ETV Bharat / state

ಆಂಬ್ಯುಲೆನ್ಸ್​​ಗೆ ಡಿಕ್ಕಿ ಹೊಡೆದ ಬೈಕ್: ಸ್ಥಳದಲ್ಲೇ ಸಾವನ್ನಪ್ಪಿದ ಮೂವರು - 3 Died in Shivamogga Accident

ಶಿಕಾರಿಪುರದ ಮೂಲಕ ಮಾಸೂರು ಗ್ರಾಮಕ್ಕೆ ತೆರಳುತ್ತಿದ್ದ ಆಂಬ್ಯುಲೆನ್ಸ್​​ಗೆ ಬೈಕ್ ಡಿಕ್ಕಿ ಹೊಡೆದಿದ್ದು, ಮೂವರು ಸಾವನ್ನಪ್ಪಿದ್ದಾರೆ.

author img

By ETV Bharat Karnataka Team

Published : Jun 29, 2024, 9:57 AM IST

Shikaripura Rural Police Station
ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ (ETV Bharat)

ಶಿವಮೊಗ್ಗ: ಆಂಬ್ಯುಲೆನ್ಸ್​ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್​​​ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗದಿಂದ ಶಿಕಾರಿಪುರದ ಮೂಲಕ ಮಾಸೂರು ಗ್ರಾಮಕ್ಕೆ ತೆರಳುತ್ತಿದ್ದ ಆಂಬ್ಯುಲೆನ್ಸ್​​ಗೆ ಬೈಕ್ ಡಿಕ್ಕಿ ಹೊಡೆದಿದೆ.

ಬೈಕ್ ಸವಾರರನ್ನು ದಾವಣಗೆರೆ ಜಿಲ್ಲೆಯ ಹಳೇ ಜೋಗದ ನಿವಾಸಿಗಳಾದ ಪ್ರಸನ್ನ (34), ಕಾರ್ತಿಕ್ (24) ಹಾಗೂ ಅರುಣ್ ಕುಮಾರ್ (26) ಎಂದು ಗುರುತಿಸಲಾಗಿದೆ. ಮೃತರು ಶಿಕಾರಿಪುರದಿಂದ ಹಳೇ ಜೋಗಕ್ಕೆ ಬರುತ್ತಿದ್ದರು. ರಾತ್ರಿ 1 ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ.

ಮಳೆ ಸಣ್ಣದಾಗಿ ಬರುತ್ತಿತ್ತು. ಇದರಿಂದ ಅಪಘಾತ ಸಂಭವಿಸಿರಬಹುದು ಎನ್ನಲಾಗಿದೆ. ಅಪಘಾತದ ರಭಸಕ್ಕೆ ಆಂಬ್ಯುಲೆನ್ಸ್ ಹಾಗೂ ಬೈಕ್ ರಸ್ತೆ ಪಕ್ಕ ಜರುಗಿ ನಿಂತಿವೆ‌. ಇದರಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಬಂದ ಶಿಕಾರಿಪುರ ಗ್ರಾಮಾಂತರ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಿಸಿದ್ದಾರೆ. ಅಪಘಾತದ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದಾವಣಗೆರೆಯ ಹೆಬ್ಬಾಳದಲ್ಲಿ ನೊಣಗಳ ಉಪಟಳ; ನಿಯಂತ್ರಿಸದಿದ್ದರೆ ಪೌಲ್ಟ್ರಿಗಳು ಬಂದ್: ಜಿಲ್ಲಾ.ಪಂ ಸಿಇಒ ಎಚ್ಚರಿಕೆ - Fly insects Problem in Davanagere

ETV Bharat Logo

Copyright © 2024 Ushodaya Enterprises Pvt. Ltd., All Rights Reserved.