ಪಾದಯಾತ್ರೆ ಸಮಾರೋಪದ ಮೆರವಣಿಗೆಯಲ್ಲಿ ಮೈತ್ರಿ ಶಾಸಕರಿಂದ ಭರ್ಜರಿ ಡ್ಯಾನ್ಸ್ - ವಿಡಿಯೋ - BJP JDS MLAS DANCE - BJP JDS MLAS DANCE

🎬 Watch Now: Feature Video

thumbnail

By ETV Bharat Karnataka Team

Published : Aug 10, 2024, 5:34 PM IST

ಮೈಸೂರು: ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾರಂಭದ ವೇದಿಕೆಗೆ ಹೋಗುವ ಮೆರವಣಿಗೆಯಲ್ಲಿ ಬಿಜೆಪಿಯ ಶಾಸಕರು ಹಾಗೂ ಮಾಜಿ ಶಾಸಕರು ಭರ್ಜರಿ ಡ್ಯಾನ್ಸ್‌ ಮಾಡುವ ಮೂಲಕ ಗಮನ ಸೆಳೆದರು. ಇಂದು ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಿತು.  

ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆಯ ಮೂಲಕ ಶುಕ್ರವಾರ ಸಂಜೆ ಮೈಸೂರಿಗೆ ಆಗಮಿಸಿದ ಬಿಜೆಪಿ ಮತ್ತು ಜೆಡಿಎಸ್​ ನಾಯಕರು ಇಂದು ಬೆಳಗ್ಗೆ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪಾದಯಾತ್ರೆ ಮಹಾರಾಜ ಕಾಲೇಜು ಮೈದಾನ ತಲುಪಿತು.

ಈ ಸಂದರ್ಭದಲ್ಲಿ ಬಿಜೆಪಿ ಶಾಸಕರು, ಮಾಜಿ ಶಾಸಕರು ಭರ್ಜರಿ ಡ್ಯಾನ್ಸ್‌ ಮಾಡಿದರು. ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ತಮಟೆ ಬಾರಿಸುವ ಮೂಲಕ ಗಮನ ಸೆಳದರು. ಇಂದು ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ನಡೆಯಿತು. ಈ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆ, ಮಂಡ್ಯ ಜಿಲ್ಲೆ, ಹಾಸನ ಜಿಲ್ಲೆ, ಹಾಗೂ ಚಾಮರಾಜನಗರ ಜಿಲ್ಲೆ ಸೇರಿದಂತೆ ಸುತ್ತುಮುತ್ತ ಜಿಲ್ಲೆಯ ಸಾವಿರಾರು ಸಂಖ್ಯೆಯ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಭಾಗವಹಿಸಿದ್ದರು. 

ಈ ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್.‌ ಯಡಿಯೂರಪ್ಪ, ಪ್ರಲ್ಹಾದ್‌ ಜೋಶಿ, ಹಾಗೂ ಇತರೆ ಎರಡು ಪಕ್ಷಗಳ ಮುಖಂಡರು ಭಾಗವಹಿಸಿದ್ದಾರೆ. ಇನ್ನು ಜನಾಂದೋಲನ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಮೈತ್ರಿ ಪಕ್ಷಗಳ ನಾಯಕರ ವಿರುದ್ಧ ನಡೆಸಿದ ವಾಗ್ದಾಳಿಗೆ ಇಂದು ಮೈತ್ರಿ ನಾಯಕರು ಮೈಸೂರು ಚಲೋ ಸಮಾರೋಪದಲ್ಲಿ ಕೌಂಟರ್‌ ನೀಡಿದರು.

ಓದಿ:  ರಾಜ್ಯದ ಉದ್ದಗಲಕ್ಕೂ ಓಡಾಡಿ ನಿಮ್ಮನ್ನು ಮನೆಗೆ ಕಳುಹಿಸೋವರೆಗೂ ನಾನು ಮನೆ ಸೇರಲ್ಲ: ಕೈ ನಾಯಕರ ವಿರುದ್ಧ ಬಿಎಸ್​ವೈ ಗುಡುಗು - B S Yediyurappa

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.