಪಡಿಸಲು ಗೆಳೆಯರೊಬ್ಬರ ನೆರವು ದೊರೆಯಲಿದೆ. ವಿದೇಶದಲ್ಲಿ ವೃತ್ತಿ ಅಥವಾ ವ್ಯವಹಾರವನ್ನು ನಡೆಸಲು ಇಚ್ಛಿಸುವವರಿಗೆ ಸವಾಲುಗಳು ಎದುರಾಗಬಹುದು. ಪ್ರಣಯ ಸಂಬಂಧದಲ್ಲಿ ತೀವ್ರ ಭಾವನೆಗಳನ್ನು ಆಧರಿಸಿ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳದೆ ಇರುವುದು ಒಳ್ಳೆಯದು. ವೈವಾಹಿಕ ಬದುಕಿನಲ್ಲಿ ಸಂತೃಪ್ತಿ ಇರಬೇಕಾದರೆ ಸಂಗಾತಿಯ ಭಾವನೆಗಳನ್ನು ಗೌರವಿಸುವುದು ಅಗತ್ಯ. ವಾರದ ಆರಂಭದಲ್ಲಿ, ನಿಮ್ಮ ಆರೋಗ್ಯಕ್ಕೆ ಗಮನ ನೀಡುವುದು ಅಗತ್ಯ. ಏಕೆಂದರೆ ಋತುಮಾನಕ್ಕೆ ಸಂಬಂಧಿಸಿದ ಕಾಯಿಲೆಗಳು ನಿಮ್ಮನ್ನು ಕಾಡಬಹುದು. ವಿಪರೀತ ಚಟುವಟಿಕೆಗಳು ಮತ್ತು ಖರ್ಚುವೆಚ್ಚದ ಕಾರಣ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು. ಸಹೋದ್ಯೋಗಿಗಳು ಸ್ಪರ್ಧೆಯನ್ನೊಡ್ಡುವ ಕಾರಣ ನೀವು ಅಡ್ಡಿ ಆತಂಕಗಳನ್ನು ಎದುರಿಸಬಹುದು.

ಧನು: ಈ ಧನು ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಮಿಶ್ರ ಫಲಿತಾಂಶ ದೊರೆಯಲಿದೆ. ನಿಮ್ಮ ಗುರಿಯನ್ನು ಈಡೇರಿಸಬೇಕಾದರೆ ಹೆಚ್ಚಿನ ಶ್ರಮ ಮತ್ತು ಪ್ರಯತ್ನದ ಅಗತ್ಯವಿದೆ. ಸವಾಲುಗಳ ನಡುವೆಯೂ ನೀವು ಅಗತ್ಯ ಆದಾಯವನ್ನು ಗಳಿಸಲಿದ್ದೀರಿ. ಇಂಧನ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ಚಾಲ್ತಿಯಲ್ಲಿರುವ ಕಾಮಗಾರಿಗಳಲ್ಲಿ ಪ್ರಗತಿ ಉಂಟಾಗಲಿದೆ. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆಯು ಹೆಚ್ಚಲಿದೆ. ಆದರೆ ಇದರಿಂದಾಗಿ ಯಾವುದೇ ಸಂಘರ್ಷವು ಉಂಟಾಗದಂತೆ ನೋಡಿಕೊಳ್ಳಿ. ಈ ವಾರದಲ್ಲಿ ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಆದರೆ ಕೊನೆಯಲ್ಲಿ ಗೆಳೆಯರೊಂದಿಗೆ ಚೆನ್ನಾಗಿ ಸಮಯ ಕಳೆಯುವ ಅವಕಾಶ ಲಭಿಸಬಹುದು. ನಿಮ್ಮ ಪ್ರಣಯ ಸಂಬಂಧದಲ್ಲಿ ಸಿಹಿ - ಕಹಿ ವಾಗ್ವಾದದ ನಡುವೆಯೂ ಸುಧಾರಣೆ ಕಾಣಿಸಿಕೊಳ್ಳಲಿದೆ. ಕಠಿಣ ಸಂದರ್ಭಗಳಲ್ಲಿ ನಿಮ್ಮ ಸಂಗಾತಿಯು ಆಧಾರಸ್ತಂಭ ಎನಿಸಲಿದ್ದಾರೆ.

