ಚುನಾವಣೆಯಲ್ಲಿ ಸೋಲು-ಗೆಲುವು ಅನಿವಾರ್ಯ: ಸಂಯುಕ್ತಾ ಪಾಟೀಲ - Samyukta Patil
🎬 Watch Now: Feature Video
Published : Jun 6, 2024, 5:42 PM IST
ಬಾಗಲಕೋಟೆ: "ರಾಜಕೀಯದಲ್ಲಿ ಸೋಲು, ಗೆಲುವು ಅನಿವಾರ್ಯ. ಚುನಾವಣೆಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಹೇಳಿದರು.
ಬಾಗಲಕೋಟೆ ನವನಗರದ ಪತ್ರಿಕಾ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಕಳೆದ ಬಾರಿಗಿಂತ ಈ ಸಾರಿ ಒಂದು ಲಕ್ಷಕ್ಕೂ ಅಧಿಕ ಮತಗಳು ನಮ್ಮದಾಗಿವೆ. ಇದಕ್ಕಾಗಿ ಶ್ರಮಿಸಿದ ಕಾರ್ಯಕರ್ತರು, ಮುಖಂಡರು, ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸೋಲಿಗೆ ಕಾರಣ ತಿಳಿದಿಲ್ಲ. ಎಲ್ಲ ಮುಖಂಡರೊಡನೆ ಚರ್ಚಿಸಿ, ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಚುನಾವಣೆ ಸಮಯದಲ್ಲಿ ನನ್ನ ತಂದೆ, ತಾಯಿ ಹಾಗೂ ಪತಿ ಸಾಕಷ್ಟು ಸಹಕಾರ ನೀಡಿದ್ದು, ಅವರಿಗೂ ಧನ್ಯವಾದಗಳು. ಇದರ ಐದು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಪಿ.ಸಿ.ಗದ್ದಿಗೌಡರ ಅವರಿಗೂ ಅಭಿನಂದನೆಗಳು. ಇನ್ನೂ ಹೆಚ್ಚಿನ ಕೆಲಸ ಮಾಡಿ, ಬಾಗಲಕೋಟೆ ಜಿಲ್ಲೆ ಅಭಿವೃದ್ಧಿ ಮಾಡಲಿ" ಎಂದು ಹಾರೈಸಿದರು.
ಶಾಸಕರು, ಸಚಿವರ ಕ್ಷೇತ್ರದಲ್ಲೂ ಬಿಜೆಪಿ ಮುನ್ನಡೆ ಸಾಧಿಸಿರುವ ಬಗ್ಗೆ ಪ್ರತಿಕ್ರಿಯಿಸಿ, "ಈ ವಿಷಯದ ಬಗ್ಗೆ ಮುಖಂಡರ ಜೊತೆಗೆ ಚರ್ಚೆ ನಡೆಸುವ ಅಗತ್ಯವಿದೆ. ನಾನು ಇಲ್ಲಿಯೇ ಇದ್ದು, ಮುಂದಿನ ಚುನಾವಣೆಗೆ ಪಕ್ಷ ಸಂಘಟಿಸಿ, ಜಯಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ: ಸಚಿವ ಬಿ.ನಾಗೇಂದ್ರ ಮಾಧ್ಯಮಗೋಷ್ಟಿ- LIVE - MINISTER NAGENDRA PRESS MEET