ಕಾರವಾರ: ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಇಂಡಿಯನ್ ಬ್ಯಾಂಕ್ ಎಟಿಎಂಗೆ ನುಗ್ಗಿದ ಮಾನಸಿಕ ಅಸ್ವಸ್ತನಂತಿರುವ ವ್ಯಕ್ತಿಯೋರ್ವ ಎಟಿಎಂ ಸೈರನ್ ಒಡೆದಿರುವ ಘಟನೆ ಇಂದು ಮುಂಜಾನೆ ನಡೆದಿದ್ದು, ತಕ್ಷಣ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಿನ ಜಾವ ಮೂರು ಗಂಟೆಯ ಸುಮಾರಿಗೆ ಎಟಿಎಂಗೆ ನುಗ್ಗಿದ ವ್ಯಕ್ತಿ ಸೈರನ್ ಒಡೆದಿದ್ದಾನೆ. ಬಳಿಕ ಬಾಗಿಲು ಆಟೋಮೆಟಿಕ್ ಆಗಿ ಲಾಕ್ ಆಗಿದೆ. ಸುಮಾರು ಐದು ಗಂಟೆಗೆ ಸಮೀಪದಲ್ಲಿರುವ ಎಸ್ಬಿಐ ಎಟಿಎಂನ ಸೆಕ್ಯುರಿಟಿ ಓರ್ವ ಆತನನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ನಗರ ಠಾಣೆ ಪೊಲೀಸರು, ಎಟಿಎಂ ಬಾಗಿಲು ತೆಗೆದು ವ್ಯಕ್ತಿಯನ್ನು ವಶಕ್ಕೆ ಪಡೆದರು. ಈತ ಹಾಸನ ಮೂಲದವನಾಗಿದ್ದು, ಮೈಮೇಲೆ ಅರೆಬರೆ ಬಟ್ಟೆ ಧರಿಸಿ ಮಾನಸಿಕ ಅಸ್ವಸ್ಥನಂತೆ ಕಂಡುಬಂದಿದ್ದಾನೆ.
ಎಟಿಎಂ ಯಂತ್ರಕ್ಕೆ ಯಾವುದೇ ಹಾನಿಯಾಗಿಲ್ಲ. ಅಲ್ಲದೇ ಹಣವೂ ಕಳ್ಳತನವಾಗಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರು: ಸಿಲಿಂಡರ್ ಬದಲಿಸುವಾಗ ಅಗ್ನಿ ಅವಘಡ; ಆಟೋ, ದ್ವಿಚಕ್ರ ವಾಹನ ಭಸ್ಮ - Bengaluru Fire Accident