ETV Bharat / technology

ತಿರುವಿನಲ್ಲಿ ಸಂಭವಿಸುವ ಅಪಘಾತಗಳ ತಡೆಗೆ ರಸ್ತೆ ಸುರಕ್ಷತಾ ​ಸೆನ್ಸಾರ್​ ಅಭಿವೃದ್ಧಿಪಡಿಸಿದ ಸಂಶೋಧಕರು - Road Safety Sensor

Road Safety Sensor: ತಿರುವಿನಲ್ಲಿ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ಸಂಶೋಧಕರು ರೋಡ್​ ಸೇಫ್ಟಿ ಸೆನ್ಸಾರ್​ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಅದು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬ ಮಾಹಿತಿ ಇಲ್ಲಿದೆ.

author img

By ETV Bharat Tech Team

Published : 2 hours ago

INDIAN RESEARCHERS  ACCIDENT PRONE TURNINGS  BENGALURU RESEARCHER CENTRE  NOVEL POLYMER NANOCOMPOSITE
ರೋಡ್​ ಸೇಫ್ಟಿ ಸೆನ್ಸಾರ್​ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು (IANS)

Road Safety Sensor: ದೇಶದಲ್ಲಿ ಎಷ್ಟೇ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಕೂಡ ದಿನನಿತ್ಯ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಇದರಿಂದ ನಿತ್ಯ ಜನರು ಸಾವಿಗೀಡಾಗುವುದಲ್ಲದೆ, ಎಷ್ಟೋ ದುರ್ಘಟನೆಗಳಲ್ಲಿ ಜನರು ಕೈ, ಕಾಲು ಕಳೆದುಕೊಂಡು ಜೀವನಪೂರ್ತಿ ನರಳುವಂತಾಗುತ್ತದೆ. ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿರುವುದನ್ನು ಗಮನದಲ್ಲಿಟ್ಟು ಬೆಂಗಳೂರಿನ ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರದ (ಸಿಇಎನ್‌ಎಸ್) ಸಂಶೋಧಕರು ರೋಡ್​ ಸೇಫ್ಟಿ ಸೆನ್ಸಾರ್​ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಅದನ್ನು ಹೈ ರಿಸ್ಕ್​ ತಿರುವುಗಳಲ್ಲಿ ಅಳವಡಿಸುವುದರಿಂದ ಸಂಭವಿಸಬಹುದಾದ ಅಪಘಾತಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ ಎನ್ನುತ್ತಾರೆ ಸಂಶೋಧಕರು.

ಈ ರೋಡ್​ ಸೇಫ್ಟಿ ಸೆನ್ಸಾರ್​ ಅನ್ನು ಅಭಿವೃದ್ಧಿಪಡಿಸುವುದಕ್ಕೆ ಹೊಸ ಪಾಲಿಮರ್ ನ್ಯಾನೊಕಾಂಪೊಸಿಟ್ ಅನ್ನು ಬಳಸಲಾಗಿದೆ. ಈ ಸಾಧನವನ್ನು ಮೂಲ ರಸ್ತೆ ಮತ್ತು ತಿರುವಿನ 100 ಮೀಟರ್​ಗಳಷ್ಟು ದೂರದಲ್ಲಿ ಅಳವಡಿಸಬಹುದಾಗಿದೆ. ಇದು ಎದುರಿನಿಂದ ಬರುವ ಎಲ್ಲ ವಾಹನಗಳ ಬಗ್ಗೆ ಎಚ್ಚರಿಸುತ್ತದೆ. ಎದುರುಗಡೆ ವಾಹನ ಬಂದಾಗ ಇದರ ಸ್ಕ್ರೀನ್​ ಮೂಲಕ ನಮಗೆ ಸಿಗ್ನಲ್​ ನೀಡುತ್ತದೆ. ತಂಡವು ಪೀಜೋಎಲೆಕ್ಟ್ರಿಕ್ ಪರಿಣಾಮ ತತ್ವದ ಮೇಲೆ ಮೂಲ ಮಾದರಿಯನ್ನು ಅಭಿವೃದ್ಧಿಪಡಿಸಿದೆ.

