ETV Bharat / technology

ಹೊಸ ಎಲೆಕ್ಟ್ರಿಕ್​​ ಕಾರ್​ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್​; ಈ ಕಾರಿನ ಬೆಲೆ, ವೈಶಿಷ್ಟ್ಯ ಹೀಗಿದೆ! - Tata Motors Electric Car Launch

author img

By ETV Bharat Tech Team

Published : Aug 28, 2024, 2:21 PM IST

ಇನ್ನೇನು ಗಣೇಶ ಹಬ್ಬ ಸಮೀಪಿಸುತ್ತಿದೆ. ಹಬ್ಬ ಹರಿದಿನಗಳಲ್ಲಿ ಜನರು ತಮ್ಮ ಮನೆಗಳಿಗೆ ಹೊಸ ವಸ್ತುಗಳನ್ನು ಖರೀದಿಸಲು ಮುಂದಾಗುವುದು ಸಹಜ. ಇನ್ನು ಕೆಲವರು ವಾಹನಗಳನ್ನು ಖರೀದಿಸುತ್ತಾರೆ. ಇದನ್ನೇ ಗಮನದಲ್ಲಿಟ್ಟುಕೊಂಡ ಕಂಪನಿಗಳು ತಮ್ಮ ಹೊಸ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಅದರಲ್ಲಿ ಟಾಟಾ ಕಂಪನಿಯ ಕಾರು ಸಹ ಒಂದು. ಆ ಕಾರು ಯಾವುದು, ಬೆಲೆ, ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ.

TATA MOTORS ELECTRIC CAR  INDIAS FIRST COUPE STYLE SUV LAUNCH  TATA MOTORS CAR PRICE  TATA ELECTRIC CAR FEATURES
ಎಲೆಕ್ಟ್ರಿಕಲ್​ ಕಾರ್​ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್ (ETV Bharat)

ಪಾಟ್ನಾ (ಬಿಹಾರ): ಹಬ್ಬ ಹರಿದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಗೆ ಹೊಸ ವಸ್ತುಗಳನ್ನು ತರಲು ಬಯಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕಾರು ತಯಾರಿಕಾ ಕಂಪನಿಗಳು ತಮ್ಮ ಕೆಲ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿವೆ. ಕೆಲವು ಕಂಪನಿಗಳು ಈಗಾಗಲೇ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಟಾಟಾ ಮೋಟಾರ್ಸ್​ನ ಕೂಪೆ ಮಾದರಿಯ SUV EV ಕರ್ವ್ ಕಾರು ಸಹ ಒಂದಾಗಿದೆ. ಈ ಕಾರಿನ ವೈಶಿಷ್ಟ್ಯಗಳು ಹೀಗಿವೆ.

TATA MOTORS ELECTRIC CAR  Indias First Coupe Style SUV launch  TATA MOTORS car price  TATA ELECTRIC CAR Features

ಟಾಟಾ ಮೋಟಾರ್ಸ್ ತನ್ನ ಮೊದಲ ಕೂಪೆ ಮಾದರಿಯ SUV EV ಕರ್ವ್ ಕಾರನ್ನು ಬಿಹಾರದಲ್ಲಿ ಲಾಂಚ್​ ಮಾಡಿದೆ. ಪಾಟ್ನಾ ಮೇಯರ್ ಸೀತಾ ಸಾಹು ಈ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದರು. ಟಾಟಾ ಮೋಟಾರ್ಸ್‌ನ ಕೂಪೆ ಮಾದರಿಯಲ್ಲಿ ಇದು ಮೊದಲ EV ಕಾರಾಗಿದೆ. ಈ ವಾಹನ ಎರಡು ಬ್ಯಾಟರಿ ಮಾದರಿಗಳನ್ನು ಹೊಂದಿದೆ. ಈ EV ಕಾರನ್ನು ಖರೀದಿಸಲು ಬಿಹಾರ ಸರ್ಕಾರವು ರಿಯಾಯಿತಿ ಘೋಷಿಸಿದ್ದು, ಅದರ ಲಾಭವನ್ನು ಸಹ ನೀವು ಪಡೆಯಬಹುದು.

ಫೈವ್ ಸ್ಟಾರ್ ಸುರಕ್ಷತಾ ರೇಟಿಂಗ್: ಟಾಟಾ ಮೋಟಾರ್ಸ್ ಸುರಕ್ಷತೆಗೆ ಹೆಸರುವಾಸಿಯಾಗಿದೆ. ಫೈವ್ ಸ್ಟಾರ್ ಸುರಕ್ಷತಾ ರೇಟಿಂಗ್ ಹೊಂದಿದೆ. ಇದು ಸುಧಾರಿತ ಮಟ್ಟದ ADAS 2 ವ್ಯವಸ್ಥೆಯನ್ನು ಹೊಂದಿದೆ. ಅಪಘಾತಗಳನ್ನು ಅಂದರೆ ಡಿಕ್ಕಿ ಹೊಡೆಯುವುದನ್ನು ತಡೆಯಲು ಸಹಾಯ ಮಾಡುತ್ತದೆ.