ಮಕರ: ಈ ವಾರದಲ್ಲಿ ಮಕರ ರಾಶಿಯವರಿಗೆ ಆರ್ಥಿಕ ಯಶಸ್ಸು ಮತ್ತು ಪ್ರಗತಿಯನ್ನು ಸಾಧಿಸಲು ಅನುಕೂಲಕರ ಅವಕಾಶ ದೊರೆಯಲಿದೆ. ಉದ್ಯೋಗದಲ್ಲಿರುವವರು ಕೆಲಸದ ಸ್ಥಳದಲ್ಲಿ ತಮ್ಮ ಹಿರಿಯ ಮತ್ತು ಕಿರಿಯ ಸಹೋದ್ಯೋಗಿಗಳಿಂದ ನೆರವನ್ನು ಪಡೆಯಲಿದ್ದಾರೆ. ವಾರದ ನಡುವೆ ಗೆಳತಿಯೊಬ್ಬರ ನೆರವಿನಿಂದ ಪ್ರಮುಖ ಸಮಸ್ಯೆಯೊಂದು ಬಗೆಹರಿಯಲಿದೆ. ವ್ಯವಹಾರದಲ್ಲಿ ನಿಮಗೆ ನಿರೀಕ್ಷಿತ ಲಾಭ ದೊರೆಯಲಿದೆ. ವಿವಾಹಿತರಿಗೆ ಜೀವನ ಸಂಗಾತಿ ದೊರೆಯಬಹುದು. ಹೊಸ ಸ್ನೇಹವೊಂದು ಪ್ರಣಯಕ್ಕೆ ತಿರುಗಬಹುದು. ನಿಮ್ಮ ಸಂಗಾತಿಯ ಆರೋಗ್ಯದ ಕುರಿತ ಚಿಂತೆ ನಿಮ್ಮನ್ನು ಕಾಡಬಹುದಾದರೂ, ನಿಮ್ಮ ಯೋಗಕ್ಷೇಮ ಮತ್ತು ಪೌಷ್ಟಿಕಾಂಶಕ್ಕೆ ಒತ್ತು ನೀಡುವುದು ಸಹ ತೀರಾ ಅಗತ್ಯ. ಈ ಅವಧಿಯಲ್ಲಿ ಸಮುದಾಯದೊಳಗೆ ನಿಮ್ಮ ವರ್ಚಸ್ಸಿನಲ್ಲಿ ವೃದ್ಧಿ ಉಂಟಾಗಲಿದೆ. ಮನೆಯಲ್ಲಿ ಧನಾತ್ಮಕ ವಾತಾವರಣ ನೆಲೆಸಲಿದೆ. ವೃತ್ತಿಯಲ್ಲಿ ನೀವು ಮಾಡುವ ಕಠಿಣ ಶ್ರಮಕ್ಕೆ ತಕ್ಕುದಾದ ಫಲ ದೊರೆಯಲಿದ್ದು, ಮನೆಯಲ್ಲೂ ಅದೃಷ್ಟದ ನೆರವನ್ನು ಪಡೆಯಲಿದ್ದೀರಿ.

ಕುಂಭ: ವಾರದ ಆರಂಭದಲ್ಲಿ ಉದ್ಯೋಗ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಪ್ರಯಾಣಿಸಬೇಕಾದೀತು. ಇದರಿಂದಾಗಿ ನೀವು ಮನೆಯಿಂದ ದೂರ ಉಳಿಯಬೇಕಾದೀತು. ವಾರದ ನಡುವೆ, ಪ್ರಭಾವಿ ವ್ಯಕ್ತಿಯ ನೆರವಿನಿಂದಾಗಿ, ಅಧಿಕಾರ ಮತ್ತು ಸರ್ಕಾರಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಯಾವುದೇ ಕೆಲಸವು ಪೂರ್ಣಗೊಳ್ಳಲಿದೆ. ಕಠಿಣ ದಿನಗಳು ಹೆಚ್ಚು ಕಾಲ ಮುಂದುವರಿಯುವುದಿಲ್ಲ. ವಾರದ ಕೊನೆಗೆ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗುವುದನ್ನು ನೀವು ಗಮನಿಸಬಹುದು. ವಾರದ ಕೊನೆಗೆ ಐಷಾರಾಮಿ ವಸ್ತುಗಳಿಗಾಗಿ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ಪ್ರೇಮ ಸಂಬಂಧದಲ್ಲಿ ಧನಾತ್ಮಕ ಬದಲಾವಣೆಗಳು ಕಾಣಿಸಿಕೊಳ್ಳಲಿವೆ. ನಿಮ್ಮ ಸಂಗಾತಿಯ ಯಶಸ್ಸು ನಿಮ್ಮ ಸಂತಸಕ್ಕೆ ಕಾರಣವೆನಿಸಲಿದೆ. ನಿಮ್ಮ ಹೂಡಿಕೆಗೆ ಗಣನೀಯ ಲಾಭ ದೊರೆಯಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಮಾರುಕಟ್ಟೆಯಲ್ಲಿ ಉಂಟಾಗುವ ಏರಿಕೆಯ ಲಾಭವನ್ನು ಪಡೆಯಬಹುದು. ನಿಮ್ಮ ವರ್ಚಸ್ಸಿನಲ್ಲಿ ವೃದ್ಧಿ ಉಂಟಾಗಲಿದ್ದು, ಮಾರುಕಟ್ಟೆಯಲ್ಲಿ ವೃದ್ಧಿ ಉಂಟಾಗಲಿದೆ.