ಹೀಗಾಗಿ, ಇದು ಶೇಖರಿಸಬಹುದಾದ ಶಕ್ತಿಯನ್ನು ಉತ್ಪಾದಿಸುತ್ತದೆ. ಟ್ರಾನ್ಸಿಶನ್ ಮೆಟಲ್ ಡೈಚಾಲ್ಕೊಜೆನೈಡ್‌ನಿಂದ ಮಾಡಲಾದ ನೋವೆಲ್​ ಪಾಲಿಮರ್ ನ್ಯಾನೊಕಾಂಪೊಸಿಟ್‌ನಿಂದ ಉತ್ಪತ್ತಿಯಾಗುವ ಶಕ್ತಿಯನ್ನು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಗೆ ಪವರ್ ನೀಡಲು ಮತ್ತಷ್ಟು ಬಳಸಬಹುದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ವಿಜ್ಞಾನಿಗಳಾದ ಶ್ರೀ ಅಂಕುರ್ ವರ್ಮಾ, ಡಾ. ಅರ್ಜುನ್ ಹರಿ ಮಧು, ಡಾ. ಸುಬಾಷ್ ಚೆರುಮಣ್ಣಿಲ್ ಕರುಮುತ್ತಿಲ್ ಅವರು ಪಾಲಿಮರ್‌ಗಳ ಪೀಜೋಎಲೆಕ್ಟ್ರಿಕ್ ಗುಣಲಕ್ಷಣಗಳನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿರುವ ಅತಿ ಹೆಚ್ಚು ಮೇಲ್ಮೈ ಚಾರ್ಜ್‌ನೊಂದಿಗೆ ವೆನಾಡಿಯಮ್ ಡೈಸಲ್ಫೈಡ್ (VS2) ಅನ್ನು ಸಂಶ್ಲೇಷಿಸಿದ್ದಾರೆ. ನ್ಯಾನೊಪರ್ಟಿಕಲ್‌ಗಳ ಮೇಲ್ಮೈ ಚಾರ್ಜ್ ಪಾಲಿಮರ್ ನ್ಯಾನೊಕಾಂಪೊಸಿಟ್‌ನ ಪೀಜೋಎಲೆಕ್ಟ್ರಿಕ್ ಗುಣಲಕ್ಷಣಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅವರು ಕಂಡುಕೊಂಡಿದ್ದಾರೆ. ಜೊತೆಗೆ, ರಸ್ತೆ ಸುರಕ್ಷತೆ ಸೆನ್ಸಾರ್​ ಮತ್ತು ಸ್ಮಾರ್ಟ್ ಡೋರ್‌ನ ಪ್ರಯೋಗಾಲಯ-ಪ್ರಮಾಣದ ಪ್ರದರ್ಶನವನ್ನು ಸ್ಥಾಪಿಸಿದರು.

ಈ ಅಧ್ಯಯನವು PVDF-VS2 ನ್ಯಾನೊಕಾಂಪೊಸಿಟ್‌ಗಳು ಹೊಂದಿಕೊಳ್ಳುವ, ದೀರ್ಘಾವಧಿಯ ಶಕ್ತಿ ಉತ್ಪಾದಿಸುವ ಮತ್ತು ಸೆನ್ಸಾರ್​ ಅನ್ವಯಗಳಿಗೆ ಗಮನಾರ್ಹ ಮೌಲ್ಯವನ್ನು ಒದಗಿಸುತ್ತದೆ ಎಂದು ತೋರಿಸುತ್ತದೆ. ಈ ಸಂಶೋಧನೆಯನ್ನು ಇತ್ತೀಚೆಗೆ 'ಜರ್ನಲ್ ಆಫ್ ಮೆಟೀರಿಯಲ್ ಕೆಮಿಸ್ಟ್ರಿ ಎ' ಅಲ್ಲಿ ಪ್ರಕಟಿಸಲಾಗಿದೆ.

ಓದಿ: ಗೂಗಲ್​ ಪೇ ಮೂಲಕ ಚಿನ್ನದ ಸಾಲ ಇನ್ನಷ್ಟು ಸುಲಭ: ಮುತ್ತೂಟ್​ ಜೊತೆ ಕೈಜೋಡಿಸಿದ ಗೂಗಲ್​ - GPay Partnership with Muthoot

ETV Bharat Logo

Copyright © 2024 Ushodaya Enterprises Pvt. Ltd., All Rights Reserved.