ಗಾಯಗೊಂಡ ಗಿಡುಗಕ್ಕೆ ಚಿಕಿತ್ಸೆ - ಆರೈಕೆ ಮಾಡಿ ಮಾನವೀಯತೆ ಮೆರೆದ ಸ್ನೇಕ್ ಪುಟ್ಟು: ವಿಡಿಯೋ - Treating an injured falcon - TREATING AN INJURED FALCON
🎬 Watch Now: Feature Video


Published : Jul 26, 2024, 5:10 PM IST
ಗಂಗಾವತಿ: ಗಾಯಗೊಂಡು ನೆಲಕ್ಕೆ ಬಿದ್ದಿದ್ದ ಗಿಡುಗವನ್ನು ಬೀದಿನಾಯಿಗಳಿಂದ ಸಂರಕ್ಷಿಸಿದ ಸ್ನೇಕ್ ಪುಟ್ಟು ಅಲಿಯಾಸ್ ರಾಘವೇಂದ್ರ ಸಿರಿಗೇರಿ ಎಂಬುವವರು ಅದಕ್ಕೆ ಚಿಕಿತ್ಸೆ ನೀಡಿ ಆರೈಕೆ ಮಾಡುವ ಮೂಲಕ ಮಾನವೀಯತೆ ತೋರಿದ್ದಾರೆ. ಜನವಸತಿ ಪ್ರದೇಶಕ್ಕೆ ಬರುವ ವಿಷಜಂತು, ಕೀಟ, ಹಾವು, ಮೊಸಳೆಗಳನ್ನು ಸುರಕ್ಷಿತ ಪ್ರದೇಶಕ್ಕೆ ಬಿಟ್ಟು ಬರುವ ಹವ್ಯಾಸವನ್ನು ಇವರು ರೂಢಿಸಿಕೊಂಡಿದ್ದಾರೆ.
ತಮ್ಮ ಮನೆಗೆ ಕೊಂಡೊಯ್ದು ಗಿಡುಗ ಹಕ್ಕಿಯ ರೆಕ್ಕೆಯ ಪುನಶ್ಚೇತನಕ್ಕೆ ನೋವು ನಿವಾರಕ ಚುಚ್ಚು ಮದ್ದು ನೀಡಿ ಆರೈಕೆ ಮಾಡುತ್ತಿದ್ದಾರೆ. ಜಯನಗರದ ಮೊದಲ ಹಂತದ 6ನೇ ತಿರುವಿನ ಮನೆಯೊಂದರ ಬಳಿ ಹಾರಲಾಗದ ಸ್ಥಿತಿಯಲ್ಲಿದ್ದ ಗಿಡುಗ ಹಕ್ಕಿಯ ಮೇಲೆ ಬೀದಿನಾಯಿಗಳು ದಾಳಿ ಮಾಡಲು ಮುಂದಾಗಿವೆ. ಇದನ್ನು ಕಂಡ ಸ್ಥಳೀಯರೊಬ್ಬರು ನಾಯಿಗಳನ್ನು ಓಡಿಸಿ, ರಾಘವೇಂದ್ರ ಅವರಿಗೆ ಕರೆ ಮಾಡಿದ್ದಾರೆ.
ರಾಘವೇಂದ್ರ ಅವರು ಸಸ್ಯಹಾರಿಯಾದರೂ, ಗಿಡುಗ ಹಕ್ಕಿಗಾಗಿ ಮಾರುಕಟ್ಟೆಯಿಂದ ಮಾಂಸ ತರಿಸಿ ತಿನ್ನಿಸುತ್ತಿದ್ದಾರೆ. ಹದ್ದು ಚೇತರಿಸಿಕೊಳ್ಳುತ್ತಿದ್ದು, ಪಶು ವೈದ್ಯರಲ್ಲಿ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ಕೊಡಿಸಿ, ಸಂಪೂರ್ಣ ಚೇತರಿಸಿಕೊಂಡ ಬಳಿಕ ಹಕ್ಕಿಯನ್ನು ಸುರಕ್ಷಿತ ತಾಣಕ್ಕೆ ಬಿಟ್ಟು ಬರುವುದಾಗಿ ಸಿರಿಗೇರಿ ತಿಳಿಸಿದ್ದಾರೆ.