ETV Bharat / technology

AI ತಂತ್ರಜ್ಞಾನದೊಂದಿಗೆ ಗೂಗಲ್ ಪಿಕ್ಸೆಲ್ 8A ಫೋನ್ ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು, ವೈಶಿಷ್ಠ್ಯಗಳೇನೇನು? - google pixel 8a phone

ಗೂಗಲ್ ಪಿಕ್ಸೆಲ್ 8A ಫೋನ್ ಭಾರತದ ಮಾರುಕಟ್ಟೆಗೆ ಬಂದಿದೆ. ಇದರ ಬೆಲೆ ಹಾಗೂ ಇತರ ಮಾಹಿತಿಯನ್ನು ನಾವು ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.

author img

By ETV Bharat Karnataka Team

Published : May 9, 2024, 4:23 PM IST

google-pixel-8a
ಗೂಗಲ್ ಪಿಕ್ಸೆಲ್ 8A (ANI)

ಹೈದರಾಬಾದ್ ​: ಗೂಗಲ್ ಪಿಕ್ಸೆಲ್ ಫೋನ್ ಪ್ರಿಯರಿಗೆ ಒಳ್ಳೆಯ ಸುದ್ದಿಯೊಂದನ್ನು ನೀಡಿದೆ. AI ತಂತ್ರಜ್ಞಾನದೊಂದಿಗೆ ಗೂಗಲ್ ಪಿಕ್ಸೆಲ್ 8A ಫೋನ್ ಭಾರತದಲ್ಲಿ ಬಿಡುಗಡೆ ಆಗಿದೆ. ಅದರ ವೈಶಿಷ್ಟ್ಯಗಳು, ವಿಶೇಷಣಗಳು, ಬೆಲೆ ಇತ್ಯಾದಿಗಳ ಸಂಪೂರ್ಣ ವಿವರಗಳು ನಿಮಗಾಗಿ ಇಲ್ಲಿ ನೀಡುತ್ತಿದ್ದೇವೆ.

ಸ್ಮಾರ್ಟ್​ ಫೋನ್ ಪ್ರಿಯರು ಕುತೂಹಲದಿಂದ ಕಾಯುತ್ತಿದ್ದ Google Pixel 8a ಸ್ಮಾರ್ಟ್‌ಫೋನ್ ಭಾರತಕ್ಕೆ ಬಂದಿದೆ. ಈ ಹೊಸ ಫೋನ್ ಗೂಗಲ್ ಟೆನ್ಸರ್ ಜಿ3 ಪ್ರೊಸೆಸರ್ ಮೂಲಕ ಆಪರೇಟ್​ ಆಗಲಿದೆ. Pixel 8 ಮತ್ತು Pixel 8 Pro ನಂತೆಯೇ, Google Pixel 8A ಫೋನ್ ಜೆಮಿನಿ, ಬೆಸ್ಟ್ ಟೇಕ್, ಆಡಿಯೊ ಮ್ಯಾಜಿಕ್ ಎರೇಸರ್‌ನಂತಹ ಇತ್ತೀಚಿನ AI ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಗೂಗಲ್ ಪಿಕ್ಸೆಲ್ 8A ವೈಶಿಷ್ಟ್ಯಗಳು

