ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ರಿಂದ ಬಜೆಟ್ ಮಂಡನೆ: ನೇರಪ್ರಸಾರ - Union Budget 2024

🎬 Watch Now: Feature Video

thumbnail

By ETV Bharat Karnataka Team

Published : Jul 23, 2024, 11:02 AM IST

Updated : Jul 23, 2024, 12:32 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸತತ ಮೂರನೇ ಅವಧಿಯ ಮೊದಲ ಪೂರ್ಣಾವಧಿ ಬಜೆಟ್​ ಅನ್ನು ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡಿಸುತ್ತಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಪ್ರಸ್ತುತಪಡಿಸುತ್ತಿರುವ ಸತತ 7ನೇ ಆಯವ್ಯಯ ಆಗಿದೆ. ಲೋಕಸಭೆ ಚುನಾವಣೆಗೂ ಮುನ್ನ ಫೆಬ್ರವರಿಯಲ್ಲಿ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್​ ಮಂಡಿಸಿದ್ದರು. ಇದೀಗ ಅವರೇ 2024-25ರ ಸಾಲಿನ ಪೂರ್ಣ ಬಜೆಟ್​ ಮಂಡಿಸುತ್ತಿದ್ದಾರೆ.  ಮೋದಿ 3.0 ಸರ್ಕಾರದ ಮೊದಲ ಬಜೆಟ್​ ಆಗಿರುವ ಕಾರಣ ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಜೊತೆಗೆ, ಎನ್​​ಡಿಎ ಮಿತ್ರಪಕ್ಷಗಳ ಸಹಕಾರದೊಂದಿಗೆ ಸರ್ಕಾರ ರಚನೆ ಮಾಡಿರುವ ಮೋದಿ, ತಮ್ಮ ಮಿತ್ರರ ಬೇಡಿಕೆಗಳನ್ನು ಈಡೇರಿಸುವುದರೊಂದಿಗೆ 2047ರ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್​ ಮಂಡಿಸಬೇಕಿದೆ.ಬಜೆಟ್​​ಗೂ ಮೊದಲು ಸೋಮವಾರ ಮಂಡನೆಯಾದ ಆರ್ಥಿಕ ಸಮೀಕ್ಷೆಯಲ್ಲಿ ನವಭಾರತದ ಕನಸನ್ನು ವಿವರಿಸಲಾಗಿದೆ. ದೇಶದ ಈಗಿನ ಆರ್ಥಿಕ ಸ್ಥಿತಿಗತಿ ಹೇಗಿದೆ ಎಂಬುದನ್ನು ತಿಳಿಸಲಾಗಿದೆ. 2024-25ರಲ್ಲಿ ಜಿಡಿಪಿ ಬೆಳವಣಿಗೆ ದರವನ್ನು ಶೇಕಡಾ 6.5ರಿಂದ 7ಕ್ಕೆ ಅಂದಾಜಿಸಲಾಗಿದೆ.ಸೂಕ್ತ ನೀತಿಗಳು ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಬೆಲೆ ಸ್ಥಿರತೆ ಕ್ರಮಗಳು ಚಿಲ್ಲರೆ ಹಣದುಬ್ಬರವನ್ನು ಶೇಕಡಾ 5.4ಕ್ಕಿಳಿಸಲು ಸಹಾಯ ಮಾಡಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.
Last Updated : Jul 23, 2024, 12:32 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.