ETV Bharat / technology

ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು: ನನಗೆ ನಡೆಯುವ ಅನುಭವವೇ ನೆನಪಿಲ್ಲ ಎಂದ ಸುನೀತಾ ವಿಲಿಯಮ್ಸ್​ - SUNITA WILLIAMS

Sunita Williams: ಸುನೀತಾ ವಿಲಿಯಮ್ಸ್ ಕಳೆದ ಹಲವಾರು ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣದಲ್ಲೇ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಅವರು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದು, ಸದ್ಯ ಅವರು ನಡೆಯುವುದನ್ನೇ ಮರೆತಿದ್ದಾರೆ.

SUNITA WILLIAMS IN SPACE  REMEMBER HOW TO WALK  SUNITA WILLIAMS NEWS
ನನಗೆ ನಡೆಯುವ ಅನುಭವವೇ ನೆನಪಿಲ್ಲ ಎಂದ ಸುನೀತಾ ವಿಲಿಯಮ್ಸ್ (Photo Credit: Associated Press)
author img

By ETV Bharat Tech Team

Published : Jan 29, 2025, 6:21 PM IST

Sunita Williams: ಮೂರನೇ ಬಾರಿಗೆ ಬಾಹ್ಯಾಕಾಶಕ್ಕೆ ಹೋದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬುಚ್​ ತಾಂತ್ರಿಕ ಕಾರಣಗಳಿಂದಾಗಿ ತಿಂಗಳುಗಟ್ಟಲೆ ಅಲ್ಲಿಯೇ ಸಿಲುಕಿಕೊಂಡಿರುವ ವಿಷಯ ಎಲ್ಲರಿಗೂ ತಿಳಿದಿದೆ.

ಅವರಿಬ್ಬರು ಯಾವಾಗ ಭೂಮಿಗೆ ವಾಪಸ್​ ಆಗುತ್ತಾರೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆದರೆ ಸುನೀತಾ ಅವರು ಬಾಹ್ಯಾಕಾಶದಿಂದ ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಶೂನ್ಯ ಗುರುತ್ವಾಕರ್ಷಣೆಯಲ್ಲಿ ತಿಂಗಳುಗಟ್ಟಲೆ ಕಳೆದ ನಂತರ ಕುಳಿತುಕೊಳ್ಳಲು ಅಥವಾ ಮಲಗಲು ಸಹ ಕಷ್ಟವಾಗುತ್ತಿದೆ ಎಂದು ಸುನೀತಾ ಅವರು ಹೇಳಿದ್ದಾರೆ.

"ನಾನು ಬಹಳ ದಿನಗಳಿಂದ ಇಲ್ಲಿ ವಾಸಿಸುತ್ತಿದ್ದೇನೆ. ಶೂನ್ಯ ಗುರುತ್ವಾಕರ್ಷಣೆಯಲ್ಲಿ ಕೆಲವು ತಿಂಗಳು ತೇಲುತ್ತಿದ್ದ ನಂತರ ನೆಲದ ಮೇಲೆ ನಡೆಯುವ ಅನುಭವ ನನಗೆ ನೆನಪಿಲ್ಲ. ನಡೆಯುವುದು ಹೇಗಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನಾನು ಬಹಳ ದಿನಗಳಿಂದ ನಡೆದಿಲ್ಲ. ಕುಳಿತುಕೊಳ್ಳಲು ಆಗುತ್ತಿಲ್ಲ. ಮಲಗಿ ವಿಶ್ರಾಂತಿ ಪಡೆಯುವುದು ಅಸಾಧ್ಯವಾಗಿದೆ. ನಮ್ಮ ಪ್ರಕಾರ, ನಾವು ಒಂದು ತಿಂಗಳೊಳಗೆ ಬಾಹ್ಯಾಕಾಶದಿಂದ ಹಿಂತಿರುಗಬೇಕಾಗಿತ್ತು. ಆದರೆ, ಇಷ್ಟು ದಿನ ಇಲ್ಲಿರುವುದು ಸ್ವಲ್ಪ ಆಘಾತಕಾರಿಯಾಗಿದೆ ಎಂದು ಸುನೀತಾ ಬಹಿರಂಗಪಡಿಸಿದರು.