ಮೀನ: ಈ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಅಸಾಧಾರಣ ಫಲ ದೊರೆಯಲಿದೆ. ನಿಮ್ಮ ವೃತ್ತಿ ಮತ್ತು ಉದ್ಯಮದಲ್ಲಿ ಪ್ರಗತಿಯನ್ನು ನೀವು ಕಾಣಬಹುದು. ನಿಮ್ಮ ಉದ್ದೇಶವನ್ನು ಈಡೇರಿಸಲು ಬೇಕಾದ ಅಗತ್ಯ ನೆರವು ನಿಮಗೆ ಲಭಿಸಲಿದೆ. ವಾರದ ಕೊನೆಗೆ ನಿಮಗೆ ಧನಾತ್ಮಕ ಫಲಿತಾಂಶ ದೊರೆಯಲಿದೆ. ಹೀಗಾಗಿ ನಿಮ್ಮ ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ. ನಿಮ್ಮ ವ್ಯಾಪಾರದಲ್ಲಿ ಪ್ರಗತಿ ಉಂಟಾಗಲಿದ್ದು ನಿಮ್ಮ ಸಂಪತ್ತಿನಲ್ಲಿ ವೃದ್ಧಿ ಕಾಣಿಸಿಕೊಳ್ಳಲಿದೆ. ಉದ್ಯೋಗದಲ್ಲಿರುವವರು ಪೂರಕ ಆದಾಯಕ್ಕಾಗಿ ಹೊಸ ಅವಕಾಶಗಳನ್ನು ಕಂಡುಹಿಡಿಯಲಿದ್ದು, ಒಟ್ಟಾರೆ ಸಂಪತ್ತಿನಲ್ಲಿ ಹೆಚ್ಚಳ ಉಂಟಾಗಲಿದೆ. ಉದ್ಯೋಗದಲ್ಲಿರುವ ಮಹಿಳೆಯರಿಗೆ ಈ ಅವಧಿಯು ಅನುಕೂಲಕರವಾಗಿದೆ. ಉದ್ಯೋಗದಲ್ಲಿ ಅವರು ಹೆಚ್ಚಿನ ಗೌರವ ಮತ್ತು ಮನ್ನಣೆ ಗಳಿಸಲಿದ್ದಾರೆ. ಪ್ರಣಯ ಸಂಬಂಧದಲ್ಲಿ ಇನ್ನಷ್ಟು ಅನುರಾಗ ಕಾಣಿಸಿಕೊಳ್ಳಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ಮತ್ತು ತೃಪ್ತಿ ಕಾಣಿಸಿಕೊಳ್ಳಲಿದೆ. ನಿಮ್ಮ ಕುಟುಂಬದೊಳಗೆ ಪ್ರಮುಖ ಸಾಧನೆಯ ಸಾಧ್ಯತೆ ಇದ್ದು, ಧನಾತ್ಮಕ ಮತ್ತು ಮಂಗಳದಾಯಕ ವಾತಾವರಣ ನೆಲೆಸಲಿದೆ. ಈ ವಾರದಲ್ಲಿ ನಿಮಗೆ ಸಾಕಷ್ಟು ಸಂತಸ ಮತ್ತು ಯಶಸ್ಸು ಲಭಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.