ETV Bharat / state

ಭ್ರಷ್ಟಾಚಾರದ ಬಗ್ಗೆ ಮಾತನಾಡೋಕೆ ಆಮ್ ಆದ್ಮಿಯವರಿಗೆ ಯಾವುದೇ ನೈತಿಕತೆ‌ ಇಲ್ಲ: ಜಗದೀಶ್ ಶೆಟ್ಟರ್ - JAGADISH SHETTAR

ಬೇರೆಯವರ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಆಮ್ ಆದ್ಮಿಯವರಿಗೆ ಯಾವುದೇ ನೈತಿಕತೆ‌ ಇಲ್ಲ. ರಾಹುಲ್ ಗಾಂಧಿ ಭ್ರಷ್ಟ ಅಂತಾ ಹೇಳುತ್ತಾರೆ. ಇಲ್ಲಿಯವರೆಗೂ ಇಂಡಿ ಕೂಟದ ಜೊತೆ ಯಾಕೆ ಮೈತ್ರಿ ಮಾಡಿಕೊಂಡಿದ್ದರು..?ಎಂದು ಸಂಸದ ಜಗದೀಶ್​ ಶೆಟ್ಟರ್ ​ಪ್ರಶ್ನಿಸಿದ್ದಾರೆ.

HUBBALLI  DHARWAD  ಜಗದೀಶ್ ಶೆಟ್ಟರ್  AAM AADMI PARTY JAGADISH SHETTAR
ಸಂಸದ ಜಗದೀಶ್ ಶೆಟ್ಟರ್ (ETV Bharat)
author img

By ETV Bharat Karnataka Team

Published : Jan 26, 2025, 3:05 PM IST

ಹುಬ್ಬಳ್ಳಿ: "ಆಮ್ ​ಆದ್ಮಿ ಪಕ್ಷದವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರ ಸಿಎಂ, ಡಿಸಿಎಂ ಎಲ್ಲರೂ ಜೈಲಿಗೆ ಹೋಗಿ ಬಂದವರು. ಆಪ್​​ ಪಕ್ಷದ ಎಂಟತ್ತು ಜನ ಸಚಿವರೂ ಸಹ ಜೈಲಿಗೆ ಹೋಗಿ ಬಂದಿದ್ದಾರೆ. ಈಗಲೂ ಸಹ ಕೆಲವೊಬ್ಬರು‌ ಜೈಲಿನಲ್ಲಿದ್ದಾರೆ" ಎಂದು ಸಂಸದ ಜಗದೀಶ್​ ಶೆಟ್ಟರ್​​ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, "ಬೇರೆಯವರ ಭ್ರಷ್ಟಾಚಾರದ ಬಗ್ಗೆ ಮಾತನಾಡೋಕೆ ಆಮ್ ಆದ್ಮಿಯವರಿಗೆ ಯಾವುದೇ ನೈತಿಕತೆ‌ ಇಲ್ಲ. ರಾಹುಲ್ ಗಾಂಧಿ ಭ್ರಷ್ಟ ಅಂತಾ ಹೇಳುತ್ತಾರೆ. ಇಲ್ಲಿಯವರೆಗೂ ಇಂಡಿ ಕೂಟದ ಜೊತೆ ಯಾಕೆ ಮೈತ್ರಿ ಮಾಡಿಕೊಂಡಿದ್ದರು..? ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ಇಂಡಿ ಮೈತ್ರಿಕೂಟಕ್ಕೆ‌ ಹೋಗಬಾರದಿತ್ತು. ಈಗ ಚುನಾವಣೆ ಹಿನ್ನೆಲೆ ಈ ರೀತಿ ಮಾತನಾಡುತ್ತಿದ್ದಾರೆ. ಇಡೀ ದೇಶವನ್ನು ಲೂಟಿ ಮಾಡಿದ ನಂಬರ್​ ಒನ್​ ಪಕ್ಷ ಕಾಂಗ್ರೆಸ್. ರಾಹುಲ್​ ಗಾಂಧಿ ಕುಟುಂಬ ಭ್ರಷ್ಟಾಚಾರದಲ್ಲಿ‌ ಸಂಪೂರ್ಣ ಮುಳುಗಿದೆ. ರಾಹುಲ್ ಗಾಂಧಿ ಬಗ್ಗೆ ಈಗ ಕೇಜ್ರಿವಾಲ್ ಅವರಿಗೆ ಜ್ಞಾನೋದಯವಾಗಿದೆ" ಎಂದರು.