ಎಂಟು ದಿನಗಳ ಕಾರ್ಯಾಚರಣೆ ಭಾಗವಾಗಿ ಜೂನ್ 6 ರಂದು ಬೋಯಿಂಗ್ ಸ್ಟಾರ್‌ಲೈನರ್ ಕ್ಯಾಪ್ಸುಲ್‌ನಲ್ಲಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಪ್ರಯಾಣಿಸಿದರು. ಮೂಲತಃ, ಇಬ್ಬರೂ ಜೂನ್ 14 ರಂದು ಭೂಮಿಗೆ ಮರಳಬೇಕಿತ್ತು. ಆದರೆ, ಬಾಹ್ಯಾಕಾಶ ನೌಕೆಯಲ್ಲಿ ಹೀಲಿಯಂ ಸೋರಿಕೆಯಿಂದಾಗಿ ತಾಂತ್ರಿಕ ಸಮಸ್ಯೆಗಳು ಉದ್ಭವಿಸಿದವು. ಆದ್ದರಿಂದ ಅವರು ಏಳು ತಿಂಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲೇ ಸಿಕ್ಕಿಹಾಕಿಕೊಂಡರು.

ಇತ್ತೀಚೆಗೆ ಎಲೋನ್ ಮಸ್ಕ್ ಅವರು ಬೈಡನ್​ ಸರ್ಕಾರವನ್ನು ಟೀಕಿಸಿದರು, ಗಗನಯಾತ್ರಿಗಳು ತಮ್ಮ ವಿಳಂಬದಿಂದಾಗಿ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು. ಅಮೆರಿಕ ಅಧ್ಯಕ್ಷ ಟ್ರಂಪ್ ಸ್ಪೇಸ್‌ಎಕ್ಸ್‌ಗೆ ಅದನ್ನು ಸುರಕ್ಷಿತವಾಗಿ ಮರಳಿ ತರುವಂತೆ ಕೇಳಿಕೊಂಡಿದ್ದಾರೆ ಮತ್ತು ಕಾರ್ಯವು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಮಸ್ಕ್ ಹೇಳಿದರು. ಅವರನ್ನು ಮರಳಿ ಕರೆತರುವ ಕ್ರಮಗಳು ಚುರುಕುಗೊಳ್ಳುತ್ತಿರುವಂತೆ ತೋರುತ್ತಿದೆ.

ಬೈಡನ್​ ವಿರುದ್ಧ ಹರಿಹಾಯ್ದ ಟ್ರಂಪ್ ​: ಇದಕ್ಕೂ ಮೊದಲು ಟ್ರಂಪ್ ತಮ್ಮ ಸಾಮಾಜಿಕ ವೇದಿಕೆಯಲ್ಲಿ ಪೋಸ್ಟ್ ಮಾಡಿ, ಬೈಡನ್ ಆಡಳಿತದಿಂದ ಬಾಹ್ಯಾಕಾಶದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಿಟ್ಟ ಇಬ್ಬರು ಧೈರ್ಯಶಾಲಿ ಗಗನಯಾತ್ರಿಗಳನ್ನು ಕರೆತರಲು ನಾನು ಮಸ್ಕ್ ಅವರನ್ನು ಕೇಳಿದ್ದೇನೆ. ಅವರಿಬ್ಬರೂ ಹಲವು ತಿಂಗಳುಗಳಿಂದ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಎಲಾನ್ ಮಸ್ಕ್​ ಶೀಘ್ರದಲ್ಲೇ ತನ್ನ ಕಾರ್ಯಾಚರಣೆಯನ್ನು ಆರಂಭಿಸಲಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದಾರೆಂದು ನಾನು ಭಾವಿಸುತ್ತೇವೆ ಎಂದು ಟ್ರಂಪ್​ ಹೇಳಿದ್ದಾರೆ.

ಓದಿ: ಬಾಹ್ಯಾಕಾಶದಲ್ಲಿ ಸುನೀತಾ, ಬುಚ್​: ಅವರಿಬ್ಬರನ್ನು ಆದಷ್ಟು ಬೇಗ ಕರೆತರುವಂತೆ ಮಸ್ಕ್​ ಸಹಾಯ ಕೋರಿದ ಟ್ರಂಪ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.