ಹೈದರಾಬಾದ್: ಬಳಕೆದಾರರ ಸ್ನೇಹಿಯಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಹಲವಾರು ಹೊಸ ನಾವೀನ್ಯತೆಯ ವೈಶಿಷ್ಟ್ಯವನ್ನು ಗೂಗಲ್ ಬಿಡುಗಡೆ ಮಾಡಿದೆ. 'ಗೂಗಲ್ ಕ್ಲೌಡ್ ನೆಕ್ಸ್ಟ್ 2024' ಕಾನ್ಫರೆನ್ಸ್‌ನಲ್ಲಿ ವರ್ಕ್‌ಸ್ಪೇಸ್ ಸೂಟ್‌ನ ಬಳಕೆದಾರರಲ್ಲಿ ಉತ್ಪಾದಕತೆ ಮತ್ತು ಟೀಮ್‌ವರ್ಕ್ ಹೆಚ್ಚಿಸುವ ಉದ್ದೇಶದಿಂದ ಈ ಎಲ್ಲ ಫೀಚರ್ಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಬಳಕೆದಾರರ ಉತ್ಪಾದಕತೆ ಮತ್ತು ಸಹಯೋಗದಲ್ಲಿ ಕ್ರಾಂತಿ ಮೂಡಿಸಲು ಸಜ್ಜಾಗಿದೆ. ಈ ಮೂಲಕ ಗೂಗಲ್ ತನ್ನ ಉತ್ಪಾದನೆಯಲ್ಲಿ ಎಐ ಅನ್ನು ಅಳವಡಿಸುವ ಮೂಲಕ ಬಳಕೆದಾರರ ಕೆಲಸ ಸುಲಭ ಮಾಡಿ ಬಳಕೆದಾರರಿಗೆ ತನ್ನ ಬದ್ಧತೆಯ ಪ್ರದರ್ಶನ ನಡೆಸಿದೆ
ಹೆಲ್ಪ್ ಮಿ ರೈಟ್: ಹೊಸ ಫೀಚರ್ ಘೋಷಣೆ ಮಾಡಿರುವ ಗೂಗಲ್, ಮೊಬೈಲ್ ಗೂಗಲ್ ಬಳಕೆದಾರರಿಗೆ ಹೊಸ ಧ್ವನಿ ಉತ್ತೇಜನ ಮತ್ತು ಇನ್ಪುಟ್ ಜೊತೆಗೆ ಬರೆಯಲು ಸಹಾಯ ಮಾಡುವ ಕಾರ್ಯಾಚರಣೆ (ಹೆಲ್ಪ್ ಮಿ ಟೈಟ್) ಪರಿಚಯಿಸಿದೆ. ಇದು ಇಮೇಲ್ ಬರವಣಿಗೆಯನ್ನು ಸುಲಭಗೊಳಿಸಲಿದೆ. ಇದರಲ್ಲಿನ ಹೊಸ ಇನ್ಸಾಟ್ ಪಾಲಿಶ್ ಫೀಚರ್, ಒಂದೇ ಕ್ಲಿಕ್ನಲ್ಲಿ ಇಮೇಲ್ನ ನವೀಕರಣ ಮಾಡಲಿದೆ.
ಗೂಗಲ್ ಡಾಕ್ಸ್: ಎಲ್ಲ ಮಾಹಿತಿಗಳನ್ನು ಒಂದೇ ಡಾಕ್ಯುಮೆಂಟ್ಗೆ ಇಡಲು ಸಹಾಯ ಮಾಡಲು ಈ ಹೊಸ ಟ್ಯಾಬ್ ಫೀಚರ್ ಅನ್ನು ಗೂಗಲ್ ಡಾಕ್ಸ್ ಅಳವಡಿಸಿದೆ. ನಿಮಗೆ ಬೇಕಾದ ವಿಷಯಕ್ಕಾಗಿ ಅನೇಕ ಡಾಕ್ಯುಮೆಂಟ್ನ್ನು ಹುಡುಕುವ ಅಥವಾ ಡ್ರೈವ್ ಅನ್ನು ತಡಕಾಡುವ ಅವಶ್ಯಕತೆ ಇಲ್ಲ. ಗೂಗಲ್ ಡಾಕ್ಸ್ನಲ್ಲಿ ಇಮೇಜ್ ಕವರ್ ಮೂಲಕ ಡಾಕ್ಯುಮೆಂಟ್ ಲಭ್ಯವಾಗುವುದರಿಂದ ಕೆಲಸ ಸುಲಭವಾಗಲಿದೆ. ಜೊತೆಗೆ ಇದು ಡಾಕ್ಯುಮೆಂಟ್ ಪ್ರಸ್ತುತಿಯನ್ನು ಸುಧಾರಿಸಲಿದೆ.
