ಮದುವೆ ಮೆರವಣಿಗೆಗೆ ತೆರಳುತ್ತಿದ್ದ ವೇಳೆ ಕಾಲುವೆಗೆ ಬಿದ್ದ ಕಾರು; ಮೂವರು ಸಾವು
🎬 Watch Now: Feature Video
Published : Mar 4, 2024, 2:00 PM IST
|Updated : Mar 4, 2024, 2:46 PM IST
ಬುಲಂದ್ಶಹರ್(ಉತ್ತರ ಪ್ರದೇಶ): ರಾಜ್ಯದ ಬುಲಂದ್ಶಹರ್ನಲ್ಲಿ ಭೀಕರ ಅಪಘಾತ ನಡೆದು 3 ಜನ ಸಾವನ್ನಪ್ಪಿದ್ದಾರೆ. ಕಾರಿನಲ್ಲಿ 8 ಜನರು ಮದುವೆ ಮೆರವಣಿಗೆಗೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಬಿದ್ದಿದೆ. 8 ಜನರು ಕಾಲುವೆಗೆ ಬಿದ್ದಿದ್ದು ಐವರನ್ನು ರಕ್ಷಿಸಲಾಗಿತ್ತು. ಅದರಲ್ಲಿ ಮೂವರು ಸಾವನ್ನಪ್ಪಿದರೆ, ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಉಳಿದ ಮೂವರು ಕಾಲುವೆಯ ನೀರಿನಲ್ಲಿ ನಾಪತ್ತೆಯಾಗಿದ್ದು ಮೃತದೇಹಕ್ಕಾಗಿ ಕಾರ್ಯಾಚರಣೆ ನಡೆಯುತ್ತಿದೆ.
ಅಲಿಘರ್ನಲ್ಲಿ ನಡೆಯುತ್ತಿದ್ದ ಮದುವೆ ಮೆರವಣಿಗೆ ಕಾರ್ಯಕ್ರಮಕ್ಕೆ ಕಾಕೋಡ್‌ನ ಶೇರ್‌ಪುರ ಗ್ರಾಮದಿಂದ ಕಾರಿನಲ್ಲಿ ತೆರಳುತ್ತಿದ್ದ ಇವರೆಲ್ಲರೂ ಸಹೋದರ ಸಹೋದರಿಯರಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಭಾನುವಾರ ರಾತ್ರಿ ಕಾರು ಜಹಾಂಗೀರ್‌ಪುರದ ಕಪನಾ ಗ್ರಾಮದ ಕಾಲುವೆ ಸೇತುವೆ ಬಳಿಗೆ ಬಂದ ತಕ್ಷಣ ನಿಯಂತ್ರಣ ತಪ್ಪಿದೆ. ಬಳಿಕ ಶಿಥಿಲಗೊಂಡಿದ್ದ ಸೇತುವೆಯಿಂದ ಕಾಲುವೆಗೆ ಬಿದ್ದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ 8 ಮಂದಿ ನೀರಿನಲ್ಲಿ ಮುಳುಗಿದ್ದಾರೆ.
ಈ ಘಟನೆಯನ್ನು ಅದೇ ಮಾರ್ಗದಲ್ಲಿದ್ದ ಪಾದಚಾರಿಗಳು ಗಮನಿಸಿ ಮಾಹಿತಿ ತಿಳಿಸಿ ತಾವೇ ರಕ್ಷಣೆಗೆ ಮುಂದಾದಾಗ ಸಾಧ್ಯವಾಗದೇ ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಸ್ಥಳೀಯ ಈಜುಗಾರರ ಸಹಾಯದಿಂದ ಐವರನ್ನು ಹೊರತೆಗೆಯಲಾಯಿತು. ಇದಲ್ಲದೆ ಇನ್ನೂ ಮೂವರಿಗಾಗಿ ಶೋಧ ನಡೆಸಲಾಗುತ್ತಿದೆ. ಈ ಘಟನೆಯಿಂದ ಮದುವೆ ಸಂಭ್ರಮದಲ್ಲಿ ಇರಬೇಕಿದ್ದ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಕಾಕೋಡ್ ಪ್ರದೇಶದ ಶೇರ್ಪುರ್ ಗ್ರಾಮದ ನಿವಾಸಿ ರಾಬಿನ್ ಅವರ ವಿವಾಹ ಕಾರ್ಯಕ್ರಮವಾಗಿತ್ತು. ಈ ಸಮಾರಂಭಕ್ಕೆ ಒಂದೇ ಕಾರಿನಲ್ಲಿ ರಾಬಿನ್ ಅವರ ಸೋದರಳಿಯ ದೇವಿರಾಮ್ ಅವರ ಪುತ್ರ ಮನೀಶ್ (22), ಸಹೋದರಿ ಕಾಂತ (24), ಅಂಜಲಿ (20), ಚಿಕ್ಕಮ್ಮನ ಮಗ ಪ್ರಶಾಂತ್ (18), ಸೊಸೆ ಮತ್ತು ಕೈಲಾಶ್ (42) ಮತ್ತಿಬ್ಬರು ತೆರಳುತ್ತಿದ್ದರು.
ಇದನ್ನೂ ಓದಿ: ತೆಲಂಗಾಣ: ಮರಕ್ಕೆ ಡಿಕ್ಕಿ ಹೊಡೆದ ಕಾರು, ಬಳ್ಳಾರಿಯ 5 ಮಂದಿ ಸಾವು