ETV Bharat / state

ಹಳ್ಳಿಯ ವೈದಿಕರಿಗೆ, ಅಡುಗೆ ಮಾಡುವವರಿಗೆ ಹೆಣ್ಣು ಕೊಡುವವರಿಲ್ಲ: ಸರಸ್ವತೀ ಮಹಾ ಸ್ವಾಮೀಜಿ ಕಳವಳ - HAVYAKA SAMMELANA 2024

ದಂಪತಿಗಳಿಗೆ ಮಾರ್ಗದರ್ಶನದ ಅವಶ್ಯಕತೆ ಇದ್ದು, ವಿವಾಹ ವಿಚ್ಛೇದನ ಆಗದಂತೆ ಹಾಗೂ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಲು ಮಾರ್ಗದರ್ಶಕ ಶಿಬಿರಗಳ ಅವಶ್ಯಕತೆ ಇದೆ ಎಂದು ಶ್ರೀಗಳು ಹೇಳಿದ್ದಾರೆ.

HAVYAKA SAMMELANA 2024
ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಸ್ವಾಮೀಜಿಗಳ ಆಶೀರ್ವಚನ (ETV Bharat)
author img

By ETV Bharat Karnataka Team

Published : Dec 30, 2024, 7:09 AM IST

ಬೆಂಗಳೂರು: ಆಧುನಿಕತೆಯ ಆಡಂಬರಗಳ ಭರಾಟೆಯಲ್ಲಿ ಶಾಸ್ತ್ರೋಕ್ತ ವಿಧಾನಗಳು ಮೂಲೆಗುಂಪಾಗಿವೆ ಎಂದು ಸ್ವರ್ಣವಲ್ಲೀ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.

ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜನಸಂಖ್ಯೆಯ ತೀವ್ರ ಹಿನ್ನಡೆ, ನೈತಿಕತೆ ಪತನ, ಸಂಸ್ಕೃತಿ ಕ್ಷೀಣವಾಗುವಿಕೆ ಮುಂತಾದ ದುಷ್ಪರಿಣಾಮಗಳು ಹವ್ಯಕ ಸಮಯದಾಯದ ಮೇಲೆ ಪರಿಣಾಮ ಬೀರಿವೆ. ಹವ್ಯಕ ಸಮಾಜ ಸುಟ್ಟ ಮನೆಯಂತೆ ಕಾಣುತ್ತಿದೆ. ವಿವಾಹದ ಸಮಸ್ಯೆೆ ಗಾಢವಾಗಿ ಕಾಡುತ್ತಿದ್ದು, ಯುವಕ - ಯುವತಿಯರೇ ಮದುವೆಯಾಗಲು ಮುಂದಾಗುತ್ತಿಲ್ಲ. ಹಳ್ಳಿಯ ವೈದಿಕರಿಗೆ, ಅಡುಗೆ ಮಾಡುವವರಿಗೆ ಹೆಣ್ಣು ಕೊಡುವವರಿಲ್ಲ. ಅಧರ್ಮ ಮಾರ್ಗದಲ್ಲಿ ಹೋಗಿ ಯುವಕರು ಆರೋಗ್ಯ ಸಮಸ್ಯೆೆಗಳಿಗೆ ಆಹ್ವಾನ ತಂದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Swamiji's Blessings In The World Third Havyaka Sammelana
ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಶ್ರೀಗಳ ಆಶೀರ್ವಚನ (ETV Bharat)

ತಾಯಿ - ತಂದೆಯರು ಮಕ್ಕಳಿಗೆ ವಯಸ್ಸಾದ ಮೇಲೆ ಮದುವೆ ಮಾಡಲು ಆಲೋಚಿಸುತ್ತಾರೆ. ವಯಸ್ಸಾದ ಮೇಲೆ ಮದುವೆ ಮಾಡಲು ಪರಿತಪಿಸುತ್ತಾರೆ. ಇಂದು ಹೆಚ್ಚುತ್ತಿರುವ ವಿವಾಹ ವಿಚ್ಛೇದನಗಳು, ಕಾನೂನಿನಲ್ಲಿ ವಿವಾಹ ವಿಚ್ಛೇದನಕ್ಕೆೆ ವಿಪುಲ ಅವಕಾಶಗಳಿರುವುದರಿಂದ ಹವ್ಯಕ ಸಮಯದಾಯದ ಸಂಖ್ಯೆೆ ಕ್ಷೀಣಿಸುತ್ತಿದೆ. ಧರ್ಮ ಪ್ರಜ್ಞೆ ಇಲ್ಲದೇ ಆಧುನಿಕ ವಿಜ್ಞಾನ ಅಳವಡಿಸಿಕೊಂಡಿರುವುದರಿಂದ ಅನೇಕ ಅನರ್ಥಗಳಾಗುತ್ತಿವೆ. ಹವ್ಯಕ ಸಮುದಾಯ ಬ್ರಾಹ್ಮಣರಾಗಿಯೇ ಉಳಿಯಬೇಕು ಎಂದು ಹೇಳಿದರು.

