ETV Bharat / technology

ALERT: ನಿಮ್ಮ ಫೋನ್​ ಕರೆಗಳನ್ನು ಬೇರೆ ಯಾರೋ ಕೇಳಿಸಿಕೊಳ್ಳುತ್ತಿದ್ದಾರೆಯೇ: ಈ ಟಿಪ್ಸ್​ ಮೂಲಕ ಪತ್ತೆ ಮಾಡಿ! ​ - How To Check Call Forwarding - HOW TO CHECK CALL FORWARDING

ನಿಮ್ಮ ಫೋನ್​ ಕರೆಗಳನ್ನು ಬೇರೊಬ್ಬರು ಕೇಳುತ್ತಿದ್ದಾರೆಯೇ ಅಥವಾ ನಿಮ್ಮ ಮೆಸೇಜ್​ಗಳನ್ನು ಓದುತ್ತಿದ್ದಾರೆಯೇ ಹಾಗಾದ್ರೆ ಈಗಲೇ ಈ ಕೆಳಗೆ ನೀಡಿರುವ ಟಿಪ್ಸ್​ ಅನುಸರಿಸಿ ಪತ್ತೆ ಹಚ್ಚಿ ಮತ್ತು ಹ್ಯಾಕರ್​ಗಳಿಂದ ಪಾರಾಗಿ.

ಕಾಲ್​ ಮೆಸೆಜ್​ ಫಾರ್ವ್​ರ್ಡ್​
ಕಾಲ್​ ಮೆಸೆಜ್​ ಫಾರ್ವ್​ರ್ಡ್​ (ETV Bharat)
author img

By ETV Bharat Karnataka Team

Published : May 20, 2024, 12:15 PM IST

How To Check Call Forwarding is ON or Not: ಇತ್ತೀಚೆನ ದಿನಗಳಲ್ಲಿ ಸ್ಮಾರ್ಟ್​ ಫೋನ್​ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಚಾಟಿಂಗ್​, ಕರೆ, ಗೇಮ್ಸ್​ ಸೇರಿದಂತೆ ಪ್ರತಿಯೊಂದು ಸೌಲಭ್ಯವನ್ನು ಮೊಬೈಲ್​ನಲ್ಲೇ ಪಡೆಯಬಹುದಾಗಿದೆ. ಹಾಗಾಗಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಮೊಬೈಲ್​ ಬಳಕೆ ಹೆಚ್ಚಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್​ ಹ್ಯಾಕ್​ ನಂತಹ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಅದರಲ್ಲೂ ನಮಗೆ ತಿಳಿಯದ ಹಾಗೇ ನಮ್ಮ ಕರೆಗಳನ್ನು ಬೇರೊಬ್ಬರು ಕೇಳಿಸಿಕೊಳ್ಳುವುದು ಮತ್ತು ಮೆಸೇಜ್​ಗಳನ್ನು ಓದುವುದು ಹೆಚ್ಚಾಗುತ್ತಿದೆ. ನಿಮಗೂ ಇಂತಹ ಅನುಭವ ಆಗಿದ್ದರೆ ಕೂಡಲೇ ಎಚ್ಚೆತ್ತುಕೊಂಡು ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಹಾಗಾದ್ರೆ ಮೊಬೈಲ್​ ಮೂಲಕವೇ ನಮ್ಮ ಕರೆ ಫಾರ್ವರ್ಡ್ ಅನ್ನು ಹೇಗೆ ಪತ್ತೆಹಚ್ಚಬಹುದೆಂದು ಇಲ್ಲಿ ತಿಳಿಯಿರಿ.

ಕಾಲ್​ - ಮೆಸೇಜ್​ ಫಾರ್ವರ್ಡಿಂಗ್​: ಯಾರೋ ಅಪರಿಚಿತ ವ್ಯಕ್ತಿಗಳು ನಮ್ಮ ಬಳಿಗೆ ಬಂದು ತುರ್ತಾಗಿ ಮನೆಯವರಿಗೆ ಅಥವಾ ಸಂಬಂಧಿಕರಿಗೆ ಕರೆ ಮಾಡಲು ಕೇಳಿದರೇ ನಾವು ಒಂದು ಕ್ಷಣ ಯೋಚಿಸದೇ ತಕ್ಷಣವೇ ಅವರ ಕೈಗೆ ಮೊಬೈಲ್​ ನೀಡುತ್ತೇವೆ. ಒಂದು ವೇಳೆ ನಮ್ಮ ಫೋನ್​ ಪಡೆದ ವ್ಯಕ್ತಿ ವಂಚಕನಾಗಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅವರು ನಮಗೆ ತಿಳಿಯದಂತೆ ಕ್ಷಣಾರ್ಧದಲ್ಲಿ ನಮ್ಮ ಫೋನ್‌ನಲ್ಲಿ ಕರೆ ಮತ್ತು ಮೆಸೇಜ್​​ ಫಾರ್ವರ್ಡ್ ಆಯ್ಕೆ ಆನ್ ಮಾಡಿ ಬಿಡುತ್ತಾರೆ. ಇದರಿಂದ ಸುಲಭವಾಗಿ ನಮ್ಮ ಫೋನ್ ಕರೆಗಳು ಮತ್ತು ಸಂದೇಶಗಳು ಅವರ ಫೋನ್‌ಗೆ ಫಾರ್ವರ್ಡ್​ ಆಗುತ್ತವೆ.

