80 ಕೆಜಿ ತೂಕ ಎತ್ತುವ 6 ವರ್ಷದ ಪುಟಾಣಿ ವೇಟ್ ಲಿಫ್ಟರ್: ಎಲ್ಲರ ಗಮನ ಸೆಳೆವ ಬಾಲಕ ಯತಿ.. - ಪವರ್‌ಲಿಫ್ಟರ್
🎬 Watch Now: Feature Video
Published : Feb 6, 2024, 10:20 AM IST
|Updated : Feb 6, 2024, 2:42 PM IST
ಸೂರತ್ (ಗುಜರಾತ್): ಮಕ್ಕಳು ಆಟಿಕೆಗಳೊಂದಿಗೆ ಆಡುವ ವಯಸ್ಸಿನಲ್ಲಿ ಸೂರತ್‌ನ 6 ವರ್ಷದ ಬಾಲಕ ಮಾತ್ರ ಒಲಿಂಪಿಕ್ ಬಾರ್ಬೆಲ್ ಮತ್ತು ಹೆವಿ ಪ್ಲೇಟ್‌ಗಳೊಂದಿಗೆ ಪವರ್‌ಲಿಫ್ಟಿಂಗ್ ಮಾಡುತ್ತಿದ್ದಾನೆ. ಇಂದಿನ ಡಿಜಿಟಲ್ ಯುಗದಲ್ಲಿ ಅನೇಕ ಮಕ್ಕಳು ಮೊಬೈಲ್ ಫೋನ್ನಲ್ಲೇ ಮುಳುಗಿರುವುದು ಕಂಡ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲೊಬ್ಬ ಪುಟ್ಟ ಕ್ರೀಡಾಪಟು ಈಗಾಗಲೇ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಲಾರಂಭಿಸಿದ್ದಾನೆ. ಇಷ್ಟು ಚಿಕ್ಕ ವಯಸ್ಸಿನ ಈ ಹುಡುಗ ದೊಡ್ಡ ತೂಕ ಎತ್ತುವ ಮೂಲಕ ಎಲ್ಲರ ಗಮನಸೆಳೆಯುತ್ತಿದ್ದಾನೆ.
6 ವರ್ಷದ ಬಾಲಕ 80 ಕೆಜಿ ತೂಕವನ್ನು ಎತ್ತುತ್ತಾನೆ ಎಂದರೆ ಯಾರೂ ನಂಬಲಾರರು. ಗುಜರಾತ್‌ನ ಸೂರತ್ ನಗರದ ಈ ಪುಟ್ಟ ಪವರ್ ಲಿಫ್ಟರ್ ಜನರಲ್ಲಿ ಅಚ್ಚರಿ ಮೂಡಿಸಿದ್ದಾನೆ. ಈ ಹುಡುಗನ ಹೆಸರು ಯೇತಿ ಜೇತ್ವಾ, ಹುಡುಗ ಚಿಕ್ಕ ವಯಸ್ಸಿನಲ್ಲೇ ಪವರ್‌ಲಿಫ್ಟಿಂಗ್ ಮತ್ತು ವೇಟ್‌ಲಿಫ್ಟಿಂಗ್‌ನಲ್ಲಿ 17 ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾನೆ. ಯತಿ 1 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಅವರ ತಂದೆ ರವಿ ಜೇತ್ವಾ ಜಿಮ್ ತರಬೇತುದಾರ ಮತ್ತು ತಾಯಿ ಶಿಕ್ಷಕಿ. ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಬೇಕು ಎಂಬುದು ಬಾಲಕ ಯತಿ ಕನಸಾಗಿದೆ.
