ಮ್ಯಾಜಿಸ್ಟ್ರೇಟ್ ಕಾರು ಓವರ್​ಟೇಕ್ ಮಾಡಿದ್ದಕ್ಕೆ ಯುವಕರಿಗೆ ಹಿಗ್ಗಾಮುಗ್ಗಾ ಥಳಿತ: ವಿಡಿಯೋ

🎬 Watch Now: Feature Video

thumbnail

ಉಮಾರಿಯಾ(ಮಧ್ಯಪ್ರದೇಶ): ಉಮಾರಿಯಾದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಬಾಂಧವ್‌ಗಢ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM)ವಾಹನವನ್ನು ಓವರ್​ಟೇಕ್ ಮಾಡಿದ ಇಬ್ಬರು ಯುವಕರನ್ನು ಅಮಾನುಷವಾಗಿ ಥಳಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬಾಂಧವಗಢ ಎಸ್‌ಡಿಎಂ ಅಮಿತ್‌ ಸಿಂಗ್‌, ತಹಸೀಲ್ದಾರ್‌ ವಿನೋದ್‌ ಕುಮಾರ್‌ ಸೇರಿ ಕೆಲವರು ಸರ್ಕಾರಿ ವಾಹನದಲ್ಲಿ ಹೋಗುತ್ತಿದ್ದರು. ಅದೇ ವೇಳೆ ಹಿಂಬದಿಯಿಂದ ಬಂದ ಇಬ್ಬರು ಯುವಕರು ಕಾರು ಓವರ್ ಟೇಕ್ ಮಾಡಿದ್ದು, ಈ ವಿಚಾರದ ಬಗ್ಗೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಯುವಕರು ಹಾಗೂ ಅವರ ಕಾರಿನ ಮೇಲೆ ಎಸ್​ಡಿಎಂ ಸೇರಿದಂತೆ ಇತರರು ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ.

ವಾಹನವನ್ನು ಓವರ್ ಟೇಕ್ ಮಾಡಿದ್ದಕ್ಕೆ ಸಿಟ್ಟಿಗೆದ್ದ ಎಸ್​ಡಿಎಂ ತಮ್ಮ ಕಾರು ತಡೆದು ಥಳಿಸಿದ್ದಾರೆ ಎಂದು ಯುವಕರು ದೂರಿದ್ದಾರೆ. ಗಾಯಗೊಂಡಿರುವ ಪ್ರಕಾಶ್ ಮತ್ತು ಶಿವ್ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಎಸ್‌ಡಿಎಂ ಹಾಗೂ ತಹಶೀಲ್ದಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಿವೇದಿತಾ ನಾಯ್ಡು,  ನಿನ್ನೆ ರಾತ್ರಿ 11  ಗಂಟೆ ಸುಮಾರಿಗೆ ಸಿವಿಲ್ ಲೈನ್ ಚೌಕಿ ಪೊಲೀಸರು ಎಸ್‌ಡಿಎಂ ಅಮಿತ್ ಸಿಂಗ್, ತಹಶೀಲ್ದಾರ್​ ವಿನೋದ್ ಕುಮಾರ್, ಚಾಲಕ ನರೇಂದ್ರದಾಸ್ ಪಣಿಕಾ ಮತ್ತು ಸಂದೀಪ್ ಸಿಂಗ್ ಎಂಬುವವರ ವಿರುದ್ಧ ಸೆಕ್ಷನ್ 294, 323, 341 ಮತ್ತು 34 ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಕರಣ ವಾಪಸ್ ಪಡೆಯಲು ನಿರಾಕರಣೆ: ಗೃಹಿಣಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.