ಮಲೆನಾಡಿನಲ್ಲಿ ಅಬ್ಬರದ ಮಳೆ, ತುಂಬಿ ಹರಿಯುತ್ತಿರುವ ಹೊಳೆ, ಉಕ್ಕಡಗಾತ್ರಿ ಪುಣ್ಯಕ್ಷೇತ್ರದ ಸ್ನಾನಘಟ್ಟ ಮುಳುಗಡೆ - Ukkadagatri temple submerged - UKKADAGATRI TEMPLE SUBMERGED
🎬 Watch Now: Feature Video
Published : Jul 17, 2024, 5:33 PM IST
ದಾವಣಗೆರೆ : ಮಲೆನಾಡಿನಲ್ಲಿ ಅಬ್ಬರದ ಮಳೆಯಾಗುತ್ತಿದೆ. ಜಿಲ್ಲೆಯ ಹರಿಹರ ತಟದಲ್ಲಿ ಹರಿಯುವ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿರುವುದರಿಂದ ನದಿಪಾತ್ರದ ಜನರಲ್ಲಿ ಪ್ರವಾಹದ ಭೀತಿ ಮನೆ ಮಾಡಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಹರಿಹರ ತಾಲೂಕಿನ ಜನರಲ್ಲಿ ಪ್ರವಾಹದ ಭೀತಿ ಶುರುವಾಗಿದೆ. ಇನ್ನು ಹರಿಹರ ತಾಲೂಕಿನ ಉಕ್ಕಡಗಾತ್ರಿ ಕರಿಬಸಜ್ಜಯ್ಯ ಪುಣ್ಯಕ್ಷೇತ್ರ ಸ್ನಾನಘಟ್ಟ ಮುಳುಗಡೆಯಾಗಿದೆ. ಇದಲ್ಲದೇ ಜವಳಘಟ್ಟ, 12ಕ್ಕೂ ಹೆಚ್ಚು ಅಂಗಡಿಗಳು ಜಲಾವೃತವಾಗಿದೆ. ದೇವಸ್ಥಾನದ ಸಮಿತಿಯವರು ಭಕ್ತರಿಗೆ ನದಿಗೆ ಇಳಿಯದಂತೆ ಸ್ನಾನಘಟ್ಟದ ಗೇಟ್ ಗಳಿಗೆ ಬೀಗ ಹಾಕಿದ್ದಾರೆ. ಭಕ್ತರು ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಹರಿಹರ ತಾಲೂಕಿನ ಉಕ್ಕಡಗಾತ್ರಿ ಮತ್ತು ಪತ್ತೆಪುರ ನಡುವಿನ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಇದರಿಂದ ಎಂಟು ಕಿಮೀ ದೂರ ಕ್ರಮಿಸಿ ವಾಹನ ಸವಾರರು ಸುತ್ತು ಹಾಕಿಕೊಂಡು ಬರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಉಕ್ಕಡಗಾತ್ರಿಗೆ ಬರುವ ಭಕ್ತರಿಗೆ ಸ್ವಲ್ಪ ಮಟ್ಟಿಗೆ ತೊಂದರೆ ಆಗಿದೆ.
ದೇವಸ್ಥಾನದ ಬಳಿ ನದಿ ಪಾತ್ರದಲ್ಲಿ ಪೊಲೀಸ್ ಹಾಗೂ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪುಣ್ಯಕ್ಷೇತ್ರಕ್ಕೆ ಬರುವ ಜನಕ್ಕೆ ಪ್ರವಾಹ ಭೀತಿ ತಟ್ಟಿದೆ. ಪ್ರತಿ ವರ್ಷ ನದಿಗೆ ನೀರು ಬಿಟ್ರೆ ಶ್ರೀ ಕ್ಷೇತ್ರ ಉಕ್ಕಡಗಾತ್ರಿಯ ಸ್ನಾನ ಘಟ್ಟ, ಜವಳ ಘಟ್ಟ, ಅಂಗಡಿಗಳು ಮುಳುಗುವುದು ಸಾಮಾನ್ಯವಾಗಿ ಬಿಟ್ಟಿದೆ.
ಇದನ್ನೂ ಓದಿ : ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿ: ಮುಳುಗಡೆಯಾದ ಸುಕ್ಷೇತ್ರ ಉಕ್ಕಡಗಾತ್ರಿಯ ಸ್ನಾನಘಟ್ಟಗಳು