ಹೈದರಾಬಾದ್ : ಪುಷ್ಪ-2 : ದಿ ರೂಲ್ ಸಿನಿಮಾ ಪ್ರದರ್ಶನದ ವೇಳೆ ಇಲ್ಲಿನ ಆರ್‌ಟಿಸಿ ಕ್ರಾಸ್‌ರೋಡ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಕಾಲ್ತುಳಿತ ಸಾರ್ವಜನಿಕರಿಗೆ ಮರೆತು ಹೋಗಿರಬಹುದು. ಆದರೆ, ಈ ಕಾಲ್ತುಳಿತಕ್ಕೆ ಸಿಲುಕಿದ ಒಂಬತ್ತು ವರ್ಷದ ಶ್ರೀ ತೇಜ್ಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ.
ಕಾಲ್ತುಳಿತದ ಘಟನೆಯಲ್ಲಿ ರೇವತಿ (32) ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಶ್ರೀ ತೇಜ್ ತೀವ್ರವಾಗಿ ಗಾಯಗೊಂಡು 56 ದಿನಗಳ ನಂತರವೂ ಆಸ್ಪತ್ರೆಯಲ್ಲಿಯೇ ಉಳಿದಿದ್ದಾರೆ. ಸಿಕಂದರಾಬಾದ್‌ನ ಕಿಮ್ಸ್‌ನಲ್ಲಿ ನಿರಂತರ ಚಿಕಿತ್ಸೆ ಮುಂದುವರೆದಿದ್ದು, ಇದೀಗ ಬಾಲಕನ ಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದೆ.
ಇನ್ನೂ ನೋಡಲು - ಮಾತನಾಡಲು ಸಾಧ್ಯವಾಗುತ್ತಿಲ್ಲ: ಕಾಲ್ತುಳಿತದ ನಂತರ ಪೊಲೀಸರು ಶ್ರೀ ತೇಜ್ ಅವರನ್ನು ಕಿಮ್ಸ್‌ಗೆ ಸೇರಿಸುವ ಮೊದಲು ಸಿಪಿಆರ್ ಮಾಡಿದ್ದರು. ಆರಂಭದಲ್ಲಿ ಬಾಲಕನನ್ನ ಐಸಿಯು ಘಟಕದಲ್ಲಿ ವೆಂಟಿಲೇಟರ್ನಲ್ಲೇ ಇರಿಸಲಾಗಿತ್ತು. ನಂತರ ಬಾಲಕನಿಗೆ ಸ್ವಯಂ ಉಸಿರಾಟ ಮಾಡಲು ಸಾಧ್ಯವಾದ ಬಳಿಕ ಪ್ರತ್ಯೇಕ ಕೋಣೆಗೆ ಸ್ಥಳಾಂತರಿಸಲಾಗಿತ್ತು.
ಅದಾಗ್ಯೂ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಅವನಿಗೆ ತನ್ನ ಕಣ್ಣುಗಳನ್ನು ತೆರೆಯಲು, ಮಾತನಾಡಲು ಹಾಗೂ ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ. ಸದ್ಯ ಬಾಲಕನಿಗೆ ನಾಸೊಗ್ಯಾಸ್ಟ್ರಿಕ್ ಟ್ಯೂಬ್ ಮೂಲಕ ಆಹಾರ ನೀಡಲಾಗುತ್ತಿದೆ.
ಈ ಬಗ್ಗೆ ವೈದ್ಯರಾದ ಡಾ. ಚೇತನ್ ಮತ್ತು ಡಾ. ವಿಷ್ಣುತೇಜ್ ಅವರು ಮಾತನಾಡಿ, ಬಾಲಕನ ನರಮಂಡಲದಲ್ಲಿ ಯಾವುದೇ ಮಹತ್ವದ ಪ್ರತಿಕ್ರಿಯೆ ಕಂಡುಬಂದಿಲ್ಲ. ಫಿಸಿಯೋಥೆರಪಿ ಮುಂದುವರೆದಿದೆ. ಆದರೆ, ಅವನ ಚೇತರಿಕೆಗೆ ಯಾವುದೇ ಸ್ಪಷ್ಟವಾದ ಟೈಮ್‌ಲೈನ್ ಇಲ್ಲ ಎಂದು ತಿಳಿಸಿದ್ದಾರೆ.
ಕಾಲ್ತುಳಿತ ಸಂಭವಿಸಿದ ರಾತ್ರಿ ಶ್ರೀ ತೇಜ್ ತಾತ್ಕಾಲಿಕವಾಗಿ ಉಸಿರಾಟ ನಿಲ್ಲಿಸಿದ್ದ. ನಂತರ ತ್ವರಿತ ಸಿಪಿಆರ್ ನೀಡಿದ್ದರಿಂದ ಬಾಲಕ ಪುನಶ್ಚೇತನಗೊಂಡಿದ್ದ. ಬಾಲಕನ ಚಿಕಿತ್ಸೆಗೆ ನೆರವಾಗಲು ಸರ್ಕಾರವೂ ಮುಂದಾಗಿದೆ. ಹಲವಾರು ಚಿತ್ರರಂಗದ ಗಣ್ಯರೂ ಕೂಡ ಧನ ಸಹಾಯ ಮಾಡಿದ್ದಾರೆ.
ಬಾಲಕನ ಚೇತರಿಕೆಗಾಗಿ ಕಾಯುತ್ತಿರುವ ಕುಟುಂಬ : ಒಂದು ಕಾಲದಲ್ಲಿ ಸಕ್ರಿಯ ಮತ್ತು ಹರ್ಷಚಿತ್ತದಿಂದ ಇದ್ದ ಬಾಲಕ ಈಗ ಹಾಸಿಗೆ ಹಿಡಿದಿದ್ದಾನೆ. ಶಾಲೆಗೆ ಮರಳಲು ಅಥವಾ ಮೊದಲಿನಂತೆ ನೃತ್ಯ ಮಾಡಲು ಬಾಲಕನಿಗೆ ಸಾಧ್ಯವಾಗುತ್ತಿಲ್ಲ. ಅವನು ಚೇತರಿಸಿಕೊಳ್ಳುವ ದಿನಕ್ಕಾಗಿ ಅವನ ತಂದೆ ಮತ್ತು ಸಹೋದರಿ ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ : ಸಂಧ್ಯಾ ಥಿಯೇಟರ್ ಕಾಲ್ತುಳಿತ: ಆಸ್ಪತ್ರೆಗೆ ತೆರಳಿ ಗಾಯಾಳು ಬಾಲಕನ ಆರೋಗ್ಯ ವಿಚಾರಿಸಿದ ಅಲ್ಲು ಅರ್ಜುನ್ - ALLU ARJUN