ದಾವಣಗೆರೆ: ಮನೆಗೆ ನುಗ್ಗಿ ಬೈಕ್ ಕದ್ದ ಕಳ್ಳರು, ದೃಶ್ಯ ಸಿಸಿಟಿವಿಯಲ್ಲಿ ಸೆರೆ - BIKE THEFT
🎬 Watch Now: Feature Video
Published : Nov 10, 2024, 6:35 PM IST
ದಾವಣಗೆರೆ: ಮನೆಗೆ ನುಗ್ಗಿದ್ದ ಕಳ್ಳರಿಬ್ಬರು ಬೈಕ್ ಲಾಕ್ ಕಟ್ ಮಾಡಿ ದ್ವಿಚಕ್ರವಾಹನ ಕದೊಯ್ದಿರುವ ಘಟನೆ ನಗರದ ಎಂಸಿಸಿ ಬ್ಲಾಕ್ ಬಡಾವಣೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಬೈಕ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಗೌತಮ್ ಪಾಟೀಲ್ ಎಂಬುವರಿಗೆ ಸೇರಿದ KA17 H7444 ಸಂಖ್ಯೆಯ ಯಮಹಾ ಬೈಕ್ ಕಳ್ಳತನವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಈ ಕೃತ್ಯವನ್ನು ಎಸಗಿದ್ದಾರೆ. ಮನೆ ಗೇಟ್ ತೆರೆದು, ಬೈಕ್ ಹೊರ ತೆಗೆದು ಬೈಕ್ ಲಾಕ್ ಕಟ್ ಮಾಡಿ ಕಳ್ಳತನ ಮಾಡಿದ್ದಾರೆ. ಬೈಕ್ ಕಳ್ಳತನವಾಗಿರುವ ಬಗ್ಗೆ ಗೌತಮ್ ಪಾಟೀಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗೌತಮ್ ಪಾಟೀಲ್ ಅವರ ಬೈಕ್ ಕಳ್ಳತನ ಆದ ಬಳಿಕ ಅದೇ ಎಂಸಿಸಿಬಿ ಬ್ಲಾಕ್ ನಿವಾಸಿ ಗಣೇಶ್ ಎಂಬುವರ ಬೈಕ್ ಕೂಡ ಕಳ್ಳತನ ಆಗಿರುವುದು ಇಲ್ಲಿನ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಹೆಚ್ಚಿನ ಪೊಲೀಸ್ ಬೀಟ್ ಹಾಕುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಭದ್ರತೆಗಿದ್ದ ಸೆಕ್ಯೂರಿಟಿ ಗಾರ್ಡ್ನಿಂದಲೇ 15 ಕೋಟಿ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ!