ಕುಡಿಯುವ ನೀರಿಗಾಗಿ ಆಗ್ರಹ : ಇಂಡಿ ಪಟ್ಟಣದಲ್ಲಿ ಮೊಬೈಲ್‌ ಟವರ್‌ ಏರಿ ಕುಳಿತ ಯುವಕ

🎬 Watch Now: Feature Video

thumbnail

By ETV Bharat Karnataka Team

Published : Mar 19, 2024, 3:30 PM IST

ವಿಜಯಪುರ : ಯುವಕನೋರ್ವ ಕುಡಿಯುವ ನೀರಿಗಾಗಿ ಒತ್ತಾಯಿಸಿ ಮೊಬೈಲ್‌ ಟವರ್‌ ಏರಿ ಕುಳಿತ ಘಟನೆ ಇಂದು ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ಇಂಡಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಸತೀಶ್ ಚಂದ್ರಶೇಖರ ಕಡಣಿ ಎನ್ನುವ ಯುವಕ ಇಂಡಿ ಪಟ್ಟಣದಲ್ಲಿನ ಬಸವೇಶ್ವರ ವೃತ್ತದಲ್ಲಿನ 250 ಫೀಟ್ ಎತ್ತರದ ಬಿಎಸ್ಎನ್ಎಲ್ ಟವರ್ ಹತ್ತಿದ ಯುವಕ ಎಂದು ಗುರುತಿಸಲಾಗಿದೆ.

ಗ್ರಾಮದಲ್ಲಿ ಸುಮಾರು ದಿನಗಳಿಂದ ಕುಡಿಯುವ ನೀರಿಗೆ ಹಾಹಾಕಾರವಿದೆ. ಹಲವು ಬಾರಿ ಈ ಕುರಿತು ಸಂಬಂಧಿತ ಪಿಡಿಒ‌ ಮತ್ತು ತಾಲೂಕು ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಕ್ರಮವಹಿಸಿಲ್ಲ ಮತ್ತು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಯುವಕ ತಿಳಿಸಿದ್ದಾನೆ ಎಂದು ತಿಳಿದುಬಂದಿದೆ.

ಆದರೆ ಜೀವಕ್ಕೆ ಅಪಾಯ ತಂದೊಡ್ಡಬಲ್ಲ ಯುವಕನ ಈ ಹುಚ್ಚಾಟವನ್ನ ಬೆಳ್ಳಂಬೆಳಗ್ಗೆ ಕಂಡ ಸ್ಥಳೀಯ ಇಂಡಿ ನಿವಾಸಿಗಳು ಕೆಲಕಾಲ ಬೆರಗಾಗಿದ್ದರು. ಸುದ್ದಿ ತಿಳಿದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ಕಾರ್ಯಾಚರಣೆ ನಡೆಸಿ, ಅವನ ಮನವೊಲಿಸಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಡಿ ಶಹರ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ.

ಇದನ್ನೂ ಓದಿ : ಫಿಕ್ಸ್‌ ಆಗಿದ್ದ ಮದುವೆ ತಡ ಮಾಡಿದ್ದಕ್ಕೆ ಟವರ್‌ ಏರಿ ಕುಳಿತ ಹೊಸಪೇಟೆ ಯುವಕ: ಮುಂದೇನಾಯ್ತು?

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.