ETV Bharat / state

ಹ್ಯಾರಿಸ್​ ಆಯ್ಕೆ ಅನೂರ್ಜಿತ ಕೋರಿ ಅರ್ಜಿ; ಈ ಅರ್ಜಿ ವಜಾಗೊಳಿಸಲು ಕೋರಿದ್ದ ಮನವಿ ತಿರಸ್ಕರಿಸಿದ ಹೈಕೋರ್ಟ್

author img

By ETV Bharat Karnataka Team

Published : Feb 22, 2024, 10:59 PM IST

ಹ್ಯಾರಿಸ್ ಆಯ್ಕೆ ಅನೂರ್ಜಿತವೆಂದು ಘೋಷಣೆ ಮಾಡಿ ತಮ್ಮನ್ನು ಶಾಸಕರನ್ನಾಗಿ ಪ್ರಕಟಿಸುವಂತೆ ಕೋರಿ ಪರಾಜಿತ ಅಭ್ಯರ್ಥಿ ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸುವಂತೆ ಹ್ಯಾರಿಸ್ ಸಲ್ಲಿಸಿದ್ದ ಮಧ್ಯಂತರ ಮನವಿಯನ್ನು ಹೈಕೋರ್ಟ್​ ತಿರಸ್ಕರಿಸಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು : ಶಾಂತಿನಗರ ಶಾಸಕ ಎನ್​ ಎ ಹ್ಯಾರಿಸ್​ ಅವರ ಆಯ್ಕೆ ಅನೂರ್ಜಿತವೆಂದು ಘೋಷಣೆ ಮಾಡಿ ತಮ್ಮನ್ನು ಶಾಸಕರನ್ನಾಗಿ ಪ್ರಕಟಿಸುವಂತೆ ಕೋರಿ ಪರಾಜಿತ ಅಭ್ಯರ್ಥಿ ಕೆ. ಶಿವಕುಮಾರ್ ಅರ್ಜಿ​ ಸಲ್ಲಿಸಿದ್ದರು. ಈ ಅರ್ಜಿ ವಜಾಗೊಳಿಸುವಂತೆ ಹ್ಯಾರಿಸ್​ ಸಲ್ಲಿಸಿದ್ದ ಮಧ್ಯಂತರ ಮನವಿಯನ್ನು ಹೈಕೋರ್ಟ್​ ತಿರಸ್ಕರಿಸಿದೆ.

ಕೆ. ಶಿವಕುಮಾರ್​ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಹೈಕೋರ್ಟ್​ ಈ ಆದೇಶದಿಂದಾಗಿ ಶಿವಕುಮಾರ್​ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ಮುಂದುವರೆಯಲಿದೆ.

ಅಲ್ಲದೆ, ಚುನಾವಣಾ ತಕರಾರು ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಹ್ಯಾರಿಸ್​ ಆಯ್ಕೆ ಅನೂರ್ಜಿತಗೊಳಿಸಬೇಕು ಮತ್ತು ತಮ್ಮನ್ನೇ ಶಾಸಕರು ಎಂದು ಘೋಷಣೆ ಮಾಡಬೇಕು ಕೋರಿದ್ದಾರೆ. ಆದರೆ, ಹ್ಯಾರಿಸ್​ ಅವರ ಆಯ್ಕೆ ಅನೂರ್ಜಿತ ಎಂದು ಘೋಷಿಸುವವರೆಗೂ ಪ್ರಕರಣ ವಿಚಾರಣೆ ಮುಂದುವರೆಯಬೇಕು. ಆದ್ದರಿಂದ ಚುನಾವಣಾ ತಕರಾರು ಅರ್ಜಿಯನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.

ಒಂದು ವೇಳೆ ಪ್ರತಿವಾದಿ 1(ಹ್ಯಾರಿಸ್​)ರವರ ಆಯ್ಕೆ ಅನೂರ್ಜಿತ ಎಂದು ಘೋಷಣೆ ಮಾಡಿದರೂ, ಅದೇ ಕಾರಣದಿಂದ ಅರ್ಜಿದಾರರು ಆಯ್ಕೆಯಾಗಿದ್ದಾರೆ ಎಂಬುದಾಗಿ ಘೋಷಣೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಅರ್ಜಿದಾರರ ಮನವಿಗೆ ಸಂಬಂಧಿಸಿದ ಆಧಾರಗಳು ಬೇಕಾಗಿದ್ದು, ಮಧ್ಯಂತರ ಅರ್ಜಿ ವಜಾಗೊಳಿಸುತ್ತಿರುವುದಾಗಿ ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು ? : ಶಾಂತಿ ನಗರ ಕ್ಷೇತ್ರದಿಂದ ಆಯ್ಕೆಯಾಗಿರುವ ಕಾಂಗ್ರೆಸ್​ನ ಎನ್​ ಎ ಹ್ಯಾರಿಸ್​ ಅವರು ಚುನಾವಣೆಗೆ ಸಲ್ಲಿಸಿದ್ದ ಪ್ರಮಾಣಪತ್ರ ಅಸಮರ್ಪಕವಾಗಿದೆ. ಆದ್ದರಿಂದ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು, ಜತೆಗೆ ತಮ್ಮನ್ನು ಶಾಂತಿನಗರ ಕ್ಷೇತ್ರದ ಶಾಸಕ ಎಂಬುದಾಗಿ ಘೋಷಣೆ ಮಾಡುವಂತೆ ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಕೆ. ಶಿವಕುಮಾರ್​ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಹ್ಯಾರಿಸ್​ ಮಧ್ಯಂತರ ಮನವಿ ಮಾಡಿದ್ದರು.

ಇದನ್ನೂ ಓದಿ : ಆಸ್ತಿ‌ ವಿವರ ಮುಚ್ಚಿಟ್ಟ ಆರೋಪ: ಹ್ಯಾರಿಸ್ ಮಧ್ಯಂತರ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.