ದಂಪತಿಗಳಿಗೆ ಮಾರ್ಗದರ್ಶನದ ಅವಶ್ಯಕತೆ ಇದೆ: ಹವ್ಯಕ ಸಮುದಾಯದಲ್ಲಿ ಸೂಕ್ತ ವಯಸ್ಸಿಗೆ ಶಾಸ್ತ್ರೀಯ ವಿವಾಹ ಮಾಡಿಕೊಳ್ಳಬೇಕು ಎಂದ ಸ್ವಾಮೀಜಿಗಳು, ಯಾರಿಗೆ ಯಾರೊಡನೆ ವಿವಾಹ ಮಾಡಬೇಕು ಎಂಬುದರ ಬಗ್ಗೆೆ ಶಾಸ್ತ್ರಗಳಲ್ಲಿ ವೈಜ್ಞಾನಿಕ ವಿಧಾನಗಳಿವೆ. ಶಾಸ್ತ್ರೋಕ್ತ ವಿಧಿವಿಧಾನದಂತೆ ವಿವಾಹ ಮಾಡಬೇಕು. ಈ ಹಿನ್ನೆಲೆ ದಂಪತಿಗಳಿಗೆ ಮಾರ್ಗದರ್ಶನದ ಅವಶ್ಯಕತೆ ಇದೆ. ವಿವಾಹ ವಿಚ್ಛೇದನ ಆಗದಂತೆ, ಒಳ್ಳೆೆಯ ಸಂತತಿ ಪಡೆಯಲು ತಿಳಿಯಲು, ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಲು ದಂಪತಿಗಳಿಗೆ ಮಾರ್ಗದರ್ಶಕ ಶಿಬಿರ ಆಯೋಜಿಸಬೇಕು ಎಂದರು.

ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪಾಲ್ಗೊಂಡ ಜನಸ್ತೋಮ (ETV Bharat)

ತಮಿಳು ಬ್ರಾಹ್ಮಣರಲ್ಲಿ ಸಂಸ್ಕಾರದ ಪತನ, ಜನಸಂಖ್ಯೆೆ ನಮ್ಮಲ್ಲಿದ್ದಷ್ಟು ಇಲ್ಲ. ಹವ್ಯಕ ಪೋಷಕರಿಗೆ ಕನಿಷ್ಠ ಮೂರಾದರೂ ಮಕ್ಕಳಿರಲಿ. ಮೂರಕ್ಕು ಹೆಚ್ಚು ಮಕ್ಕಳಿದ್ದರೆ ಪೋಷಣೆಗೆ ಸ್ವರ್ಣವಲ್ಲಿ ಮಠಕ್ಕೆೆ ನೀಡಿ. ಕುಮಾರಿ ಸಂಸ್ಕೃತಿ ಶಿಬಿರದ ಮೂಲಕ ಪ್ರೌಢ ವಯಸ್ಸಿನಲ್ಲಿರುವ ಹೆಣ್ಣು ಮಕ್ಕಳಿಗೆ ಧರ್ಮ ಸಂಸ್ಕೃತಿಯ ಅರಿವು ಮೂಡಿಸಲಾಗುತ್ತದೆ. ಹವ್ಯಕ ಸಮಾಜದ ವಧುಕ್ಷಮದ ಬಗ್ಗೆೆ ತಿಳಿಸಲಾಗುತ್ತದೆ. ಈ ಶಿಬಿರ 15 ದಿನ ನಡೆಯುತ್ತದೆ. ಶಿಬಿರದಲ್ಲಿ ಮಹಿಳೆಯರು ಹವ್ಯಕ ಸಮುದಾಯದವರನ್ನೇ ಮದುವೆಯಾಗುವುದಾಗಿ ಪ್ರತಿಜ್ಞೆೆ ಮಾಡುತ್ತಾರೆ. ದಾರಿತಪ್ಪಿ ಹೋಗುತ್ತಿರುವ ಹೆಣ್ಣುಮಕ್ಕಳ ಮನಪರಿವರ್ತನೆ ಮಾಡುವ ಕಾರ್ಯ ಹವ್ಯಕ ಜಾಗೃತಿ ಪಡೆ ಮಾಡುತ್ತಿದೆ ಎಂದು ತಿಳಿಸಿದರು.

