ಬೆಳಗಾವಿ ಸಬ್ ರಜಿಸ್ಟ್ರಾರ್​ ಕಚೇರಿಯಲ್ಲಿ ಅಗ್ನಿ ಅವಘಡ; ತಪ್ಪಿದ ಭಾರಿ ದುರಂತ - Fire In Sub Registrar Office - FIRE IN SUB REGISTRAR OFFICE

🎬 Watch Now: Feature Video

thumbnail

By ETV Bharat Karnataka Team

Published : Mar 21, 2024, 5:21 PM IST

ಬೆಳಗಾವಿ: ನಗರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ - ನೋಂದಣಿ ಮತ್ತು ವಿವಾಹಗಳ ನೋಂದಣಿ ಅಧಿಕಾರಿಗಳ ಕಾರ್ಯಾಲಯದಲ್ಲಿ ಇಂದು ಹಠಾತ್​ ಬೆಂಕಿ ಅವಘಡ ಸಂಭವಿಸಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಈ ಕಚೇರಿಯಲ್ಲಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಿದ್ದಂತೆ ಈ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ರೀತಿ ಹಾನಿ ಸಂಭವಿಸಿಲ್ಲ. ಹಾಗಾಗಿ ಭಾರಿ ದುರಂತವೊಂದು ತಪ್ಪಿದೆ. 

ಕಾವೇರಿ ಕೇಂದ್ರದ ಅಸಿಸ್ಟೆಂಟ್ ಮ್ಯಾನೇಜರ್ ರಾಮಪ್ರಸಾದ್ ಟಿ.ಎಮ್. ಅವರು ಈ ಅವಘಡ ಕುರಿತು ಮಾಹಿತಿ ನೀಡಿದ್ದು, ಕಚೇರಿಯಲ್ಲಿನ ಫ್ಯಾನ್​ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಸಿಬ್ಬಂದಿ ನಮ್ಮಲ್ಲಿದ್ದ ಫೈರ್ ಸೇಫ್ಟಿಂಗ್ ಮಶಿನ್ ಮೂಲಕ ಆ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯಿಂದ ಕಂಪ್ಯೂಟರ್, ಡಾಟಾ ಸೇರಿ ಯಾವುದೇ ರೀತಿಯ ಹಾನಿಯಾಗಿಲ್ಲ. ಇವತ್ತು ಕಚೇರಿ ದುರಸ್ತಿಗೊಳಿಸಿ, ನಾಳೆಯಿಂದ ಕಚೇರಿ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.

ಇದನ್ನೂ ಓದಿ: ತುಮಕೂರು: ದೇವಸ್ಥಾನದಲ್ಲಿ ದೀಪ ಹಚ್ಚುತ್ತಿದ್ದ ವೇಳೆ ಬಟ್ಟೆಗೆ ಬೆಂಕಿ ತಗುಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.