ಸಂಸದ ಜಗದೀಶ್​ ಶೆಟ್ಟರ್ (ETV Bharat)

ಬಿಜೆಪಿ‌ ಆಂತರಿಕ ಒಳಜಗಳ‌ ವಿಚಾರಕ್ಕೆ ಸಂಬಂಧಿಸಿದಂತೆ ‌ಪ್ರತಿಕ್ರಿಯೆ ನೀಡಿದ ಅವರು, "ಪಕ್ಷದಲ್ಲಿ‌ ಎಲ್ಲವೂ ಒಂದು‌ ಹಂತಕ್ಕೆ ಬಂದಿದೆ. ವರಿಷ್ಠರು‌ ಎಲ್ಲವನ್ನೂ ಸರಿಪಡಿಸಲಿದ್ದಾರೆ. ಪಕ್ಷ ಬಹುದೊಡ್ಡದಾಗಿ ಬೆಳೆದಾಗ ಆಂತರಿಕ‌ ವೈಮನಸ್ಸು ಸಹಜ. ಶೀಘ್ರವೇ ಎಲ್ಲವೂ ಸರಿಹೋಗುತ್ತೆ. ಬಣ ರಾಜಕೀಯಕ್ಕೆ ಪಕ್ಷದ ವರಿಷ್ಠರು ಶೀಘ್ರದಲ್ಲೇ ತಿಲಾಂಜಲಿ‌ ಹಾಡಲಿದ್ದಾರೆ" ಎಂದು ತಿಳಿಸಿದರು.

ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ, "ಈ‌ ವಿಚಾರವಾಗಿ‌ ಕಾಂಗ್ರೆಸ್​ಗೆ ಹೋಗಲ್ಲ ಅಂತಾ ಶ್ರೀರಾಮುಲು ಈಗಾಗಲೇ ಹೇಳಿದ್ದಾರೆ. ಆದ್ರೂ ಸಹ ಪಕ್ಷಕ್ಕೆ ಸ್ವಾಗತ ಮಾಡುತ್ತೇವೆ ಅನ್ನೋ ಕಾಂಗ್ರೆಸ್ ನವರದ್ದು ಬೆಂಕಿ‌ ಹಚ್ಚುವ ಕೆಲಸ. ಕಾಂಗ್ರೆಸ್​ ಕೇವಲ ಬೆಂಕಿ‌ ಹಚ್ಚುವ ಕೆಲಸ ಮಾಡುತ್ತೆ" ಎಂದು ಟೀಕಿಸಿದರು.

"ರಾಜ್ಯದಲ್ಲಿ ಮೈಕ್ರೋ‌ಫೈನಾನ್ಸ್​ ಹಾವಳಿ ಹೆಚ್ಚಾಗಿದೆ. ಬಡ ಮತ್ತು ಮಧ್ಯಮ‌ ವರ್ಗದ ಜನರು ತುರ್ತು ಸಂದರ್ಭದಲ್ಲಿ ಸಾಲ ತೆಗೆದುಕೊಂಡಿರುತ್ತಾರೆ.
ಮೈಕ್ರೋ‌ಫೈನಾನ್ಸ್​ನಿಂದ ಜನಸಾಮಾನ್ಯರಿಗೆ ಸಾಕಷ್ಟು ಕಿರುಕುಳ ನೀಡಲಾಗುತ್ತಿದೆ. ನಿನ್ನೆ ಸಿಎಂ‌ ಸಿದ್ದರಾಮಯ್ಯ ಕಠಿಣ ಕಾನೂನು‌ಕ್ರಮ‌ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದ್ದ ಕಾನೂನಿನಲ್ಲೇ ಕ್ರಮ‌ಕೈಗೊಳ್ಳಬಹುದಿತ್ತು. ಹೊಸ ಕಾನೂನು‌ ತರುವ ಅವಶ್ಯಕತೆಯೇ ಇಲ್ಲ‌. ಸಿಎಂ‌ ಸುಮ್ಮನೇ ತೋರಿಕೆಗೆ ಸಭೆ ನಡೆಸಿ‌ದ್ದಾರೆ. ಈ‌ ರೀತಿ ತೋರಿಕೆಗೆ ಸಭೆ ನಡೆಸಿ ಕ್ರಮ‌ಕೈಗೊಳ್ಳುವ ಭರವಸೆ ನೀಡುವುದು ಸಮಂಜಸವಲ್ಲ. ಈಗಾಗಲೇ‌ ಇರುವಂತಹ ಕಾನೂನಿನಲ್ಲಿ‌ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಸರ್ಕಾರದಿಂದಲೇ ಜನಸಾಮಾನ್ಯರಿಗೆ ಸಾಲ ನೀಡುವ ಕೆಲಸಗಳಾಗಬೇಕು" ಶೆಟ್ಟರ್​ ಆಗ್ರಹಿಸಿದರು.

ಇದನ್ನೂ ಓದಿ: ಪಂಚ ಗ್ಯಾರಂಟಿ ಮಧ್ಯೆಯೂ ಆರ್ಥಿಕ ಪ್ರಗತಿ: ರಾಜ್ಯ ಸರ್ಕಾರದ ಸಾಧನೆ ಶ್ಲಾಘಿಸಿದ ರಾಜ್ಯಪಾಲ ಗೆಹ್ಲೋಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.