ಹವ್ಯಕ ಎಂದರೇನು?: ಹವ್ಯಕ ಎಂದರೆ ಬೆಳಕನ್ನು ಕಂಡುಕೊಂಡು, ಹಸನಾದ ಜೀವನ ನಡೆಸಿ ಪರಿಶುದ್ಧ ಬಾಳ್ವೆೆ ಹಾಗೂ ಹಸನ್ಮುಖದಿಂದ ನಿತ್ಯ ಬೆಳಗುವ ಹಣತೆಯಂತೆ ಜ್ಞಾನ ದೀಪವಾಗಿ ಹರಿಬ್ರಹ್ಮಾಧಿಗಳ ದೀಪ ಬೆಳಗಿ ಹಸಿರು ಕ್ರಾಂತಿಯ ಹರಿಕಾರರು ಎಂದರ್ಥವಾಗಿದೆ. ಹವ್ಯಕ ಸಮಾಜ ವ್ಯಸನ ವ್ಯಾಜ್ಯ ಮುಕ್ತ ಪರಿಶುದ್ಧ ಜೀವನದ ಆದರ್ಶದೊಂದಿಗೆ ವ್ಯವಸಾಯದ ವೃತ್ತಿಯಿಂದ ಪರಿಪೂರ್ಣವಾದ ಸಾಧನೆ ಮಾಡಿದೆ ಎಂದು ಬೆಂಗಳೂರಿನ ರಾಮಕೃಷ್ಣ ವಿವೇಕಾನಂದ ಮಠದ ಚಂದ್ರೀಶ್ ಆನಂದ್ ಜೀ ಮಹರಾಜ್ ನುಡಿದರು.

ಧರ್ಮಗಳ ಪಾಲನೆ ಮಾಡಲು ಹಳ್ಳಿಗಳಲ್ಲಿ ಮಾತ್ರ ಸಾಧ್ಯವಿದೆ. ಕೃಷಿಯೇ ಹವ್ಯಕ ಉಸಿರಾಗಿದೆ. ಹ್ಯವಕರು ಪಂಚಕೃಷಿ, ಪಂಚ ದೇವತಾರಾಧನೆ ಮಾಡಿಕೊಂಡು ಬಂದಿದ್ದಾರೆ. ಹವ್ಯಕ ಸಮುದಾಯಲ್ಲಿನ ಸಮಸ್ಯೆೆಗಳನ್ನು ಪರಿಹಾರ ಕಂಡುಕೊಳ್ಳಲು ಸಮ್ಮೇಳನಗಳು ಪೂರಕವಾಗಿವೆ. ನಮ್ಮ ಸಂಪ್ರದಾಯಗಳನ್ನು ಮುನ್ನಡೆಸಿಕೊಂಡುವ ಜವಾಬ್ದಾರಿ ಹವ್ಯಕರು ಮರೆಯಬಾರದು ಎಂದು ಶ್ರೀ ಸ್ವರ್ಣವಲ್ಲೀ ಮಠದ ಆನಂದಬೋಧೇಂದ್ರ ಸರಸ್ವತಿ ಸ್ವಾಮೀಜಿ ಕರೆ ನೀಡಿದರು.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ವೈಕುಂಠ ದರ್ಶನ ಟಿಕೆಟ್​: ಜನವರಿಯಲ್ಲಿ ಸರ್ವ ದರ್ಶನ ಟೋಕನ್‌ ವಿತರಣೆ - TIRUMALA SARVA DARSHAN TOKENS

ETV Bharat Logo

Copyright © 2025 Ushodaya Enterprises Pvt. Ltd., All Rights Reserved.