ಮೊದಲಿಗೆ ನಮ್ಮ ಮೊಬೈಲ್​ ಪಡೆದ ಅವರು ಗೊತ್ತಿಲ್ಲದಂತೆ ನಮ್ಮ ಫೋನ್ ಕೀ ಪ್ಯಾಡ್‌ನಲ್ಲಿ *401* ಎಂದು ಟೈಪ್ ಮಾಡಿ ಬಳಿಕ ಅವರ ಫೋನ್ ಸಂಖ್ಯೆಯನ್ನು ನಮೂದಿಸಿ ಡಯಲ್ ಮಾಡಿದರೆ ನಮ್ಮ ಎಲ್ಲಾ ಕರೆಗಳು ಮತ್ತು ಸಂದೇಶಗಳು ನಮಗೆ ತಿಳಿಯದಂತೆ ಆ ಸಂಖ್ಯೆಗೆ ಫಾರ್ವರ್ಡ್ ಆಗುತ್ತವೆ. ಇದರಿಂದಾಗಿ ನಮ್ಮ ಸಾಮಾನ್ಯ ಸಂದೇಶಗಳು ಮಾತ್ರವಲ್ಲದೆ, ನಮ್ಮ UPI ಮತ್ತು ಬ್ಯಾಂಕ್ ಖಾತೆಗೆ ಸಂಬಂಧಿಸಿದ ಎಲ್ಲಾ OTP ಗಳು ಆ ಸಂಖ್ಯೆಗೆ ಫಾರ್ವರ್ಡ್ ಆಗುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ನಮ್ಮ ಕರೆ ಮತ್ತು ಸಂದೇಶಗಳು ಫಾರ್ವರ್ಡ್ ಆಗಿವೆಯೇ ಎಂದು ಪರಿಶೀಲಿಸುವುದು ಹೇಗೆ?

  • ನಿಮ್ಮ ಫೋನ್ ಕರೆಗಳು ಮತ್ತು ಸಂದೇಶಗಳನ್ನು ಮತ್ತೊಂದು ಸಂಖ್ಯೆಗೆ ಫಾರ್ವರ್ಡ್ ಮಾಡಲಾಗುತ್ತಿದ್ದರೆ ಅದನ್ನು ಮೊಬೈಲ್​ನಲ್ಲಿಯೇ ಪತ್ತೆ ಹಚ್ಚಿ ನಿಲ್ಲಸಬಹುದಾಗಿದೆ.
  • ಇದಕ್ಕಾಗಿ ಮೊದಲು ನಿಮ್ಮ ಫೋನ್ ಕೀಪ್ಯಾಡ್‌ನಲ್ಲಿ *#21# ಎಂದು ಟೈಪ್ ಮಾಡಿ ಮತ್ತು ಡಯಲ್ ಮಾಡಿ.
  • ನೀವು ಇದನ್ನು ಮಾಡಿದರೆ, ನಿಮ್ಮ ಫೋನ್‌ನಲ್ಲಿ ಕರೆಗಳು ಮತ್ತು ಸಂದೇಶಗಳನ್ನು ಫಾರ್ವರ್ಡ್ ಮಾಡಲಾಗುತ್ತಿದೆಯೇ? ಅಥವಾ ಇಲ್ಲವೇ ಎಂದು ಡಿಸ್​ಪ್ಲೇ ಮೇಲೆ ಪ್ರದರ್ಶಿಸಲಾಗುತ್ತದೆ.

ಕಾಲ್​ ಫಾರ್ವರ್ಡ್​ ಆಯ್ಕೆಯನ್ನು ನಿಷ್ಕ್ರಿಯಗೊಳಿವುದು ಹೇಗೆ?

  • ನಿಮ್ಮ ಫೋನ್ ಕರೆಗಳು ಮತ್ತು ಸಂದೇಶಗಳನ್ನು ಫಾರ್ವರ್ಡ್ ಮಾಡಲಾಗುತ್ತಿದ್ದರೆ.. ಆಯ್ಕೆಯನ್ನು ಸಕ್ರಿಯಗೊಳಿಸಲಾಗಿದೆ ಎಂದು ತೋರಿಸುತ್ತದೆ.
  • ನಂತರ ತಕ್ಷಣವೇ ಆ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ.
  • ಇದಕ್ಕಾಗಿ.. ನಿಮ್ಮ ಕೀಪ್ಯಾಡ್‌ನಲ್ಲಿ ##002# ಎಂದು ಟೈಪ್ ಮಾಡಿ ಮತ್ತು ಡಯಲ್ ಮಾಡಿ. ತಕ್ಷಣವೇ ಫಾರ್ವರ್ಡ್ ಆಯ್ಕೆ ನಿಷ್ಕ್ರಿಯಗೊಳ್ಳುತ್ತದೆ. ಇದರಿಂದ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದಾಗಿದೆ.

ಇದನ್ನೂ ಓದಿ: ದೇಶದಲ್ಲಿ ಹೆಚ್ಚುತ್ತಿದೆ ಹ್ಯಾಕಿಂಗ್​; ನಾಲ್ವರಲ್ಲಿ ಒಬ್ಬರ ಮೇಲೆ ಸೈಬರ್​ ದಾಳಿ! - Indians faced hacking attacks

ETV Bharat Logo

Copyright © 2025 Ushodaya Enterprises Pvt. Ltd., All Rights Reserved.