ETV Bharat / state

ಬೆಂಗಳೂರು: ಟೆರೇಸ್​ ಮೇಲಿಂದ ಜಾರಿ ಬಿದ್ದು, ಪತಿ ಕೈಯಲ್ಲಿ ನೇತಾಡಿದ ಮಹಿಳೆ! - Woman Slipped From Terrace - WOMAN SLIPPED FROM TERRACE

ಬೆಂಗಳೂರಿನ ಕನಕ ನಗರದ ಕಟ್ಟಡದ ಟೆರೇಸ್​ ಮೇಲಿಂದ ಮಹಿಳೆ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

a-woman-injured-after-slipped-from-the-terrace-in-bengaluru
ಟೆರೇಸ್​ನಿಂದ ಜಾರಿ ಬಿದ್ದ ಮಹಿಳೆ (ETV Bharat)
author img

By ETV Bharat Karnataka Team

Published : Jun 21, 2024, 9:38 PM IST

Updated : Jun 21, 2024, 10:32 PM IST

ಟೆರೇಸ್​ ಮೇಲಿಂದ ಜಾರಿ ಬಿದ್ದ ಮಹಿಳೆ (ETV Bharat)

ಬೆಂಗಳೂರು: ಕಟ್ಟಡದ ಟೆರೇಸ್ ಮೇಲಿನಿಂದ ಬಿದ್ದು ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕನಕ ನಗರದಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ನಡೆದಿರುವ ಘಟನೆಯಲ್ಲಿ ರುಬಾಯ್ (27) ಎಂಬಾಕೆ ಗಾಯಗೊಂಡಿದ್ದಾರೆ. ಘಟನೆಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಕಟ್ಟಡದ ಮೇಲೆ ಪತಿಯೊಂದಿಗೆ ನಿಂತಿದ್ದ ರುಬಾಯ್, ಆಕಸ್ಮಿಕವಾಗಿ ಸಾಬೂನಿನ ಮೇಲೆ ಕಾಲಿಟ್ಟು ಜಾರಿದ್ದಾರೆ. ತಕ್ಷಣ ಪತಿ ಕೈ ಹಿಡಿದು ರಕ್ಷಿಸಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಕೈ ಜಾರಿ ರುಬಾಯ್ ಕೆಳಗೆ ಬಿದ್ದರು.

ತೀವ್ರವಾಗಿ ಗಾಯಗೊಂಡಿರುವ ರುಬಾಯ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಕುರಿತು ಮಾಹಿತಿ ಕಲೆ ಹಾಕುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ರಾಯಚೂರಲ್ಲಿ ಮನೆ ತಾರಸಿ ಕುಸಿದು ಬಾಲಕ ಸಾವು.. ಸಾವಿನ ಮನೆಯಲ್ಲಿ ಮತ್ತೊಂದು ದುರಂತ

Last Updated : Jun 21, 2024, 10:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.