ಮಳೆಗಾಗಿ ಬಸವೇಶ್ವರನ ಮೊರೆ ಹೋದ ಕಾಫಿನಾಡಿನ ಜನ: ವಿಡಿಯೋ - Special Pooja For Rain God - SPECIAL POOJA FOR RAIN GOD
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/03-04-2024/640-480-21139639-thumbnail-16x9-ck.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Apr 3, 2024, 10:28 PM IST
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಬಿಸಿಲಿನ ತಾಪದಿಂದ ನೀರಿನ ಅಭಾವ ಸೃಷ್ಟಿಯಾಗುತ್ತಿದೆ. ಹೀಗಾಗಿ ಮೂಡಿಗೆರೆ ತಾಲೂಕಿನ ಹೆಸಗಲ್ ಗ್ರಾಮದಲ್ಲಿರುವ ಬಸವೇಶ್ವರ ಸ್ವಾಮಿಗೆ ಊರಿನ ಜನರು, ಮಾಜಿ ಜನಪ್ರತಿನಿಧಿಗಳು ಮತ್ತು ಸ್ವಾಮೀಜಿಗಳೆಲ್ಲರೂ ಸೇರಿ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ.
ರಾಜ್ಯದಲ್ಲಿ ಹೆಚ್ಚು ಮಳೆ ಬೀಳುವ ಜಿಲ್ಲೆಗಳಲ್ಲಿ ಚಿಕ್ಕಮಗಳೂರು ಕೂಡಾ ಸೇರಿದೆ. ಸದ್ಯ ಜಿಲ್ಲಾದ್ಯಂತ ಹಲವು ಜಲಮೂಲಗಳು ಬತ್ತಿ ಹೋಗಿವೆ. ಜನ-ಜಾನುವಾರುಗಳಿಗೂ ಕುಡಿಯಲು ನೀರಿಲ್ಲದಂತಹ ಪರಿಸ್ಥಿತಿ ಕೆಲವು ಭಾಗಗಳಲ್ಲಿದೆ. ಹೆಚ್ಚಾಗಿ ಮಳೆ ಪಡೆಯುವ ಮೂಡಿಗೆರೆಯಂತಹ ಮಲೆನಾಡಿನ ತಾಲೂಕಿನಲ್ಲೇ ವಾರಕ್ಕೊಮ್ಮೆ ಮಾತ್ರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.
ಸದ್ಯ ಮಳೆಯಾಗದಿದ್ದರೆ ಮುಂದಿನ ದಿನಗಳಲ್ಲಿ ನೀರಿನ ಹಾಹಾಕಾರ ಎದುರಿಸಬೇಕಾಗುತ್ತದೆ. ಕಾಫಿ, ಅಡಿಕೆ ಮತ್ತು ಮೆಣಸು ಬೆಳೆ ಉಳಿಸಿಕೊಳ್ಳಲು ಬೆಳೆಗಾರರು ಹರಸಾಹಸಪಡುತ್ತಿದ್ದಾರೆ. ಬರಗಾಲದಲ್ಲಿ ಇಲ್ಲಿಗೆ ಬಂದು ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರೆ ಉತ್ತಮವಾಗಿ ಮಳೆಯಾಗುತ್ತದೆ ಎಂಬುದು ಭಕ್ತರ ನಂಬಿಕೆ.
ಮಾಜಿ ಸಚಿವೆ ಮೋಟಮ್ಮ, ಸ್ವಾಮೀಜಿಗಳು ಹಾಗೂ ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಮೈಸೂರು: ಹದಿನಾರು ಗ್ರಾಮದಲ್ಲಿ ಸಂಭ್ರಮದಿಂದ ನೆರವೇರಿದ ಎತ್ತಿನ ಬಂಡಿ ಜಾತ್ರೆ - Bullock cart festival