ಡಿಸ್ಪ್ಲೇ : 6.61 ಇಂಚುಗಳು

ಪ್ರೊಸೆಸರ್: ಟೆನ್ಸರ್ ಜಿ3

ರೆಸಲ್ಯೂಶನ್ : 1080 x 2400 ಪಿಕ್ಸೆಲ್‌ಗಳು

ಒಎಸ್ : ಆಂಡ್ರಾಯ್ಡ್ 14

RAM : 8 ಜಿಬಿ

ಸ್ಟೋರೇಜ್​ : 128 GB, 256 GB

ಮುಖ್ಯ ಕ್ಯಾಮೆರಾ : 64 MP + 13 MP ಅಲ್ಟ್ರಾವೈಡ್ ಲೆನ್ಸ್

ಸೆಲ್ಫಿ ಕ್ಯಾಮೆರಾ : 13 MP

ಬ್ಯಾಟರಿ : 5000 mAh

ಚಾರ್ಜಿಂಗ್ ಸಪೋರ್ಟ್​ : 18W

ಸಂಪರ್ಕ : ವೈಫೈ 6, ಬ್ಲೂಟೂತ್ 5.3, NFC

ಗೂಗಲ್ ಪಿಕ್ಸೆಲ್ 8A ಸ್ಮಾರ್ಟ್‌ಫೋನ್ ವಿಡಿಯೋಗಳನ್ನು ರೆಕಾರ್ಡ್ ಮಾಡುವಾಗ ಅನಗತ್ಯ ಧ್ವನಿಗಳನ್ನು ತೆಗೆದುಹಾಕಲು ಆಡಿಯೊ ಮ್ಯಾಜಿಕ್ ಎರೇಸರ್ ಅನ್ನು ಸಹ ಹೊಂದಿದೆ. ಇದು 6.1 ಇಂಚಿನ ಡಿಸ್ಪ್ಲೇಯನ್ನು 120Hz ರಿಫ್ರೆಶ್ ರೇಟ್ ಮತ್ತು 2,000nits ಗರಿಷ್ಠ ಹೊಳಪನ್ನು ಹೊಂದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಕೂಡಾ ಹೊಂದಿರುವುದು ವಿಶೇಷ. ಅಲ್ಲದೇ OS, ಸೆಕ್ಯುರಿಟಿ ಮತ್ತು ಫೀಚರ್ ಡ್ರಾಪ್ ಅಪ್‌ಡೇಟ್‌ಗಳನ್ನು ಏಳು ವರ್ಷಗಳವರೆಗೆ ನೀಡುತ್ತದೆ.

ಗೂಗಲ್ ಪಿಕ್ಸೆಲ್ 8a ಬಣ್ಣದ ರೂಪಾಂತರಗಳು: ಈ ಗೂಗಲ್ ಪಿಕ್ಸೆಲ್ 8a ಮಾರುಕಟ್ಟೆಯಲ್ಲಿ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ಎಂದಿನಂತೆ, ಅಬ್ಸಿಡಿಯನ್ ಮತ್ತು ಪಿಂಗಾಣಿ ಜೊತೆಗೆ, ಈ ಬಾರಿ ಅಲೋ ಮತ್ತು ಬೇಯಂತಹ ಹೊಸ ಬಣ್ಣಗಳಲ್ಲಿ ಲಭ್ಯವಾಗುವಂತೆ ಮಾರುಕಟ್ಟೆಗೆ ತರಲಾಗಿದೆ.

ಗೂಗಲ್ ಪಿಕ್ಸೆಲ್ 8a ಬೆಲೆ : ಗೂಗಲ್ ಪಿಕ್ಸೆಲ್ 8ಎ ಫೋನ್‌ಗಳು ಮೇ 14 ರಿಂದ ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ನೀವು ಫ್ಲಿಪ್‌ಕಾರ್ಟ್‌ನಲ್ಲಿ ಮುಂಗಡ ಆರ್ಡರ್ ಮಾಡಬಹುದು.

  • Google Pixel 8A 128GB ಸ್ಟೋರೇಜ್ ರೂಪಾಂತರದ ಬೆಲೆ ರೂ. 52,999 ಯಲ್ಲಿ ಲಭ್ಯವಿದೆ.
  • 256GB ಸ್ಟೋರೇಜ್ ಹೊಂದಿರುವ Google Pixel 8A ಫೋನ್‌ನ ಬೆಲೆ ಮಾರುಕಟ್ಟೆಯಲ್ಲಿ ರೂ. 59,999 ಲಭ್ಯವಿದೆ.
  • ಮುಂಗಡ ಆರ್ಡರ್ ಮಾಡುವವರು 999 ರೂ.ಗೆ ಪಿಕ್ಸೆಲ್ ಎ-ಸರಣಿ ಬಡ್‌ಗಳನ್ನು ಪಡೆದುಕೊಳ್ಳಬಹುದು.
  • ಬ್ಯಾಂಕ್ ಕಾರ್ಡ್‌ಗಳಲ್ಲಿ ರೂ. 4000 ವರೆಗೆ ಕ್ಯಾಶ್‌ಬ್ಯಾಕ್ ಕೂಡಾ ಲಭ್ಯವಿದೆ.
  • ನೀವು ಕೆಲವು ಸ್ಮಾರ್ಟ್‌ಫೋನ್ ಮಾದರಿಗಳಲ್ಲಿ 9,000 ರೂ. ವರೆಗಿನ ವಿನಿಮಯ ಬೋನಸ್ ಅನ್ನು ಸಹ ಪಡೆಯಬಹುದು.

ಇದನ್ನೂ ಓದಿ : ಅದ್ಭುತ ಫೀಚರ್​​ನೊಂದಿಗೆ ಅಗ್ಗದ ಸ್ಮಾರ್ಟ್​ಫೋನ್​ ಹುಡುಕುತ್ತಿದ್ದೀರಾ?: ಹಾಗಾದರೆ ಇಲ್ಲಿದೆ ಡೀಟೇಲ್ಸ್​ - BELOW 10K RANGE SMARTPHONE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.