T20 world cup 2024: ಇಂದು ಟಿ20 ವಿಶ್ವಕಪ್ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಪರಸ್ಪರ ಸೆಣಸಲಿದ್ದು, ಈ ಹಿನ್ನೆಲೆ ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳು ತಮ್ಮ ಇಷ್ಟ ದೇವರುಗಳಿಗೆ ಪೂಜೆ ಸಲ್ಲಿಸಿ ಭಾರತ ಕಪ್ ಗೆಲ್ಲಲಿ ಎಂದು ಶುಭ ಹಾರೈಸುತ್ತಿದ್ದಾರೆ.
ಚಾಮರಾಜನಗರದಲ್ಲಿ ಆಲ್ ದಿ ಬೆಸ್ಟ್ ತಿಳಿಸಿದ ಮಹಿಳಾ ಕಾಲೇಜ್: ನಮ್ಮ ಟೀಂ ಇಂಡಿಯಾ ಈ ಬಾರಿ ಉತ್ತಮ ಪ್ರದರ್ಶನ ಕೊಡುತ್ತಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ತೋರುತ್ತಿದ್ದಾರೆ. ಒಬ್ಬರು ಎಡವಿದರೂ ಇನ್ನೊಬ್ಬರು ಎದುರಾಳಿ ತಂಡಗಳನ್ನು ಕಟ್ಟಿಹಾಕುತ್ತಿದ್ದಾರೆ. ಈ ಬಾರಿ ಭಾರತ ವಿಶ್ವಕಪ್ ಗೆಲ್ಲಲಿದೆ ಎಂದು ಜೆಎಸ್ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಮಹಾದೇವಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ದಾವಣಗೆರೆಯಲ್ಲಿ ಶುಭಾಶಯ ತಿಳಿಸಿದ ಅಭಿಮಾನಿಗಳು: ಬಲಿಷ್ಠ ಭಾರತಕ್ಕೆ ಸವಾಲ್ ಆಗಿರುವ ದಕ್ಷಿಣ ಆಫ್ರಿಕಾ ತಂಡವನ್ನು ಫೈನಲ್ನಲ್ಲಿ ಸೋಲಿಸಿ ಕಪ್ ಎತ್ತಿಹಿಡಿಯಲಿ ಎಂಬುದು ಅಭಿಮಾನಿಗಳು ಆಶಯವಾಗಿದೆ. ಅಲ್ಲದೆ ದಾವಣಗೆರೆಯ ಕ್ರಿಕೆಟ್ ಪ್ರೇಮಿಗಳು ಟೀಂ ಇಂಡಿಯಾ ಗೆದ್ದು ಬರಲೆಂದು ಪ್ರೀತಿಯಿಂದ ಹರಸಿದ್ರು.
ಗೆಲ್ಲುವ ವಿಶ್ವಾಸ ನಮಗಿದೆ ಎಂದ ಬೆಳಗಾವಿ ಅಭಿಮಾನಿ: ಶಿವರಂಜಿನಿ ಮಠಪತಿ ಎಂಬ ವಿದ್ಯಾರ್ಥಿನಿ ಮಾತನಾಡಿ, ಇಂಡಿಯಾ ಟೀಂ ಚೆನ್ನಾಗಿ ಆಡಿ ವಿಶ್ವಕಪ್ ಗೆದ್ದರೆ ನಮಗೂ ಹೆಮ್ಮೆ ಎನಿಸುತ್ತದೆ. ಗೆಲ್ಲುವ ವಿಶ್ವಾಸ ನಮಗಿದೆ. ನನ್ನ ಫೆವರೆಟ್ ವಿರಾಟ ಕೊಹ್ಲಿ ಸೇರಿ ಇಡೀ ತಂಡಕ್ಕೆ ಬೆಸ್ಟ್ ಆಫ್ ಲಕ್ ಹೇಳುತ್ತೇನೆ ಎಂದರು. ಸಹನಾ ಮುರಗೋಡ ಮಾತನಾಡಿ, ನಮ್ಮ ಟೀಂ ಇಂಡಿಯಾ ಬೌಲಿಂಗ್, ಬ್ಯಾಟಿಂಗ್ ಅತ್ಯುತ್ತಮವಾಗಿ ಮಾಡಬೇಕು. ದಕ್ಷಿಣ ಆಫ್ರಿಕಾ ಕೂಡ ತುಂಬಾ ಸ್ಟ್ರಾಂಗ್ ಆಗಿದ್ದು, 250 ರನ್ ಹೊಡಿಯಲೇಬೇಕು. ಇನ್ನು ವಿರಾಟ್ ಕೊಹ್ಲಿ ನಮಗೆ ಸ್ಫೂರ್ತಿ, ಅವರು ಯಾವುದನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಯಾರಾದ್ರೂ ಕೆಣಕಿದರೆ ತಕ್ಷಣವೇ ಅವರಿಗೆ ತಿರುಗೇಟು ಕೊಡುವ ಅವರ ಆಕ್ರಮಣಕಾರಿ ಗುಣ ನಮಗೆ ತುಂಬಾ ಇಷ್ಟ ಆಗುತ್ತದೆ. ಆದ್ದರಿಂದ ಎಲ್ಲರೂ ಕೊಹ್ಲಿ ಇಷ್ಟಪಡುತ್ತಾರೆ ಎಂದು ಅಭಿಪ್ರಾಯಪಟ್ಟರು.
ಮತ್ತೋರ್ವ ವಿದ್ಯಾರ್ಥಿನಿ ಶೀತಲ್ ಪಂಡಿತ್ ಮಾತನಾಡಿ, ಧೋನಿ ಬಳಿಕ ರೋಹಿತ್ ನಾಯಕತ್ವದಲ್ಲಿ ಟಿ-20 ವಿಶ್ವಕಪ್ ಭಾರತ ಗೆಲ್ಲುವ ನಿರೀಕ್ಷೆ ಎಲ್ಲರಿಗೂ ಇದೆ. ನಮ್ಮ ಟೀಂ ಇಂಡಿಯಾ ಕಪ್ ಗೆದ್ದು ಭಾರತಕ್ಕೆ ಬರುವುದನ್ನೇ ನಾವು ಕಾಯುತ್ತಿದ್ದೇವೆ. ಕೊಹ್ಲಿ ಇಂದು ಸೆಂಚೂರಿ ಹೊಡೆಯಲಿ ಎನ್ನುವುದು ನಮ್ಮ ಆಸೆ ಈಡೇರಲಿದೆ. 10 ವರ್ಷದ ಬಳಿಕ ವಿಶ್ವಕಪ್ ಗೆಲ್ಲುವ ಅವಕಾಶ ನಮ್ಮ ಭಾರತ ತಂಡಕ್ಕೆ ಸಿಕ್ಕಿದೆ. ಗೆದ್ದೇ ಗೆಲ್ಲುತ್ತಾರೆ ಎನ್ನುವ ಭರವಸೆ ಇಡೀ ದೇಶದ ಜನರಿಗಿದೆ. ನಮ್ಮ ಕೊಹ್ಲಿ ಇವತ್ತು ಅತೀ ಹೆಚ್ಚು ರನ್ ಪಕ್ಕಾ ಹೊಡೆಯುತ್ತಾರೆ ಎಂದು ಅನಿತಾ ಶಿರಗಾವಿ ವಿಶ್ವಾಸ ವ್ಯಕ್ತಪಡಿಸಿದರು.
ಓದಿ: ಇಂದು ಭಾರತ - ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್ ಫೈನಲ್: ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗಳೇನು? - Cricket Fans Reactions