'ಔರ್ ಏಕ್ ಬಾರ್ ಮೋದಿ ಸರ್ಕಾರ್': 13 ಸಾವಿರ ಅಡಿ ಎತ್ತರದಿಂದ ಯುವಕರ ಸ್ಕೈ ಡೈವಿಂಗ್ - Modi Fans Sky Diving - MODI FANS SKY DIVING
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/08-04-2024/640-480-21175878-982-21175878-1712576617639.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Apr 8, 2024, 5:30 PM IST
ವಿಜಯಪುರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ರಾಜಕೀಯ ಪಕ್ಷಗಳು ಭರ್ಜರಿ ಕಸರತ್ತಿನಲ್ಲಿ ತೊಡಗಿವೆ. ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಮತಬೇಟೆ ನಡೆಸುತ್ತಿವೆ. ಇದೇ ವೇಳೆ ಮತ್ತೊಂದೆಡೆ, ಚುನಾವಣೆಯಲ್ಲಿ ಗೆದ್ದು ಮೋದಿ ಮತ್ತೆ ದೇಶದ ಪ್ರಧಾನಿಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿ, ವಿಜಯಪುರದ ಅಡ್ವೆಂಚರಸ್ ಸ್ಪೋರ್ಟ್ಸ್ ತಂಡದ ಉತ್ಸಾಹಿ ತರುಣರು ಸ್ಕೈ ಡೈವಿಂಗ್ ಮಾಡಿ ತಮ್ಮ ಅಭಿಮಾನ ಮೆರೆದಿದ್ದಾರೆ.
ವಿಜಯಪುರದ ಯುವ ಉದ್ಯಮಿ ರಾಜಶೇಖರ ಮುತ್ತಿನಪೆಂಡಿಮಠ ಸೇರಿದಂತೆ ನಾಲ್ವರು ಯುವಕರು 13 ಸಾವಿರ ಅಡಿ ಮೇಲಿನಿಂದ 'ಔರ್ ಏಕ್ ಬಾರ್ ಮೋದಿ ಸರ್ಕಾರ್' ಎಂಬ ಬ್ಯಾನರ್ ಹಿಡಿದು ಧುಮುಕಿದ್ದಾರೆ. ಬ್ಯಾಂಕಾಕ್ನ ಖೋಯಾಯ್ ಎಂಬ ಪ್ರದೇಶದಲ್ಲಿ ಇವರು ಸ್ಕೈ ಡೈವಿಂಗ್ ಮಾಡಿದ್ದಾರೆ.
ಮೋದಿ ದೇಶಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ಹಾಗಾಗಿ ಆಗಸದಲ್ಲೂ ಅವರ ಹೆಸರು ರಾರಾಜಿಸಬೇಕು ಎಂದು ವಿಭಿನ್ನ ಪ್ರಯತ್ನ ಮಾಡಿದ್ದೇವೆ ಎನ್ನುತ್ತಾರೆ ರಾಜಶೇಖರ ಮುತ್ತಿನಪೆಂಡಿಮಠ.
ಬೆಂಗಳೂರಿನ ರಾಹುಲ್ ಡಾಕ್ರೆ, ಅನುಭವ ಅಗರವಾಲ್ ಹಾಗೂ ಮಹಾರಾಷ್ಟ್ರದ ಹಿಮಾಂಶು ಸಾಬಳೆ ತಂಡದಿಂದ ಈ ವಿಭಿನ್ನ ಪ್ರಯತ್ನ ನಡೆದಿದೆ.
ಇದನ್ನೂ ಓದಿ: ದಾವಣಗೆರೆ: ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಜಿ.ಬಿ.ವಿನಯ್ ಕುಮಾರ್ ನಿರ್ಧಾರ - G B Vinay Kumar