ಮೈಸೂರಿನಲ್ಲಿ ಗಜಪಡೆಯ ತಾಲೀಮು, ಹೂ ನೀಡಿ ಕಣ್ತುಂಬಿಕೊಳ್ಳುವ ಜನ: ವಿಡಿಯೋ - Dasara Elephants Training
🎬 Watch Now: Feature Video
Published : Sep 6, 2024, 1:56 PM IST
ಮೈಸೂರು: ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಗಜಪಡೆಗೆ ಪ್ರತಿನಿತ್ಯ ಅರಮನೆಯಿಂದ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ತಾಲೀಮು ನಡೆಸಲಾಗುತ್ತಿದೆ. ಈ ವೇಳೆ ರಸ್ತೆ ಬದಿಯಲ್ಲಿ ಸಾಲುಗಟ್ಟಿ ನಿಲ್ಲುವ ಜನರು ಗಜಪಡೆಗೆ ಹೂ ನೀಡಿ ತಾಲೀಮನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಈಗಾಗಲೇ ಅರಮನೆಗೆ ಆಗಮಿಸಿರುವ 14 ಆನೆಗಳು ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ಬೀಡುಬಿಟ್ಟಿವೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಅರಮನೆಯಿಂದ ಜಂಬೂ ಸವಾರಿ ಸಾಗುವ ಕೆ. ಆರ್. ಸರ್ಕಲ್, ಸಯ್ಯಾಜಿ ರಾವ್ ವೃತ್ತ, ಹಾಗೂ ಆರ್ಯು ರ್ಯುವೇದಿಕ್ ಸರ್ಕಲ್ ಮೂಲಕ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗುತ್ತದೆ. ಇದರ ಜೊತೆಗೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಗಜಪಡೆಗೆ ವಿಶೇಷ ಆಹಾರ ಸಹ ನೀಡಲಾಗುತ್ತಿದೆ. ಗಜಪಡೆಯ ಮುಂದಾಳತ್ವ ವಹಿಸಿರುವ ಅಭಿಮನ್ಯು ಈ ಬಾರಿ ಅಂಬಾರಿ ಹೊರಲಿದ್ದಾನೆ.
ಇದನ್ನೂ ಓದಿ: ಮೈಸೂರು ದಸರಾ: 2ನೇ ತಂಡದ 5 ಆನೆಗಳ ತೂಕ ಪರೀಕ್ಷೆ, 5,190 ಕೆಜಿ ತೂಗಿದ ಸುಗ್ರೀವ - Dasara Elephants Weight Test