ಕಾರಿನಲ್ಲಿ ADAS 2 ಆನ್ ಆಗಿದ್ದರೆ, ಹೆದ್ದಾರಿಯಲ್ಲಿ ಈ ಕಾರಿನ ಮುಂದೆ ಬೇರೆ ವಾಹನವು ಇದ್ದಕ್ಕಿದ್ದಂತೆ ಮುಂಭಾಗದ ಲೇನ್ ಅನ್ನು ಬದಲಾಯಿಸಿದರೆ, ಈ ವಾಹನವು ತನ್ನ ಲೇನ್ ಅನ್ನು ಸ್ವಯಂಚಾಲಿತವಾಗಿ ಬದಲಾಯಿಸುತ್ತದೆ. ಮುಂದಿರುವ ವಾಹನವು ಬ್ರೇಕ್ ಹಾಕುತ್ತಿದ್ದರೆ ಅಥವಾ ವೇಗವಾಗಿ ಚಲಿಸುವ ವಾಹನವು ಹಿಂದಿನಿಂದ ಬರುತ್ತಿದ್ದರೆ ಅಥವಾ ಬದಿಯಿಂದ ವಾಹನವನ್ನು ಸ್ಪರ್ಶಿಸುವ ಸಾಧ್ಯತೆಯಿದ್ದರೆ ಆಗ ವಾಹನದಲ್ಲಿ ಅಲಾರಂ ಪ್ರತಿಧ್ವನಿಸುತ್ತದೆ. ಇದಲ್ಲದೇ, ಈ ಕಾರು 5 ಆಸನಗಳ, 6 ಏರ್‌ಬ್ಯಾಗ್‌ಗಳನ್ನು ಕೂಡಾ ಹೊಂದಿದೆ.

ವಾಹನವು ಎರಡು ಮಾದರಿಗಳಲ್ಲಿ ಲಭ್ಯ: ವಾಹನವನ್ನು ಎರಡು ಮಾದರಿಗಳಲ್ಲಿ ಬಿಡುಗಡೆ ಮಾಡಲಾಗಿದೆ. ಅವುಗಳಲ್ಲಿ ಒಂದು 45 kWh ಬ್ಯಾಟರಿಯನ್ನು ಹೊಂದಿದೆ. ಅದು 502 ಕಿಲೋಮೀಟರ್ ವ್ಯಾಪ್ತಿಯವರೆಗೂ ಚಲಿಸುತ್ತದೆ. ಎರಡನೇ ಮಾದರಿಯು 55 ಕಿಲೋ ವ್ಯಾಟ್ ಬ್ಯಾಟರಿಯನ್ನು ಹೊಂದಿದ್ದು, ಅದು 585 ಕಿಲೋಮೀಟರ್ ವ್ಯಾಪ್ತಿಯವರೆಗೆ ಚಲಿಸುತ್ತದೆ.

ಕೆಲವೇ ನಿಮಿಷಗಳಲ್ಲಿ ಚಾರ್ಜ್​: 15 ನಿಮಿಷ ಚಾರ್ಜ್‌ ಮಾಡಿದರೆ ಸಾಕು ಸುಮಾರು 150 ಕಿಲೋಮೀಟರ್‌ ದೂರದವರೆಗೂ ನೀವು ಯಾವುದೇ ತೊಂದರೆ ಇಲ್ಲದೇ ಆರಾಮದಾಯಕ ಪ್ರಯಾಣ ಮಾಡಬಹುದು. ಈ ವಾಹನದ ಆರಂಭಿಕ ಬೆಲೆ 17.49 ಲಕ್ಷ ರೂ.ಗಳಾಗಿದ್ದು, ಹೈ ಎಂಡ್​​ ಕಾರಿನ ಬೆಲೆ 21.99 ಲಕ್ಷ ರೂ.ವರೆಗೆ ಇದೆ. ಕಾರಿನ ಒಳಾಂಗಣವನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದ್ದು, ಹೊರಭಾಗವು ಮುಂಭಾಗದಿಂದ ಸ್ಟೈಲೀಶ್​ ಲೈಟ್ಸ್​​ನೊಂದಿಗೆ ಕಂಗೊಳಿಸುವಂತೆ ಮಾಡಲಾಗಿದೆ. 12 ಇಂಚಿನ ಹರ್ಮನ್ ಸಿನಿಮಾಟಿಕ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಪವರ್ ಟೈಲ್‌ಗೇಟ್ ಜೊತೆಗೆ ಗೆಸ್ಚರ್ ಅನಿಮೇಷನ್, ಇತರ ವೈಶಿಷ್ಟ್ಯಗಳು ಮತ್ತು ವಿಶೇಷತೆಗಳು ಈ ವಾಹನದಲ್ಲಿ ಲಭ್ಯವಿದೆ.

ಓದಿ: ಆಟೋಮೊಬೈಲ್​ ಜೊತೆಗಿನ ಸಭೆ ಯಶಸ್ವಿ- ವಾಹನ ಖರೀದಿದಾರರಿಗೆ ಕೇಂದ್ರದಿಂದ ಶುಭ ಸುದ್ದಿ - DISCOUNT ON VEHICLES

ETV Bharat Logo

Copyright © 2024 Ushodaya Enterprises Pvt. Ltd., All Rights Reserved.