ಹುಲಿಗೂ ತಟ್ಟಿದ ಬಿಸಿಲ ಬೇಗೆ: ಬಂಡೀಪುರದ ಕೆರೆಯಲ್ಲಿ ಈಜಾಡಿ ಕೂಲ್ ಕೂಲ್ ಆದ ವ್ಯಾಘ್ರ - Tiger swimming in lake

🎬 Watch Now: Feature Video

thumbnail

By ETV Bharat Karnataka Team

Published : Mar 13, 2024, 8:45 PM IST

ಚಾಮರಾಜನಗರ : ದಿನೇ ದಿನೆ ನಾಡಲ್ಲಿ ಬಿಸಿಲ‌ ಬೇಗೆ ಹೆಚ್ಚುತ್ತಿದೆ. ಸೆಖೆಗೆ ಜನರು ಹೈರಣಾಗಿದ್ದಾರೆ. ನಾಡಿನಂತೆ ಕಾಡಲ್ಲೂ ಕೂಡ ಬಿಸಿಲ ಬೇಗೆಗೆ ಹುಲಿ ಕಂಗಾಲಾಗಿ ಕೆರೆನೀರಿನ ಮೊರೆ ಹೋದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಬುಧವಾರ ಸಂಜೆ ನಡೆದಿದೆ. ದೇಶದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಬಂಡೀಪುರದಲ್ಲಿ ಹುಲಿಯೊಂದು ಬಿಸಿಲ ಝಳ ತಾಳಲಾರದೇ ಕೆರೆಗೆ ಎಂಟ್ರಿ ಕೊಟ್ಟು, ಈಜಾಡಿ ಮೈ ತಣಿಸಿಕೊಂಡಿದೆ. ಸದ್ಯ ಕೆರೆಯಲ್ಲಿ ರಿಲ್ಯಾಕ್ಸ್​​ಗೆ ಜಾರಿದ ಹುಲಿಯನ್ನು ಕಂಡು ಸಫಾರಿಗೆ ತೆರಳಿದ್ದವರು ಖುಷ್ ಆಗಿದ್ದಾರೆ. ಇನ್ನು ಹುಲಿ ಚಿನ್ನಾಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಗಡಿಜಿಲ್ಲೆಯಲ್ಲೂ ಸುಡುಸುಡು ಬಿಸಿಲು : ಚಾಮರಾಜನಗರ ಜಿಲ್ಲೆಯಲ್ಲೂ ಸುಡು ಸುಡು ಬಿಸಿಲು ಹೆಚ್ಚಾಗಿದ್ದು, 37°-39° ಸೆ. ತಾಪಮಾನ ದಾಖಲಾಗುತ್ತಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸದ್ಯ ಸಮಸ್ಯೆ ಇಲ್ಲದಿದ್ದರೂ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಇನ್ನು ಬೇಸಿಗೆ ಸಂದರ್ಭದಲ್ಲಿ ನಿಂಬೆ, ಎಳನೀರಿಗೆ ಸಖತ್ ಡಿಮ್ಯಾಂಡ್ ಸೃಷ್ಟಿಯಾಗಿದ್ದು, ನಿಂಬೆ ಗ್ರಾಹಕರಿಗೆ ಹುಳಿಯಾಗಿದೆ. ಬೇಸಿಗೆ ಸಮಯದಲ್ಲಿ ಮಾರುಕಟ್ಟೆಗೆ ನಿಂಬೆಹಣ್ಣಿನ ಆವಕ ಕಡಿಮೆ. ಆದರೆ, ನಿಂಬೆಹಣ್ಣಿನ ಬಳಕೆ ಹೆಚ್ಚಿರುತ್ತದೆ. ನಿಂಬೆ ಹಣ್ಣಿನ ಷರಬತ್ತು, ಪಾನಕಕ್ಕೆ ಹೆಚ್ಚು ಬೇಡಿಕೆ ಜಾಸ್ತಿ. ಹೀಗಾಗಿ, ಬೇಡಿಕೆ ಹೆಚ್ಚು. ಹಾಗಾಗಿ, ನಿಂಬೆಹಣ್ಣಿನ ಧಾರಣೆ ₹8-14 ರೂ. ತನಕವೂ ಇದೆ. ಎಳ ನೀರು, ತಂಪು ಪಾನೀಯಗಳ ಬಳಕೆಯೂ ಹೆಚ್ಚಾಗಿದೆ.

ಇದನ್ನೂ ಓದಿ : ನೀರಿನ ಕಟ್ಟೆಯಲ್ಲಿ ಬಾಯಾರಿಕೆ ತಣಿಸಿಕೊಂಡ ಹುಲಿ: ವಿಡಿಯೋ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.