ಪುಟಾಣಿ ಯತಿಗೆ ಪವರ್‌ಲಿಫ್ಟಿಂಗ್ ಅಂದ್ರೆ ತುಂಬಾ ಇಷ್ಟ. ಶಾಲೆಯಿಂದ ಬಂದ ನಂತರ ನಿತ್ಯ 2 ಗಂಟೆಗಳ ಕಾಲ ಪವರ್‌ಲಿಫ್ಟಿಂಗ್ ಮಾಡುತ್ತಾರೆ. 27 ಕೆಜಿ ತೂಕ ಹೊಂದಿರುವ ಈ ಹುಡುಗ, ಉತ್ತಮ ಆಹಾರ ಸೇವನೆ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುತ್ತಾನೆ. ಆತ ಬೆಳೆದು ದೊಡ್ಡವನಾದ ಮೇಲೆ ಪ್ರಸಿದ್ಧ ಪವರ್‌ಲಿಫ್ಟರ್ ಆಗಲು ಬಯಸಿದ್ದಾನೆ.
''ಬಾಲಕ 2 ವರ್ಷದವನಿದ್ದಾಗ ಜಿಮ್‌ಗೆ ಕರೆದುಕೊಂಡು ಹೋಗುತ್ತಿದ್ದೆ. ಇದ್ದಕ್ಕಿದ್ದಂತೆ ಯತಿಗೆ ಜಿಮ್‌ನಲ್ಲಿ ಬಿದ್ದಿರುವ ಪವರ್‌ಲಿಫ್ಟಿಂಗ್ ಉಪಕರಣಗಳ ಬಗ್ಗೆ ಆಸಕ್ತಿ ಹೊಂದಿದ್ದರು'' ಎಂದು ಯತಿ ಅವರ ತಂದೆ ರವಿ ಜೇತ್ವಾ ಹೇಳುತ್ತಾರೆ. ಅವರ ಆಸಕ್ತಿ ಕಂಡು ನಿಧಾನವಾಗಿ ಪವರ್ ಲಿಫ್ಟಿಂಗ್ ತರಬೇತಿ ನೀಡಲು ಆರಂಭಿಸಿದೆ. ಯತಿ ಇಷ್ಟು ಉತ್ತಮ ಪ್ರದರ್ಶನ ನೀಡಬಲ್ಲನು ಎಂದು ನಾನು ಮೊದಲು ಭಾವಹಿಸಿರಲಿಲ್ಲ. ಇಂದು ಯತಿ 6 ವರ್ಷ ವಯಸ್ಸಿನವನಾಗಿದ್ದಾನೆ ಮತ್ತು 27 ಕೆಜಿ ತೂಕ ಹೊಂದಿದ್ದಾನೆ. ಆದರೆ, ಯತಿ ಯಾವುದೇ ಪಂದ್ಯಾವಳಿಗೆ ಹೋದಾಗ, ಅತ್ಯುತ್ತಮ ಪವರ್‌ಲಿಫ್ಟರ್‌ಗಳು ಸಹ ಅವರನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಯತಿಯು 80 ಕೆಜಿ ತೂಕವನ್ನು ಸುಲಭವಾಗಿ ಎತ್ತುತ್ತಾನೆ.
''ಪವರ್ ಲಿಫ್ಟಿಂಗ್ ಎಂದರೆ ನನಗೆ ತುಂಬಾ ಇಷ್ಟ. ಶಾಲೆಯಿಂದ ಬಂದ ನಂತರ ನಿತ್ಯ 2 ಗಂಟೆಗಳ ಕಾಲ ಪವರ್ ಲಿಫ್ಟಿಂಗ್ ಮಾಡುತ್ತೇನೆ. ಆಹಾರದ ಬಗ್ಗೆಯೂ ವಿಶೇಷವಾದ ಕಾಳಜಿ ವಹಿಸುತ್ತೇನೆ'' ಎಂದ ಯತಿ ತಿಳಿಸಿದ್ದಾನೆ.
ಇದನ್ನೂ ಓದಿ: ಬಂಗುಂಡ್: ಇದು ಕಾಶ್ಮೀರದ ಮೊದಲ 'ಸಾವಯವ ಗ್ರಾಮ'