ಗೂಗಲ್ ಮೀಟ್: ಗೂಗಲ್ ಮೀಟ್ನಲ್ಲಿ ಇದೀಗ ನೀವು ಟೇಕ್ ನೋಟ್ಸ್ ಫಾರ್ ಮಿ ಫೀಚರ್ ಕಾಣಬಹುದಾಗಿದೆ. ಜೊತೆಗೆ ಗೂಗಲ್ ಚಾಟ್ ಮತ್ತು ಗೂಗಲ್ ಮೀಟ್ನಲ್ಲಿ ಸುಧಾರಿತ ಎಐ ಸಾಮರ್ಥ್ಯ ಪಡೆಯಲು ಪ್ರತಿ ಬಳಕೆದಾರರಿಗೆ ತಿಂಗಳಿಗೆ 10 ಡಾಲರ್ ನಂತೆ ಎಂಟರ್‌ಪ್ರೈಸ್ ಸೇರ್ಪಡೆ ಎಂಬ ಹೊಸ ವ್ಯಾಪಾರ ಸೇರ್ಪಡೆ ಅನ್ನು ಗೂಗಲ್ ಪರಿಚಯಿಸುತ್ತಿದೆ.
ಗೂಗಲ್ ಚಾಟ್: ಗೂಗಲ್ ಚಾಟ್ ಇದೀಗ ಜೆಮಿನಿಯ ಎಐ ಬಳಕೆ ಮಾಡುವ ಮೂಲಕ ಮಾತುಕತೆ ಮತ್ತು ಪ್ರಶ್ನೋತ್ತರಗಳ ಸಾರಾಂಶವನ್ನು ಪಡೆಯಬಹುದಾಗಿದೆ. ಇದು ಆಟೋಮೆಟಿಕ್ ಆಗಿ ಸಂದೇಶದ ಭಾಷಾಂತರವನ್ನು ನೀಡುತ್ತದೆ. ಗೂಗಲ್ ಮೀಟ್ ಇದೀಗ ಗ್ರೂಪ್ ಸ್ಪೇಸ್ ಅನ್ನು 5 ಲಕ್ಷ ಬಳಕೆದಾರರಿಗೆ ವಿಸ್ತರಿಸಿದೆ. ಇದು ಕೂಡ 69 ಭಾಷೆಗಳಲ್ಲಿ ಆಟೋಮೆಟಿಕ್ ಕ್ಯಾಪ್ಷನ್ ಟ್ರಾನ್ಸ್ಲೇಟ್ ಅನ್ನು ನೀಡುತ್ತದೆ.
ಎಐ ಮೀಟಿಂಗ್ : ಎಐ ಮೀಟಿಂಗ್ ಆ್ಯಡ್ ಆನ್ ಕೂಡ ವೈಯಕ್ತಿಕ ಮತ್ತು ಗುಂಪಿನ ಸದಸ್ಯರ ಸ್ಟ್ರೀಮ್ಲೈನ್ ಕೆಲಸ ಸಂಬಂಧಿಸಿದ ಸಮಗ್ರ ಪರಿಹಾರವನ್ನು ನೀಡುತ್ತದೆ. ನಿಮ್ಮ ಕೆಲಸವನ್ನು ಎಐ ಸಹಾಯದಿಂದ ರಕ್ಷಣೆ ಮಾಡಬಹುದಾಗಿದೆ. ಗೂಗಲ್ ಡ್ರೈವ್‌ನಲ್ಲಿ ಸೂಕ್ಷ್ಮ ಫೈಲ್‌ಗಳನ್ನು ವರ್ಗೀಕರಿಸುವ ಮೂಲಕ ಡೇಟಾವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಈ ಸೇರ್ಪಡೆಯು ಡೇಟಾ ನಷ್ಟ ತಡೆಗಟ್ಟುವಿಕೆ ನಿಯಂತ್ರಣ, ಜೀಮೇಲ್ನಲ್ಲಿ ವರ್ಗೀಕರಣ ಲೇಬಲ್‌ಗಳು ಮತ್ತು ಪ್ರಾಯೋಗಿಕ ಪೋಸ್ಟ್ ಕ್ವಾಂಟಮ್ ಕ್ರಿಪ್ಟೋಗ್ರಫಿಯನ್ನು ಒದಗಿಸುತ್ತದೆ.
ಗೂಗಲ್ ಶೀಟ್ಸ್: ಗೂಗಲ್ ಶೀಟ್ಸ್ನಲ್ಲಿ ಬಳಕೆದಾರರು ಇದೀಗ ಹೊಸ ಟೇಬಲ್ ಫೀಚರ್ ಕಾಣಬಹುದಾಗಿದ್ದು, ಇದು ಸುಲಭವಾಗಿ ದತ್ತಾಂಶಗಳನ್ನು ಫಾರ್ಮಾಟ್ ಮತ್ತು ಸಂಘಟಿಸಲು ಸಹಾಯ ಮಾಡುತ್ತದೆ. ಜೊತೆಗೆ ವಿವಿಧ ಉದ್ದೇಶದ ಬಳಕೆಗಾಗಿ ಅನೇಕ ವಿಧದ ಟೆಪ್ಲೆಟ್ ಅನ್ನು ಕೂಡ ಆಯ್ಕೆ ಮಾಡಬಹುದಾಗಿದೆ.
ಇದನ್ನೂ ಓದಿ: ಸ್ವಿಚ್ಡ್ ಆಫ್ ಆಗಿದ್ದರೂ ನಿಮ್ಮ ಫೋನ್ ಪತ್ತೆ ಮಾಡಬಹುದು: ಗೂಗಲ್ ಹೊಸ ಅಪ್ಡೇಟ್